ಮನವನ್ನು ಮನೆಬಿಟ್ಟು ಕಳಿಸಬೇಕೆಂದು ಒಮ್ಮೆ ನಿರ್ಧರಿಸಿದೆ. ಕಿಡಕಿ, ಬಾಗಿಲು ತೆರೆದೆ. ಗವಾಕ್ಷಿ ತೆರೆದೆ. ಹೊಸಿಲ ಕಿತ್ತೆಸೆದೆ. ಹೊರ ಬಾಗಿಲ, ಹಿತ್ತಲ ಬಾಗಿಲ ತೆರೆದೆ. ಗೋಡೆಗಳ ಬೀಳಿಸಿದೆ. ಛಾವಣಿ ಕಿತ್ತೆಸೆದೆ. ಮನೆಯ ಮುಂದೆ, ಹಿಂದೆ ಬಿಟ್ಟ ಬೇರುಗಳ ಕಿತ್ತೆಸೆದ. ಉಟ್ಟ ಬಟ್ಟೆ, ತೊಟ್ಟ ಆಭರಣ ಎಲ್ಲವನ್ನೂ ತೊರ...

ವ್ಯಕ್ತಿಯಲ್ಲವು ಗಾರ್ಕಿ! ಆದು ಮಹತ್ತಮ ಶಕ್ತಿ! ಅವ್ಯಕ್ತದನುಭೂತಿ ತಾನೆ ಮೈವೆತ್ತಂತೆ ಭವ್ಯಾತ್ಮನುಸಿರೆ ಘನ ಸಂಗೀತವಾದಂತೆ ಮುಕ್ತ ಮನ ಮೈದುಂಬಿ ತನ್ನ ಮೈ ಮರೆತಂತೆ ಭವ್ಯತೆಯ ಭಾವನಾ ಲಹರಿ ಚಿಗುರೊಡೆದಂತೆ ವ್ಯಕ್ತ ವೇಷದಿ ಸುಪ್ತ ಸಾಮರ್ಥ್ಯಕಿದು ಯು...

ಗಾನ, ಮೆಲುಪಿನ  ಕೊರಲು ಕುಗ್ಗಲು, ಹೊಳಲು ಕೊಡುವುದು ಮನದೊಳು, ಕಂಪು, ಮೊಲ್ಲೆಯ ಸೊಂಪು ಸೊರಗಲು, ತಿಳಿದ ಕರಣದೊಳುಳಿವುದು. ಕಳಚಿದೆಸಳು, ಗುಲಾಬಿ ಕಂದಲು, ತಳಿವುದಿನಿಯಳ ಶಯನವ. ನಿನ್ನ ಬಗೆಗಳೊ-ನೀನು ಹೋಗಲು, ಒರಗಿ, ಒಲುಮೆಯ ಬಗೆವುದು. ***** SHE...

ಒ೦ದೂರಿನಲ್ಲಿ ಒಬ್ಬ ಚಂದ್ರನೆಂಬ ಅರಸನಿದ್ದನು. ಅವನ ಮಕ್ಕಳಿಗೆ ಕಪಿಗಳೊಡನೆ ಆಟವಾಡುವುದು ಎಂದರೆ ಬಹಳ ಆಶೆ. ಅದರಿಂದ ಆ ರಾಜಪುತ್ರರು ಆ ಕಪಿಗಳಿಗೆ ಬೇಕಾದ ತಿಂಡಿಗಳನ್ನು ಕೊಡುತ್ತಿದ್ದರು. ಆ ಅರಮನೆಯಲ್ಲಿಯೇ ಎಳೆಯ ಮಕ್ಕಳ ಗಾಡಿಗೆ ಕಟ್ಟುವುದಕ್ಕೆಂದು...

