Home / ಕವನ / ಕವಿತೆ / ಶುಭಾಶಂಸನೆ

ಶುಭಾಶಂಸನೆ

ಯದುಕುಲಾಂಬುಧಿ ಚಂದ್ರ ವರಗುಣ
ಹೃದಯ ಕನ್ನಡ ನಾಡ ಕಣ್ಮಣಿ
ಸದಯ ಶ್ರೀಜಯಚಾಮರಾಜೇಂದ್ರ ಸುಖಿಸು ಜಗದಲಿ
ಸುದತಿ ಸತ್ಯಪ್ರೇಮದೇವಿಯ
ಮುದದಿ ವೆರಸುತ ರಾಜ್ಯಲಕ್ಷ್ಮಿಯ
ಹೃದಯ ಭೂಷಣನೆನಿಸಿ ಬಾಳೈ ಧರೆಯ ಪಾಲಿಸುತ
ವರದೆ ಶುಭಕಾವೇರಿ ಗೋದಾ
ವರಿಯು ವೇದಾವತಿ ಕಪಿಲೆಯರು
ಪರಮಪಾವನೆ ತುಂಗಭದ್ರೆಯು ಪಂಚ ಕನ್ಯೆಯರು
ಕರದಿ ಧರಿಸಿಹ ಪುಣ್ಯ ಜಲವನು
ಸುರಿಸುವರು ಮಕುಟಾಗ್ರದಲಿ ನೀ
ನರಸುತನಗೈಯ್ಯೆಂದು ಹರಸುವರು ಜನಪೋತ್ತಮಕೆ
ಯಾದವಾನ್ವಯ ಮಾತೆ ಗಿರಿಜೆಯು
ಮೋದದಿಂದಲಿ ಕಟ್ಟಿ ಪಟ್ಟವ
ಗಾದಿಯಲಿ ಕುಳ್ಳಿರಿಸಿ ಕರವಾಲವಿಡುತ ಕರದಲಿ
ಸಾದರದಿ ಶಿಖ ಮೊಹರ ನೀಡುತ
ಮೇದಿನೀಪತಿಯಾಗಿ ಧರೆಯಲಿ
ಮೇದಿನೀಶರ ಮೌಳಿಮಣಿಯಾಗೆಂದು ಹರಸುವಳು
ಪುಣ್ಯ ಪುರುಷನೆ! ನಿನ್ನ ಸಲಹಲಿ
ಪುಣ್ಯ ನದಿಗಳ ಪುಣ್ಯತೀರ್ಥದ
ಪುಣ್ಯರಾಶಿಯು ಪುಣ್ಯ ಪುರುಷರ ತಪದ ಫಲವೆಲ್ಲ
ಪುಣ್ಯವಧು ಸಚ್ಚರಿತೆ ಪುಣ್ಯಾ
ರಣ್ಯೆ ಸತ್ಯಪ್ರೇಮದೇವಿಯ
ಪುಣ್ಯವರ್ಧಿಸಿ ವಂಶಲತೆ ಪೂತು ಫಲಿಸಲಿಹದಲಿ
ವೀರ ಯದುರಾಯರ ಕಲಿತನವ
ಧೀರ ರಾಜೊಡೆಯರಭಿಮಾನವ
ಶೂರ ಚಿಕದೇವಾಖ್ಯಭೂಪರ ದೈವಭಕ್ತಿಯ ಮೇಣ್‌
ಧೀರ ಮುಮ್ಮಡಿ ಕೃಷ್ಣಜನಪರ
ಶೂರರೆನಿಸಿದ ಚಾಮರಾಜರ
ಚಾರುತರ ಗುಣಗಣವ ಮೆರೆಸುತ ಸಲಹು ಲೋಕವನು
“ರಾಜಋಷಿ” ಯೆಂದೆನಿಸಿ ಬಾಳಿದ
ರಾಜ ನಾಲ್ವಡಿ ಕೃಷ್ಣಭೂಪರ
ತೇಜವನು ಬೀರುತ್ತ ರಕ್ಷಿಸು ನಾಡ ಪ್ರಜೆಗಳನು
ಸಾಜದಿಂದಲಿ ತಂದೆಯಂದದಿ
ರಾಜಗುಣಗಳ ಪಡೆದು ನೆರೆ ರಾ
ರಾಜಿಸೈ ನೀಂ ರತ್ನ ಸಿಂಹಾಸನದಿ ಮಂಡಿಸುತ
ಪಟ್ಟ ಭದ್ರನೆ ಸುಖಿಸು ಸಂತತ
ಪಟ್ಟಮಹಿಷಿಯ ಸಹಿತ ಧರೆಯಲಿ
ಪಟ್ಟದಾನೆಯು ಪಟ್ಟದಶ್ವವು ನಿರುತ ವರ್ಧಿಸಲಿ
ಪಟ್ಟಮೆರೆಯಲಿ ಶಾಶ್ವತವೆನಿಸಿ
ನೆಟ್ಟಿರಲಿ ಯದುವಂಶ ಪೀಳಿಗೆ
ಯಟ್ಟಹಾಸದಿ ವರ್ಧಿಸಲಿ ರವಿಚಂದ್ರರಿರುವನಕ
ವಿಜಯಿಸೈ ಜಯಚಾಮರಾಜನೆ
ವಿಜಯಸೈ ನವಕೋಮಲಾಂಗನೆ
ವಿಜಯಸೈ ಶುಭವನಿತೆ ಚಾರುಪುನೀತೆಯವೆರಸಿ ನೀಂ
ವಿಜಯಲಕ್ಷ್ಮಿಯ ಪೂರ್ಣ ಕೃಪೆಯಿಂ
ವಿಜಯಿಯಾಗೈ ಸುಜನರಂಜಕ
ವಿಜಯ ಲಕ್ಷ್ಮಾಂಬಿಕೆಯ ನಲವಿನ ಮುದ್ದುಸೋದರನೆ
ಸುಖಿಸು ನೀಂ ಜಯಚಾಮ ರಾಜನೆ
ಸುಖಸು ನೀಂ ನರಸಿಂಹವರನಯನೆ
ಸುಖಿಸು ಸತ್ಯಪ್ರೇಮಭಾಮೆಯ ವೆರಸಿ ಚಿರಕಾಲ
ಸುಖಿಸು ಕನ್ನಡನಾಡ ಕಣ್ಮಣಿ
ಸುಖಿಸು ಯದುಕುಲ ವೀರ ದಿನಮಣಿ
ಸುಖಸು ದೀನರ ಸಂತ ಬುಧ ಕವಿ ಜನರ ಪಾಲಿಸುತ
………
ಚಿರಮಭಿವರ್ಧತಾ೦ ಯದುಸಂತಾನ ಶ್ರೀಃ
*****
Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...