Home / Ammembala Shankara Narayana

Browsing Tag: Ammembala Shankara Narayana

(ಹೆಂಡತಿಯ ಮಾತು) “ನಿಮ್ಮ ಕೈಯನ್ನು ಹಿಡಿದು, ಮೂರು ಸುಗ್ಗಿಯು ಮಾಗಿ, ನಾಲ್ಕನೆಯದಿದು ತಲೆಯ ಹೊರ ಹಾಕಿತಲ್ಲಾ? ಚಕ್ರ ನೇಮಿ ಕ್ರಮದಿ ಹಗಲಿರುಳು ತಿರುತಿರುಗಿ ಮಾಸ-ವರ್ಷಗಳಲ್ಲಿ ಪರಿಣಮಿಪುದಲ್ಲಾ? ಆಚೆ ಮನೆ ಕಸ್ತೂರಿ, ನೆರೆಮನೆಯ ಸಿಂಗಾರಿ, ಓ...

ಪಲ್ಲವಿ ಕೋಪವೇತಕೆ ಮಾನಿನಿ? ಹುಸಿಮುನಿಸ ನನ್ನಲಿ ನೀಗು ನೀ! ೧ ಜೀವನವೆಂಬುದು ಜೀವನ ಕೈಲಿಲ್ಲ; ನಶ್ವರವಾಗಿದೆ ವಿಶ್ವದಲಿ ಇ೦ದೋ ನಾಳೆಯೋ ಎಂಬುದು ತಿಳಿದಿಲ್ಲ ಬಾಳ್‌ಗುಳ್ಳೆ ಸಿಡಿವುದು ದಿಟವಿಲ್ಲಿ ೨ ಹೀಗಿರಲೇಕಾಗಿ ನಮ್ಮಿಬ್ಬರೆದೆಯಿದು ಏಕತೆಯನು ಬಿ...

ಇಂದು ಬರುವಳು ನನ್ನ ಮನದನ್ನೆ, ಮಾನಸಕೆ ಸಂತೋಷ ಸಂಭ್ರಮೋತ್ಸಾಹ ಸುರಿಸಿ, ಒ೦ದು ತಿ೦ಗಳಗಾಧ ವಿರಹ ಸಾಗರವನ್ನು ದಾಟಿಪಳು ಸಗ್ಗದೀವಿಯನೊದವಿಸಿ ಎಲ್ಲಿ ನೋಡಿದರಲ್ಲಿ ನಲವಿನೈಸಿರಿಯೇರಿ, ಒಲವಿನೊಸಗೆಯ ಕುಣಿತ ಕಣ್ಣ ಮುಂದೆ:- ಉದಯ ಭಾಸ್ಕರನಿಂದು ರಾಗ ರಕ್...

೩೮ ನಲ್ಲೆಯ ನೆನಪು ಪಲ್ಲವಿ ನಲ್ಲೆ! ಎಂದೈತರುವಿಯೊ? ಬಗೆಗೆ ಸೊಗವನ್ನೀವೆಯೊ? ೧ ಯಾವ ಕಜ್ಜನ ಗೈಯ ಹೋದರು ನಿನ್ನ ನೆನಪೇ ಸುಳಿವುದು ಅಚ್ಚುಗಟ್ಟಿನೊಳಾವ ಕಾರ್ಯವ- ನೆಸಗಲಿಚ್ಛೆಯೆ ಬಾರದು ೨ ಪ್ರಕೃತಿ ರ೦ಗದೊಳೆಲ್ಲಿ ನೋಡಲು ನಿನ್ನ ನೆನಪಿದೆ ನಲ್ಲೆಯೆ! ...

೧ ಜೌವನದ ಬಟ್ಟಲಲಿ ಪ್ರೇಮ ಸುಧೆಯನ್ನೆರೆದು ಕುಡಿಸುತಿಹ ನನ್ನಾಕೆಯಿರೆ, ಸಗ್ಗವೇಕೆ? ಜೀವ ಮಧುಕರನವಳ ಮುಖ ಕಮಲದಿ೦ದೊಲಿದು ಸೌಂದರ್ಯ ಮಧುವೀಂಟುತಿರೆ ಬೊಮ್ಮ ಬೇಕೇ? ೨ ಎತ್ತ ನೋಡಿದರತ್ತವಳ ಮೊಗ ಚಂದಿರನು ಮುಗಳನಗು ಬೆಳದಿಂಗಳೆರೆಯುತಿರುವಂತೆ ಚಿತ್ತ ಭ...

