Home / ಬಾಲ ಚಿಲುಮೆ / ಕಥೆ / ದ್ರೋಣನ ಕಥೆ

ದ್ರೋಣನ ಕಥೆ

ಒಂದಾನೊಂದು ಊರಿನಲ್ಲಿ ದ್ರೋಣನೆಂಬ ಒಬ್ಬ ದರಿದ್ರ ಬ್ರಾಹ್ಮಣನಿದ್ದನು. ಅವನು  ಅವರಿವರು ಕೊಟ್ಟುದನ್ನು ತಂದು ತಿಂದು ಕಾಲಹರಣೆ ಮಾಡುವ ಬಿಡವನು. ಅವನಿಗೆ ಸೊಗಸಾದ ಬಟ್ಟೆ, ಒಡವೆ ಕೊನೆಗೆ ದಿನವೂ ತಾಂಬೂಲ ಕೂಡ ಇರಲಿಲ್ಲ. ಅವನನ್ನು ಕಂಡು ಯಾರೋ ಮರುಗಿ ಅಯ್ಯೋ ಪಾಪ ಎಂದು ಎರಡು ಹೆಂಗರುಗಳನ್ನು ಕೊಟ್ಟರು. ಅದನ್ನು ಅವನು ಬಹು ಕಷ್ಕಪಟ್ಟು ಬೆಳೆಸಿದನು. ಅವು ಚೆನ್ನಾಗಿ ಆಗಿದ್ದವು.
ಅವನ್ನು ಕಂಡು ಒಬ್ಬ ಕಳ್ಳನಿಗೆ. ಇವುಗಳನ್ನು ಹಾರಿಸಿಕೊಂಡು ಹೋಗಬೇಕು ಎನ್ನಿಸಿತು. ಅದಕ್ಕಾಗಿ ಅವನು ಎಲ್ಲವನ್ನೂ ಸಿದ್ದಪಡಿಸಿಕೊಂಡು ಹೊರಟನು. ದಾರಿಯಲ್ಲಿ ವಿಕಾರನಾಗಿ ನೋಡಿದರೆ ಹೆದರಿಕೆಯಾಗಬೇಕು ಅಂತಹದೊಂದು ಆಕಾರವು ಕಾಣಿಸಿತು. “ನೀನು ಯಾರು?” ಎಂದು ಕಳ್ಳನು ಕೇಳಲು, ಅದು ನಾನು “ಸತ್ಯವಚನನೆಂಬ ಬ್ರಹ್ಮರಾಕ್ಷಸನು. ನೀನು ಯಾರು? ನಿಜ ಹೇಳು” ಎಂದಿತು. ಕಳ್ಳನು ನಾನು ಕ್ರೂರಕರ್ಮನೆಂಬ ಚೋರನು. ಇಲ್ಲೊಬ್ಬ ದರಿದ್ರ ಬ್ರಾಹ್ಮಣನ ಮನೆಯಿದೆ. ಅಲ್ಲಿ ಎರಡು ಕಡಸುಗಳಿವೆ. ಆವುಗಳನ್ನು ತೆಗೆದುಕೊಂಡು ಹೋಗಲು ಹೊರಟಿದ್ದೇನೆ. ನೀನು ಎಲ್ಲಿಗೆ ಹೊರಟದ್ದೀಯೇ?” ಎಂದು ಕೇಳಿದನು. ಆಗ ಬ್ರಹ್ಮರಾಕ್ಷಸನು, ನಾನು ಆರುದಿನಕ್ಕೊಮ್ಮೆ ಊಟ ಮಾಡುವವನು. ನಾನು ಈದಿನ ಆ ಬ್ರಾಹ್ಮಣನನ್ನು ಹಿಡಿದು ತಿನ್ನಬೇಕೆಂದಿರುವೆನು. ಅದಕ್ಕಾಗಿ ಹೊರ ಬರುವೆನು ನಾವಿಬ್ಬರೂ ಒಂದೇ ಕಡೆಗೆ ಹೊರಟರುವೆವು. ಜೊತೆಯಲ್ಲಿಯೇ ಹೋಗೋಣ” ಎಂದು ಮಾತನಾಡಿಕೊಂಡು ಆ ಮನೆಯ ಬಳಿಗೆ ಬಂದರು.
ಬ್ರಾಹ್ಮಣನು ಮನೆಯಲ್ಲಿ ಮಲಗಿದ್ದನು. ಕಳ್ಳನು ಹೇಳಿದನು. “ಅಯ್ಯಾ ರಾಕ್ಷಸ ನೀನು ಹೋಗಿ ಬ್ರಾಹ್ಮಣನನ್ನು ಹಿಡಿದುಕೊ೦ಡರೆ ಗದ್ದಲವಾಗುವುದು. ಮನೆಯಲ್ಲಿ ಏಳುವರು. ನನಗೆ ಕಡಸುಗಳನ್ನು ಹೊಡೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಅದರಿಂದ ನಾನು ಉಪಾಯವಾಗಿ ಕಡಸುಗಳನ್ನು ಹೊಡೆದುಕೊಂಡು ಬಂದಮೇಲೆ ನೀನು ಮನೆಯೊಳಕ್ಕೆ ಹೋಗಿ ನಿನ್ನ ಕಾರ್ಯವನ್ನು ಮಾಡಿಕೊ” ಎಂದನು. ಬ್ರಹ್ಮರಾಕ್ಷಸನು ಅಯ್ಯಾ, ಹಾಗಲ್ಲ. ನೀನು ಕರುಗಳನ್ನು ಬಿಚ್ಚುವಾಗ ಅವು ಕೂಗಿಕೊಳ್ಳುವುವು. ಮನೆಯವರು ಎದ್ದುಬಿಡುವರು. ನನ್ನ  ಕೆಲಸಕ್ಕೆ ಅಡ್ಡಿಯಾಗುವುದು. ಈ ದಿನ ನಾನು ಏನೂ ತಿನ್ನದಿದ್ದರೆ ಇನ್ನು ಆರು ದಿನ ಏನೂ ತಿನ್ನುವಹಾಗಿಲ್ಲ. ಅದರಿ೦ದ ಇವತ್ತು ನಾನು ತಿಂದೇ ತಿನ್ನಬೇಕು. ನಾನು ಮೊದಲು. ಆಮೇಲೆ ನೀನು” ಎ೦ದನು.
