ಸರುನಡುವೆ ಗೆಲುಮೊಗದಿ ನೈದಿಲೆಯು ಮೆರೆದಿತ್ತು,
ಪರಿಮಳದ ಸವಿಸಾರ ಸರುವಿನಲ್ಲಿ ಬೆರೆಸಿತ್ತು;
ಬಿಳಿಮುಗಿಲು ಗಗನದಲಿ ಕೂಡಿತ್ತು ಗೆಲುವಿನಲಿ,
ಸುಳಿಗಾಳಿ ತೆರೆಯಲ್ಲಿ ಮೂಡಿತ್ತು ಬಯಲಿನಲಿ;
ಶುಕಪಿಕವು ಉಲ್ಲಾಸದಲಿ ರಂಜಿಸಿತು ಎಡೆಯಲ್ಲಿ,
ಏಕದಲಿ ಸಂಪಿಗೆಯು ಸೂಸಿತ್ತು ಮಿಗೆಯಲ್ಲಿ;
ಸರುಅಲೆಯು ಅಲುಗಾಡಿ ಹಾಯ್ದಿತ್ತು ಮುಂದಾಗಿ,
ಸರಿಸರಿದು ತೂಗಾಡಿ ನೈದಿಲೆಯ ಹಿಂದಾಗಿ;
ಹೂಡಿತ್ತು ದೋಣಿಯು ದೂರದೆಡೆಸರಿದು,
ಅಲೆಅಲೆಯ ತಗುಲಾಟ ತಾಳಕ್ಕೆ ಹರಿದು;
ಕೋಲ್ಮಿಂಚು ಕೂಟದಲಿ ತೋರಿತ್ತು ಮಂಡಲದಿ,
ನಲ್ಮೆಯಲಿ ಮಿಂಚಿತ್ತು ನೈದಿಲೆಯು ರಂಜನದಿ;
ಸರುದೋಣಿ ಓಟದಲಿ ಹೂಡಿತ್ತು ಹೊಸದಾರಿ,
ಗೊಂಚಲಿನ ಅಂಚಿನಲಿ ಸಾರಿತ್ತು ಸರುಹಾದಿ.
*****