ಪ್ರಕೃತಿಯಾ ಮಡಿಲಿನಲಿ ಕಡಲಿನೀ ತಡಿಯಲ್ಲಿ ಎಲ್ಲ ಇದೆ! ಮನಕಿಂದು ಶಾಂತಿಯೊಂದಿಲ್ಲ ॥ ಪಲ್ಲವಿ ॥ ತುಂಬು ಚಂದಿರನು ಬಹನೆನುತ ಸಾರಿಸಿದಂತೆ ಗಗನದಂಗಣವಿಂದು ಅತಿಶುಭ್ರ ನೀಲ! ಮುಗಿಲುಕಡಲುಗಳೊಳಗೆ ಬಿಂಬ ಪ್ರತಿಬಿಂಬಗಳು ಆವುದೋ! ಒಡೆಯಲಿಕಭೇದ್ಯವೀ ಜಾಲ! ...

ಮಾನಾಪಮಾನವನು ತೊರೆದು ಬಂದೆನು ನಲ್ಲೆ ಏನಾದರೇನೆನಗೆ ನೀನೆ ಗತಿ ನಾ ಬಲ್ಲೆ ನೀನೊಲಿದು ಮುದ ಬೀರೆ, ನಿನ್ನ ನಗೆ ಮೊಗದೋರೆ, ನಾನಹುದು ನಿನ್ನ ಬಗೆ ಮುಗಿಲೊಳಿಹ ಧೃವತಾರೆ. ಎನ್ನಂತರಂಗದಲಿ ನೀನೆ ನರ್ತಿಸುತಿರುವೆ ನಿನ್ನ ಪ್ರತಿಬಿಂಬ ನಾನಂತೆ ವರ್ತುಸುತ...

ಮರುಗುವೆಯ ನೀ ಗೆಳೆಯ ನಮ್ಮ ನಾಡಿನ ಪರಿಗೆ: ಜನವಿದಭಿಮಾನಕೃಪಣಮಸೂಯಾಭೂಯಿಷ್ಠ- ಮನುಕರಣಪಟು ನಟನಶೀಲಮನವಸ್ಥಿತಂ ಸಿರಿಯೊ ತಂದ್ರೋಪಹತಮುಚ್ಛಿಷ್ಟಭೋಗಿಮನ- ಮಸುರಲೋಭೋತ್ಸೃಷ್ಟವಿಜ್ಞಾನಯಂತ್ರಮದ- ವಾರಣಾವಿಷ್ಟ ನಾಗರಿಕ ನಿಸ್ವಾದು ನಿ- ಸ್ಸಾರಜೀವನಂ ಸ್ವಲ...

ಮುದವೇ ವಿಮಲಾ ಬಾಳುವೆಬೆಲ್ಲಾ ಇದುವೇ ಪಲ್ಲನ ಹಾಡಿನ ಪಲ್ಲಾ || ಪಲ್ಲ || ೧ ನೀನು ಬೆಲ್ಲಾ ನೀನೇ ಬೆಲ್ಲಾ! ನಿನ್ನ ಪಲ್ಲಾಕಾಕಾನು ಬೆಲ್ಲಾ ನೀನೂ ಬೆಲ್ಲಾ ನಾನೂ ಬೆಲ್ಲಾ ಬೆಲ್ಲಾ ಬೆಲ್ಲಾ ಎಲ್ಲಾ ಬೆಲ್ಲಾ! ೨ ನಮ್ಮ ವಿಮಲನ ಸಕ್ಕರಿ-ಕೈಗೆ ಒಂದು &#8220...

ಎಲ್ಲ ಕೆಲಸಗಳನ್ನು ಬಿಟ್ಟು, ವಿರಾಮದಿಂದ ಬಿಡುವು ಮಾಡಿಕೊಂಡು ಈಗಲೇ ಪತ್ರ ಬರೆಯಬೇಕಾಗಿದೆ ನಿನಗೆ. ನಾನಿಂದು ಏನನ್ನು ನೋಡಿದೆನೋ ಯಾವ ಯಾವ ಭಾವನೆಗಳು ನನ್ನನ್ನು ಅಳುವಂತೆ ಮಾಡಿಸಿದವೋ ಅವೆಲ್ಲವನ್ನೂ ತಿಳಿಸಿಬಿಡಬೇಕೆಂದು ಅವಸರವಸರವಾಗಿ ಪತ್ರ ಬರೆಯು...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...