ಹೀಗೆ ಇಬ್ಬರಿಗೂ ನಾನು ಮೊದಲು, ನಾನು ಮೊದಲು ಎಂದು ವಾಗ್ವಾದವಾಗಿ ಅದು ವಿಪರೀತವಾಗಿ ಪರಿಣಿಮಿಸಿತು. ಕಳ್ಳನು “ಹಾಗಾದರೆ ನೋಡು, ನಾನು ಬ್ರಾಹ್ಮಣನನ್ನು ಎಬ್ಬಿಸುತ್ತೇನೆ.” ಎ೦ದನು. ರಾಕ್ಷಸನಿಗೂ ರೇಗಿತು: “ನಾನು ಕೂಗಿ ನೀನು ಏಕೆ ಬಂದಿರುವೆಯೆಂಬುದನ್ನು ಹೇಳುತ್ತೇನೆ” ಎಂದು ಅದೂ ಕೂಗಿತು. ಈ ಇಬ್ಬರ ಕೂಗಾಟದಲ್ಲಿ ಬ್ರಾಹ್ಮಣನಿಗೆ ಎಚ್ಚರವಾಗಿಯೇ ಹೋಗಿತು. ಹಾಗೆ ಅವನು ಎದ್ದುದನ್ನು ಕಂಡು ಕಳ್ಳನು “ಬ್ರಾಹ್ಮಣಾ, ಇದೋ ನೋಡು ಈ ರಾಕ್ಷಸನು ನಿನ್ನನ್ನು ತಿಂದುಹಾಕಲು ಬಂದಿರುವನು. ಎಚ್ಚರಿಕೆ,” ಎಂದು ಕೂಗಿದನು. ರಾಕ್ಷಸನೂ “ಬ್ರಾಹ್ಮಣ, ಇವನು ನಿನ್ನ ಕಡಸುಗಳನ್ನು ಹೊಡೆದುಕೊಂಡು ಹೋಗಲು ಬಂದಿರುವ ಕಳ್ಳ. ಎಚ್ಚರಿಕೆ” ಎಂದು ಕೂಗಿದನು.
ಇವರಿಬ್ಬರ ಮಾತನ್ನೂ ಕೇಳಿದ ಬ್ರಾಹ್ಮಣನು ಕೈ ಕಾಲು ತೊಳೆದುಕೊಂಡು ಮಡಿಯಾಗಿ ಮಂತ್ರ ಜಪ ಮಾಡಿ ದೇವರಿಗೆ ನಮಸ್ಕಾರ ಮಾಡಲು ಬ್ರಹ್ಮರಾಕ್ಷಸನು ಓಡಿ ಹೋದನು. ಮನೆಯವರು ದೊಣ್ಣೆಗಳನ್ನು ತೆಗೆದುಕೊಂಡು ಬರಲು, ಕಳ್ಳನು ಓಡಿಹೋದನು. ಅದರಿಂದ ನಾನು “ಜಗಳವಾಡುವ ಹಗೆಯೆಮಗೆ ಹಿತಕರನು” ಎಂದು ಹೇಳಿದೆನು ಎಂದನು.
ಅವನ ಮಾತಾದ ಮೇಲೆ ಅರಿಮರ್ದನನು ಪ್ರಕಾರಕರ್ಣನನ್ನು “ನಿನ್ನ ಅಭಿಪ್ರಾಯವೇನು?” ಎಂದು ಕೇಳಿದನು. ಅವನೂ ಹೇಳಿದನು. “ದೇವ, ಈತನನ್ನು ವಧಿಸಬಾರದು. ಇವನನ್ನು ಕಾಪಾಡಿ ಇಟ್ಟು ಕೊಂಡಿದ್ದರೆ ಇನ್ನೇನಿಲ್ಲದಿದ್ದರೂ ಸುಖವಾಗಿ ಕಾಲವನ್ನು ಕಳೆಯುವುದಕ್ಕಾದರೂ ಆಗುವುದು ಕೇಳಿಲ್ಲವೆ?
ಒಬ್ಬರೊಬ್ಬರ ಮರ್ಮವನು | ಒಬ್ಬರೊಬ್ಬರು ಭೇದಿಸಲು |  
ಇಬ್ಬರೂ ಸಾಯುವರು ನಿಜ | ಹುತ್ತ ಹೊಟ್ಟೆಯ ಹಾವ್ಗಳಂತೆ ॥೨೯॥ 
ಅರಿಮರ್ದನನು ಅದು ಹೇಗೆ ಎನ್ನಲು, ಪ್ರಾಕಾರಕರ್ಣನು ಹೇಳಿದನು.:-
******
ಮರ್ಮಗಳನ್ನು ಭೇದಿಸಿ ಕೆಟ್ಟ ಹಾವುಗಳ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...