Home / Shrishailam

Browsing Tag: Shrishailam

೧ ಯದುಕುಲಾಂಬುಧಿ ಚಂದ್ರ ವರಗುಣ ಹೃದಯ ಕನ್ನಡ ನಾಡ ಕಣ್ಮಣಿ ಸದಯ ಶ್ರೀಜಯಚಾಮರಾಜೇಂದ್ರ ಸುಖಿಸು ಜಗದಲಿ ಸುದತಿ ಸತ್ಯಪ್ರೇಮದೇವಿಯ ಮುದದಿ ವೆರಸುತ ರಾಜ್ಯಲಕ್ಷ್ಮಿಯ ಹೃದಯ ಭೂಷಣನೆನಿಸಿ ಬಾಳೈ ಧರೆಯ ಪಾಲಿಸುತ ೨ ವರದೆ ಶುಭಕಾವೇರಿ ಗೋದಾ ವರಿಯು ವೇದಾವತ...

(ದುಃಖಗೀತೆ) ಆಳಿದ ಮಹಾಸ್ಟಾಮಿಯವರಾದ ಶ್ರೀಮನ್‌ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಹದ್ದೂರ್‌ ಅವರ ಪವಿತ್ರಾತ್ಮಕ್ಕೆ ಚಿರಶಾಂತಿಯನ್ನು ಬಯಸಿ ಹಾಡಿದ ಚರಮಗೀತೆ. ೧ ಜಗವು ಮುಳುಗಿಹುದಿಂದು ಕಡುದುಃಖಜಲಧಿಯಲಿ ಕಾರ್ಮುಗಿಲು ಕವಿದಿಹುದು ಕಾರಿರುಳು ಮುಸುಕಿ...

ಪರಶಿವನು ವರತಪವನೆಸಗಿದನು ವನದಲ್ಲಿ ಗಿರಿಕನ್ಯೆ ಪಾರ್ವತಿಯ ಶುಶ್ರೂಷೆಯಲ್ಲಿ! ಚಿರಕಾಲ ಸಾಗದೆಯೆ ಮನಸೋತ ವನಿತೆಯಲಿ ಜಗವ ಮುಳುಗಿಸಿದ ಬೆಂಕಿ ಬೇಗುದಿಯಲ್ಲಿ ೧ ಯತಿಯೆ! ವಿದ್ಯಾರಣ್ಯ! ಕುಳಿತಿರುವೆ ತಪದಲ್ಲಿ ತರುಣಿಮಣಿ ತುಂಗಭದ್ರೆಯ ಸೇವೆಯಲ್ಲಿ! ಮನವ...

ಗಿರಿತರುಗಳೆಡೆಯಲ್ಲಿ ತಿಳಿಗೊಳದ ಕೆಲದಲ್ಲಿ ಮೆಲ್ಲಮೆಲ್ಲನೆ ಸುಳಿದು ಸಾರಿಬರುವ ಮಂದಮಾರುತ ನಗಿಪ ಬಿರಿಮುಗುಳ ಮಲ್ಲಿಗೆಯ ಮೈಸಿರಿಯ ತನಿಗಂಪು ಬಹಳ ಚೆಂದ ೧ ಬಡತನದ ಬಾಳಿರಲಿ ರೋಗರುಜಿನಗಳಿರಲಿ ಮನದ ಕೋಟಲೆಗಳೆಷ್ಟೆಷ್ಟೆ ಇರಲಿ ಅರಳು ಮಲ್ಲಿಗೆಯ ಸಮ ಕರು...

ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ ಬಾರಿಸುವ ಜೇಗಟೆಯದನಿಗೆ ದೇವ! ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧ ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ ನಿಂದು ಉರಿಯುತಿಹ ನಂದಾದೀಪವು ಹರಿಸಲಾರದೆದೆಯಲಿಹ ಗ...

೧ ನೋಡಿಲ್ಲಿ ಕನ್ನಡದ ಸಾಹಿತ್ಯದುದ್ಯಾನ ಸೊಂಪಾಗಿ ಬೆಳೆದಿಹುದು ಹತ್ತಾರು ಶತಮಾನ! ಕವಿಕೃಷೀವಲರಿಲ್ಲಿ ಬೆಳೆದಿಹರು ಬಹುಕಾಲ ಕಾವ್ಯತರುಗಣ ಕವನಲತೆ ಕುಂಜಗಳ ಜಾಲ ಕನ್ನಡದ ನುಡಿ ಧೀರರಾಜರಾಶ್ರಯದಲ್ಲಿ ಉನ್ನತಿಯ ಪಡೆದಿಹುದು ಉದ್ಯಾನ ಜಗದಲ್ಲಿ! ಕಳೆಹುಟ್...

ಬಿರುಗಾಳಿ ಬೀಸುತಿರೆ ಸಾಗರದ ವೀಚಿಗಳ ಏರಿಳಿತದಂತೆನ್ನ ಮನಶ್ಶರಧಿ ಯಲೆದ್ದೆದ್ದು ಬೀಳುತಿವೆ ಬಹುರಭಸದಾಶಾ ತರಂಗಗಳು ಕ್ಷಣಕ್ಷಣಕೆ ದೇವ! ೧ ಹಿರಿತನವು ಬೇಕೆಂಬ ದೂರದಾಶಾವೀಚಿ ಯೊಮ್ಮೆ ಬಂದು ಸೋಕುವುದು ಹೃದಯವನು ಸಿರಿಯರಸ ನಾನಾಗಬೇಕೆಂಬ ಬಯಲಾಸೆ ತೆರೆ...

ಬಾಲಚಂದ್ರನು ಮೂಡಿ ನಗುತಿರಲು ಗಗನದಲಿ ಕರಿಮುಗಿಲ ತೆರೆಯವನ ಮರೆಗೊಳಿಪುದು. ಕೋಗಿಲೆಯು ಬನದಲ್ಲಿ ಉಲಿಯುತಿರೆ ನಲಿಯುತಿರೆ ಗ್ರೀಷ್ಮರಾಜನು ಅಂದು ಕಾಲಿಡುವನು. ೧ ಯೌವನದ ಹೊನಲು ಹೊರಹೊಮ್ಮುತಿರೆಮುಖದಲ್ಲಿ ಜೀವನದ ಸಂಪದವು ಹೆಚ್ಚುತಿರಲು ನಿಜಪತಿಯ ಸೇರ...

ಚಾಮುಂಡಿಗಿರಿಯ ತಪ್ಪಲಲಿ ಮೈಸೂರು ಪುರ- ನಂಜನಗುಡಿಯ ರಾಜಮಾರ್ಗದಲಿ ರಂಜಿಪುದು ತಾರುಣ್ಯ ತುಂಬಿರುವ ಕನ್ನೆವೊಲು ಮೈಸೂರಿನುದ್ಯಾನ ಮಧುವನವು ೧ ರಂಗುರಂಗಿನ ಹೂಗಳಾಭರಣ ಒಪ್ಪಿರಲು ಕಂಗಳನು ಮೋಹಿಸುವ ಹಸುರುಡುಗೆಯ ಸಿಂಗರಿಸಿ ನಿಂತಿರುವ ಅಂಗನೆಯ ತೆರದಲ್...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...