Home / ಬಾಲ ಚಿಲುಮೆ / ಕಥೆ / ಹುಲಿಯಾಗಿದ್ದ ಕತ್ತೆಯ ಕಥೆ

ಹುಲಿಯಾಗಿದ್ದ ಕತ್ತೆಯ ಕಥೆ

ಒಂದಾನೊಂದು ಊರಿನಲ್ಲಿ ಶುದ್ಧ ಪಟನೆಂಬ ಅಗಸನು ಇದ್ದನು. ಅವನಿಗೆ ಒಂದು ಕತ್ತೆಯಿತ್ತು. ಅದು ಹೊಟ್ಟೆಗಿಲ್ಲದೆ ಬಹಳ ಇಳಿದುಹೋಗಿ ನಿಶ್ಶಕ್ತಿಯಾಗಿತ್ತು. ಆ ಅಗಸನು ಒ೦ದು ದಿನ ಎಲ್ಲಿಯೋ ಹೋಗಿ ಬರುತ್ತಿದ್ದಾಗ ಕಾಡಿನಲ್ಲಿ ಸತ್ತು ಬಿದ್ದಿದ್ದ ಹುಲಿಯೊಂದನ್ನು ಕಂಡನು. ಅಹಾ, ಇದರ ಚರ್ಮವನ್ನು “ತಗೆದು ಕೊಂಡು ಹೋಗಿ ನಮ್ಮ ಕತ್ತೆಗೆ ಹೊದಿಸಿ ಹೊಲಗಳಲ್ಲಿ ಬಿಟ್ಟು ಬಿಟ್ಟರೆ, ಕಾವಲುಗಾರರು ಹುಲಿಯೆಂದುಕೊಳ್ಳುವರು; ಇದನ್ನು ಯಾರೂ ಓಡಿಸುವುದಿಲ್ಲ. ಹಾಗೆ ಆದಕ್ಕೆ, ಕತ್ತೆಯು ಚೆನ್ನಾಗಿ ಮೇದು ಬಲವಾಗುವುದು” ಎಂದು ಯೋಚನೆ ಬಂತು. ಅವನು ಹಾಗೆಯೇ ಮಾಡಿದನು. ರಾತ್ರಿಯೆಲ್ಲವೂ ಕತ್ತೆಯು ಬೆಳೆದ ಹೊಲದಲ್ಲಿ ಮೇಯುವುದು.  ಬೆಳಗಾಗುವುದಕ್ಕೆ ಮುಂಚೆಯೇ ಅಗಸನು ಬಂದು ಅದನ್ನು ಹೊಡೆದುಕೊಂಡು ಹೋಗುವನು.
“ಹೀಗೆಯೇ ಕೆಲವು ಕಾಲ ನಡೆಯಲು ಕತ್ತೆಯು ಚೆನ್ನಾಯಿತು. ಅವನ್ನು ಹಿಡಿಯುವುದೇ ಕಷ್ಟವಾಯಿತು. ಹೀಗಿರಲು ಒಂದು ದಿನ ಹೊಲದಲ್ಲಿ ಮೇಯುತ್ತಿದ್ದ ಕತ್ತೆಯು ದೂರದಲ್ಲಿ ಎಲ್ಲಿಯೋ ಇನ್ನೊ೦ದು ಕತ್ತೆಯು ಕೂಗಿದುದನ್ನು ಕೇಳಿತು. ಅದು ಹೆಣ್ಣು ಕತ್ತೆಯೆಂದುಕೊಂಡು‌ ತಾನೂ ಕೂಗುವುದಕ್ಕೆ ಆರಂಭಿಸಿತು.
ಕೂಡಲೇ ಕಾವಲುಗಾರರು “ಎಲೆಲಾ ಇದು ಹುಲಿಯಲ್ಲ. ಹುಲಿಯ ಚರ್ಮ ಹೊದ್ದ ಕತ್ತೆ” ಎಂದು ತಿಳಿದುಕೊಂಡು ಬಂದು ಕಲ್ಲು ದೊಣ್ಣೆ ಮುಂತಾದವುಗಳಿಂದ ಹೊಡೆದು ಕೊಂದರು.
