Home / ಕಥೆ / ಕಿರು ಕಥೆ / ಬದುಕು ಹ್ರಸ್ವವೇ-ದೀರ್ಘವೇ?

ಬದುಕು ಹ್ರಸ್ವವೇ-ದೀರ್ಘವೇ?

ಒಬ್ಬ ಶಿಷ್ಯ ಗುರುವಿನಲ್ಲಿ ಬಂದು ಒಂದು ವಿಚಿತ್ರ ಪ್ರಶ್ನೆ ಕೇಳಿದ. “ಈ ಬದುಕು ಹ್ರಸ್ವವೇ ಇಲ್ಲ ಧೀರ್ಘವೇ?” ಎಂದು.

“ಅದು ಅವರವರ ಸಾಧನೆಗೆ ತಕ್ಕಂತೆ” ಎಂದರು ಗುರುಗಳು. ಮಹತ್, ಬೃಹತ್ ಹಿಂದೆ ಸಾಗುವ ಬದುಕು ಬಲು ಧೀರ್ಘ. ಕ್ಷಣಿಕಕ್ಕೆ ತುತ್ತಾದರೆ ಹ್ರಸ್ವ. ಅನಂತದ ನೂಲಿನಲ್ಲಿ ನೇಯಬೇಕು ಬದುಕು. ಅಮರತೆಯ ಅಮಲಿನಲ್ಲಿ ಮೀಯಬೇಕು ಬದುಕು.

“ನಶ್ವರ, ಕ್ಷಣಿಕವೆನ್ನುವ ಈ ಮಾನವ ಬಾಳಲ್ಲಿ ಅಮರತ್ವದ ಛಾವಣಿ ನಿತ್ಯದ ನೆಲೆ ಯಾವುದು ಗುರವರ್ಯಾ?” ಎಂದ ಶಿಷ್ಯ ಸಂದೇಹ ಪೂರ್ತಿ ಹೋಗದೆ.

“ಶಿಷ್ಯಾ! ಈ ಬದುಕಿಗೆ ವಿಸ್ತಾರದ ಛಾವಣಿ ಆಗಸ. ಈ ಬದುಕಿಗೆ ನಿತ್ಯದ ನೆಲೆ ಭೂಮಿ. ಈ ಅನಂತತೆಗೆ ಹೊಂದಿಕೊಂಡಿರುವ ಬಾಳು ಬದುಕು- ಧೀರ್ಘನಡೆಯಲ್ಲಿ ಶಿಖರಕ್ಕೆ ಬೆಳೆಯುತ್ತದೆ. ಎಡವಿದಲ್ಲಿ ಬಿದ್ದು ಹ್ರಸ್ವವಾಗುತ್ತದೆ. ಮಾನವನ ಹೃದಯ ಒಂದು ಸಾಗರ. ಇಲ್ಲಿ ಪ್ರೀತಿ ಅಲೆಗಳಿರುವ ತನಕ ಬದುಕು ಬರಡಲ್ಲ – ಬದುಕು ಬಂಗಾರ.

ಬದುಕಿನ ಕ್ಷಣಗಳು ಅವು ಅನಂತತೆಯ ಬಿಂದುಗಳು. ಕ್ಷಣ ನಿರೀಕ್ಷಣೆ, ಕ್ಷಣ ಅನ್ವೇಷಣೆ, ಕ್ಷಣ ಸ್ಪುರಣ, ಕ್ಷಣ ವೀಕ್ಷಣದಲ್ಲಿ, ಕ್ಷಣವಾಗುತ್ತದೆ ಅಕ್ಷಯ ಕಣ. ಪ್ರತಿಕ್ಷಣದ ಬಾಳಿಗೆ ಬದುಕಿಗೆ ಸಾವಿಲ್ಲ. ಅದು ಅಮರ-ಅಂತವಿಲ್ಲದ ಅನಂತ. ಸಂತೆ ಇಲ್ಲದ ವಸಂತ, ಚಿಂತೆಯಿಲ್ಲದ ಚಿರಂತ, ಕಂತೆಯಿಲ್ಲದ-ಕಲ್ಪವೃಕ್ಷ. ಆಗ ಬಾಳು ಬದುಕುತ್ತದೆ ಯುಗ ಯುಗಾಂತರ ಮಹತ್ತಿನ ಮಾನವ ಬಾಳು ಸಾಗುತ್ತದೆ ಮನ್ವಂತರ. ಅನಂತದ ಜೋಕಾಲಿಗೆ ಜೋತು ಬಿದ್ದು ಬದುಕನ್ನು ಹಿಡಿದು ಕೈತೂಗುತ್ತಲಿದೆ ಅದು ಧೀರ್ಘ, ಕೈಬಿಡೆ ಅದು ಹ್ರಸ್ವ” ಎಂದಾಗ ಗುರುಗಳು, ಶಿಷ್ಯನ ಎದ ತುಂಬಿ ಹರಿಯಿತು.
*****

Tagged:

Leave a Reply

Your email address will not be published. Required fields are marked *

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...