೧ ನಾನು ಕ೦ಡಿರುವ ಚೆಲು ಬಾಲೆಯರ ಸೌಂದರ್ಯ ಸಾರ ಸರ್ವಸ್ವದಂತಿವಳೆಸೆಯುತಿಹಳು ಕಣ್-ಮನಕೆ ಸ್ನೇಹರಸದೊಸರ ಸೇಚಿಸುತಿವಳು ತಂಗದಿರನಂತೆ ತಂಪೀಯುತಿಹಳು ೨ ಇವಳ ಕಡೆಗಣ್ಣೋಟದಲ್ಲಿ ಮಿಂಚಿನ ಚಂಚ- ಲೇಕ್ಷಣವು ಮನೆ ಮಾಡಿ ಕೊಂಡಿರುವುದು ಇವಳ ಮಂದಸ್ಮಿತದಿ ಪ್ರ...

೧ ಸ೦ಜೆಯಾಯಿತು; ರಾಗವಾಗಸವನಾವರಿಸಿ ರ೦ಜಿಸಿದ ತೆರದಲ್ಲಿ, ನನ್ನೆದೆಯಲಿ ಅನುರಾಗವಿಡಿದಿಹುದು ತಿಳಿಯಲಾರೆಯ ನೀನು? ಮನವು ತವಕಿಸುತಿಹುದು ಬರಲಾರೆಯ? ೨ ನಿಮಿಷಗಳು ನಿಮಿಷಗಳು ಕಾಲನಾಳದೊಳಿಳಿದು, ಸಮವಾಗಿ ಸರಿಯುತಿವೆ ನಿನ್ನ ಸೇರುವೆಯು ಸಮನಿಸದೆ ಸಮಯವ...

೧ ಸತ್ತವರ ಬದುಕಿಸಲು ನಾವರಿಯದಿರುವಾಗ ಜೀವಿಪರ ಕೈಯಾರೆ ಕೊಲ್ಲುವುದು ತಪ್ಪು ವಿಶ್ವದ ಸಮಸ್ತ ಮಾನವರೊ೦ದೆ ಜಾತಿಯಿಹ- ರಂತರದ ಕಲ್ಪನೆಯ, ಬರೆ ಮೌಢ್ಯ-ಬೆಪ್ಪು! ೨ ದಯೆಯೆ ಧರ್ಮದ ಮೂಲ, ಹಿಂಸೆಯೆಂದರೆ ಪಾಪ ಇದ್ದಷ್ಟು ಸಂತೃಪ್ತಿ, ಮಾನವ ಪ್ರೇಮ- ಇವೆ ಸತ...

ಪರಿವರ್ಧಿನಿ ೧ ಎ೦ದಾಗುವುದೋ ಧರ್ಮಗ್ಲಾನಿಯು, ಮುಂದಾಗುವುದೆಂದೋ ದುರ್ನೀತಿಯು, ಅಂದೇ ತಪ್ಪದೆ ತಾನವತಾರವ- ನೆಸಗುವನಿವನಾರೇ? ಸಂದಾ ದುಷ್ಟರ ಭಾರವ ಸಹಿಸದೆ, ಬಂದಡಿವಿಡಿ ದಿಹ ಭೂವನಿತೆಯ ಬಗೆ- ದಂದುಗವಟ್ಟಲು ಮಾನಿಸವುಟ್ಟೊಳು ಪುಟ್ಟಿದನಿವನಾರೇ? ೨ ಶ...

೧ ಬಳಿಯ ಮರದ ತಲದಿ ನೀಲ ಕಾಯ ಕೃಷ್ಣನು ಕೊಳಲ ಕರದಿ ಪಿಡಿದು ನಿಂತು ಸುತ್ತ ನೋಳ್ಪನು ಪಶ್ಚಿಮದ ದಿಗ೦ತದಲ್ಲಿ, ರವಿಯು ಕಡಲ ನೀರಿನಲ್ಲಿ ತನ್ನ ನೆಳಲನಿಣಿಕೆ ನೋಡಿ ಇಳಿಯುತಿದ್ದನು ೨ ರವಿಯು, ತನ್ನ ಶುದ್ಧ ವಾದ ಮಿಸುನಿ ಬಣ್ಣದ ಕದಿರಿನಿಂದ ಹರಿಯ ಮೈಯೊಳ...

123...5

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...