ಅದರಿಂದ ಹೇಳಿದೆನು. “ಕತ್ತೆಗಂದು ಕೂಗಿಕೊಂಡುದೆ ಮೃತ್ಯುವಾಯ್ತು ಎಂದು” ಎಂದು ಕಪಿಯು ಕಥೆಯನ್ನು ಮುಗಿಸುತ್ತಿದ್ದ ಹಾಗೆಯೇ ಒಂದು ಜಲಚರವು (ನೀರಿನ ಪ್ರಾಣಿ) ಬಂದು “ಎಲೆ ಮೊಸಳೆ ನಿನ್ನ ಹೆಂಡತಿಯು ನೀನು ಬರಲಿಲ್ಲವೆಂದು ಉಪವಾಸಮಾಡಿ ಬಿಟ್ಟಳು? ಎಂದು ಹೇಳಿತು. ಸಿಡಿಲಿನಂತಹ ಆ ಕೆಟ್ಟ ಸುದ್ದಿಯನ್ನು ಕೇಳಿ ಮೊಸಳೆಯು ಹೋ ಎಂದು ಅತ್ತಿತು.
“ಅಯ್ಯೋ, ನನ್ನ ಅದೃಷ್ಟಟವೇ! ಹೀಗಾಗಬಹುದೇ? ಕೇಳಿಲ್ಲವೆ?
ಎಲ್ಲಿ ತಾಯಿಯಿಲ್ಲವೋ; ನುಡಿವ ಮುದ್ದು
ಮಡದಿ ಎಲ್ಲಿಯಿಲ್ಲವೋ, ಆ ಮನೆಯು
ಮನೆಯೇ? ಅದರಲಿಲ್ಲದಿದ್ದರೇನಿದ್ದರೇನು? ॥
ಅಡವಿಗಾಮನೆಗುಂ ನೋಡಲಾಗಿ ಭೇದವೇನು? ॥೨೪॥
ಆದದ್ದು ಆಗಿ ಹೋಯಿತು. ನನ್ನ ಅಪರಾಧವನ್ನು ಮನ್ನಿಸು. ನನ್ನ ಹೆ೦ಡಿತಿಯೂ ಹೋದಳು. ಆ ದುಃಖವನ್ನು ನಾನು ತಡೆಯಲಾರೆ. ನಾನು ಬೆಂಕಿಗೆ ಬೀಳುವೆನು” ಎಂದು ಬಹಳವಾಗಿ ಅತ್ತು ಕೊಂಡಿತು.
ಅದನ್ನು ಕೇಳಿ ಕಪಿಯು ನಕ್ಕುಬಿಟ್ಟತು. “ಎಲೆಲಾ, ಈಗ ತಿಳಿಯಿತು. ನೀನು ಕೇವಲ ಸ್ತ್ರೀವಶನು ಮಾತ್ರವಲ್ಲ ಹೆಣ್ಣಿಗೆ ಸೋತವನೂ ಹೌದು. ಅದರಿಂದ ನೀನು ಅಪರಾಧಿಯಲ್ಲ ಎಂದು ನಂಬಿಕೆಯಾಯಿತು. ಮೂಢ, ಇದು ಆನಂದ ಪಡುವ ಸಮಯ. ಅಳುವ ಸಮಯವಲ್ಲ. ಅಂತಹ ಹೆಂಡತಿಯು ಸತ್ತರೆ ಹಬ್ಬ ಮಾಡಬೇಕು.” ಎಂದಿತು.
ಮೊಸಳೆಯು ಹೇಳಿತು. “ಮಿತ್ರ, ನೀನು ಹೇಳುವುದಿರಲಿ, ಈಗ ನೋಡು,” ನನಗೆ ಎರಡು ನಷ್ಟವಾಯಿತು. ಮೊದಲನೆಯದಾಗಿ ಮನೆಯು ಹಾಳಾಗಿ ಹೋಯಿತು. ಎರಡನೆಯದಾಗಿ ನಿನ್ನಂತಹ ಸ್ನೇಹಿತನ ಸ್ನೇಹವು ಹೋಯಿತು. ಇದಿಷ್ಟೂ ನನ್ನ ಹಣೆಯ ಬರೆಹ! ಕೇಳಿಲ್ಲವೆ?
ನನ್ನ ಜಾಣಿಗೆರಡುಪಾಲು ನಿನ್ನ ಜಾಣು ॥ 
ಗಂಡನಿಲ್ಲ ಮಿಂಡನಿಲ್ಲ ಆದೆ ಬೆತ್ತಲೆ ॥೨೫ ॥ 
ಕಪಿಯು “ಅದು ಹೇಗೆ?” ಎಂದು ಕೇಳಲು, ಮೊಸಳೆಯು ಹೇಳಿತು:-
*****
ಎರಡೂ ಇಲ್ಲವಾದ ಕಥೆ ಓದಿ
Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...