Home / ಕವನ / ಕವಿತೆ / ವಿದ್ಯಾರಣ್ಯ

ವಿದ್ಯಾರಣ್ಯ

ಪರಶಿವನು ವರತಪವನೆಸಗಿದನು ವನದಲ್ಲಿ
ಗಿರಿಕನ್ಯೆ ಪಾರ್ವತಿಯ ಶುಶ್ರೂಷೆಯಲ್ಲಿ!
ಚಿರಕಾಲ ಸಾಗದೆಯೆ ಮನಸೋತ ವನಿತೆಯಲಿ
ಜಗವ ಮುಳುಗಿಸಿದ ಬೆಂಕಿ ಬೇಗುದಿಯಲ್ಲಿ ೧

ಯತಿಯೆ! ವಿದ್ಯಾರಣ್ಯ! ಕುಳಿತಿರುವೆ ತಪದಲ್ಲಿ
ತರುಣಿಮಣಿ ತುಂಗಭದ್ರೆಯ ಸೇವೆಯಲ್ಲಿ!
ಮನವಿನಿತು ಚಲಿಸದೆಯೆ ವರಯೋಗ ಮೌನದಲಿ
ಸಾಧಿಸಲು ಮುಕ್ತಿಯನು ಸ್ವಾತಂತ್ರ್ಯದಲ್ಲಿ ೨

ತುಂಗಭದ್ರೆಯ ತೆರೆಯ ಮಂಜುಳದ ನಾದದಲಿ
ಗಿಳಿವಿಂಡಿನಾ ಚಿಲಿಮಿಲಿಯ ಮೆಲ್ಲುಲಿಯಲಿ
ಕೋಗಿಲೆಯ ಕಲಕಂಠ ಮಧುರತರ ಗಾನದಲಿ
ವೈರಾಗ್ಯ ಸಾಧನೆಯ ಹಿಡಿದೆ ಯೋಗದಲ್ಲಿ ೩

ನದಿಯ ಕಲರವ ನಿನ್ನ ಜಪಮಾಲೆ ಮಂತ್ರಗಳು
ಅರಗಿಣಿಯ ಸವಿನುಡಿಯೆ ವೇದಘೋಷಗಳು
ಕೋಗಿಲೆಯ ಸವಿಗಾನ ಮೊರೆಯುತಿಹ ಓಂಕಾರ
ಸಂನ್ಯಾಸಿ ನಿನ್ನ ಮನವೇ ನಿರ್ವಿಕಾರ! ೪

ಹಿಂದಲ್ಲಿ ಪರಶಿವನು ತಪಗೆಟ್ಟ ಕತದಿಂದ
ಬಂದಿಹರೊ! ವಿದ್ಯಾರಣ್ಯ ರೂಪದಲಿಂದು!
ತಪಗೆಯ್ದು ಪರಿಪೂರ್ಣ ಸಿದ್ಧಿಯನು ಪಡೆಯಲೆಂದು
ಕರ್ಣಾಟದೇಕೀಕರಣವೇ ಗುರಿಯೆಂದು. ೫

ಪಂಪಾಸರಸಿನಲಿ ಈಜುತಿರುವಾ ಕಲಹಂಸ
ಪದಗತಿಯ ವೈಖರಿಯ ನರಿಯೆ ಪರಮಹಂಸ!
ನಿನ್ನ ವೈರಾಗ್ಯ ಗುರಿಯೇನೊ! ಯತಿರಾಜಹಂಸ!
ರಾಜಯೋಗವ ಹಿಡಿದೆ ಯತಿಕುಲೋತ್ತಂಸ! ೬

ಹುಕ್ಕ ಬಕ್ಕರ ಹೂಡಿದೆಯ ರಾಜ್ಯರಥದಲ್ಲಿ!
ಸಂನ್ಯಾಸಿ ಸಾರಥಿಯು ನೀನೆ ಜಗದಲ್ಲಿ!
ಒಕ್ಕಲಿಕ್ಕಿದೆ ಧರ್ಮದ್ರೋಹಿಗಳ ಛಲದಲ್ಲಿ
ಕನ್ನಡದ ಸಾಮ್ರಾಜ್ಯ ದೇವಿಯಡಿಯಲ್ಲಿ ೭

ರಾಜಯೋಗವು ಭಕ್ತಿಯೋಗವು ಕರ್ಮಯೋಗವು
ಕೂಡಿದಾ ಬ್ರಹ್ಮತೇಜೋಮೂರ್ತಿ ನಮಿಪೆ!
ಹರಸು ಕನ್ನಡನಾಡಿನೇಳ್ಗೆಯನು ಯತಿವರನೆ!
ಶಿರಬಾಗಿ ನಮಿಸುವೆನು ವೈರಾಗ್ಯಮೂರ್ತಿಯೇ ೮
*****

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...