Home / ಬಾಲ ಚಿಲುಮೆ / ಕಥೆ / ಬುದ್ಧಿ ಕೇಳದೆ ಕೆಟ್ಟ ಆಮೆಯ ಕಥೆ

ಬುದ್ಧಿ ಕೇಳದೆ ಕೆಟ್ಟ ಆಮೆಯ ಕಥೆ

ಒಂದಾನೊಂದು ಸರೋವರದಲ್ಲಿ ಕಂಬುಗ್ರೀವನೆಂಬ ಒಂದು ಅಮೆಯುಂಟು. ಅದಕ್ಕೆ ಸಂಕಟ, ವಿಕಟ, ಎಂಬ ಎರಡು ಹಂಸಗಳು ಮಿತ್ರರಾಗಿದ್ದರು. ಅವೆರಡೂ ದಿನವೂ ಬಂದು ಅದರೊಡನೆ ಅನೇಕಾನೇಕ ಪುಣ್ಯ ಪುರುಷರ ಚರಿತ್ರೆಗಳನ್ನು ಕುರಿತು ಮಾತನಾಡಿ ಸಂಜೆಯವರೆಗೂ ಅಲ್ಲಿದ್ದು ಸಂಜೆಯಾಗುತ್ತಲೂ ತಮ್ಮ ಗೂಡುಗಳಿಗೆ ಹೋಗುವುವು.

ಹೀಗೆ ಇರುತ್ತಿರಲು ದೈವಯೋಗದಿಂದ ಅನಾವೃಷ್ಟಿಯು ಬಂದು ಆ ಸರೋವರವು ಬರುಬರುತ್ತ ಒಣಗುತ್ತಾ ಬಂತು. ಆಗ ಆ ಹಂಸಮಿತ್ರರು, ಆಮೆಯ ಸ್ಥಿತಿಯನ್ನು ಕಂಡು ಮರುಕಪಟ್ಟು “ಮಿತ್ರ, ನಿನಗೆ ಎಂತಹ ಕಷ್ಟ ಬಂತು! ಈ ಸರೋವರವು ಕೆಸರಿನ ಕಟ್ಟೆಯಾಗಿರುವುದು. ನೀನು ಇನ್ನು ಇಲ್ಲಿ ಇರುವುದೆಂತು ಎಂದು ನಮಗೆ ದುಃಖವಾಗುತ್ತಿದೆ” ಎಂದುವು. ಅದನ್ನು ಕೇಳಿ ಕಂಬುಗ್ರೀವನು ಹೇಳಿತು:- ಮಿತ್ರರೆ ಇಲ್ಲಿ ನೀರಿಲ್ಲವಾಗಿ ನಾವು ಬದುಕುವುದೇ ಕಷ್ಟವಾಗಿದೆ. ಏನಾದರೂ ಒಂದು ಉಪಾಯವನ್ನು ಚಿಂತಿಸಿ ಬುದ್ಧಿವಂತನಾದವನು‌ ಮಿತ್ರರಿಗೂ ಬಂಧುಗಳಿಗೂ ಆಪತ್ತು ಬಂದಾಗ ಪ್ರಯತ್ನಪಟ್ಟು ಉಪಕಾರ ಮಾಡಬೇಕು ಎಂದು ಮನುವು ಹೇಳಿರುವನು. ನನಗೆ ಒಂದು ಉಪಾಯವು ತೋರುವುದು ಕೇಳಿ. ನೀವು ಒಂದು ಕಡ್ಡಿಯನ್ನು ತನ್ನಿ. ಅದನ್ನು ನಾನು ನನ್ನ ಹಲ್ಲುಗಳಿಂದ ಭದ್ರವಾಗಿ ಕಚ್ಚಿಕೊಳ್ಳುವೆನು. ನೀವು ಅದನ್ನು ನಿಮ್ಮ ಕೊಕ್ಕುಗಳಲ್ಲಿ ಕಚ್ಚಿಕೊಳ್ಳಿ. ಯಾವುದಾದರೂ ನೀರು ಹೆಚ್ಚಾಗಿರುವ ಸರೋವರಕ್ಕೆ ಕರೆದುಕೊಂಡು ಹೋಗಿ” ಎಂದಿತು.

ಅವು ಹೇಳಿದುವು: “ಹೀಗೇನೋ ಆಗಬಹುದು. ಆದರೆ, ನೀನು ಮೌನವಾಗಿರಬೇಕು. ಇಲ್ಲವಾದರೆ ಬಾಯಿಬಿಟ್ಟಿರೆ ಕೆಳಗೆ ಬಿದು ಹೋಗುವೆ!” ಆಮೆಯು ಒಪ್ಪಿಕೊಂಡಿತು. ಹಂಸಗಳು ಅದರಂತೆಯೇ ಒಂದು ಕಡ್ಡಿಯನ್ನು ತಂದುವು ಅದನ್ನು ಆಮೆಯು ನಡುವೆ ಕಚ್ಚಿ ಕೊಂಡಿತು. ಅವೆರಡೂ ಆ ಕೊನೆ ಈ ಕೊನೆಯನ್ನು ಕಚ್ಚಿ ಕೊಂಡು ಹಾರಿದುವು.

ಅವು ಆಕಾಶದಲ್ಲಿ ಹೋಗುತ್ತಿದ್ದರೆ, ಎಲ್ಲೆಲ್ಲೂ ಜನರು ಅದನ್ನು ಕಂಡು ವಿಸ್ಮಯಪಟ್ಟರು: “ಈ ಹಕ್ಕಿಗಳು ಚಕ್ರದಂತಿರುವ ಏನನ್ನೋ ಹೊತ್ತುಕೊಂಡು ಹೋಗುತ್ತಿವೆ. ನೋಡಿ, ಬನ್ನಿ, ನೋಡಿ, ಬನ್ನಿ.” ಎಂದು ಒಬ್ಬರನ್ನೊಬ್ಬರು ಕರೆದರು. ಆ ಕೋಲಾಹಲವನ್ನು ಕೇಳಿ ಕಂಬುಗ್ರೀವನಿಗೆ ಅದೇನು ಎಂದು ಕೇಳಬೇಕು ಎನ್ನಿಸಿತು. ಕುತೂಹಲವು ಹೆಚ್ಚಾಗಿ ಕೇಳಿಯೇ ಬಿಡಬೇಕು ಎಂದು ಅ ಎಂದು ಬಾಯಿ ಬಿಟ್ಟತೋ ಇಲ್ಲವೋ ಕೆಳಕ್ಕೆ ಬಿದ್ದು ಚೂರು ಚೂರಾಗಿ ಹೋಯಿತು. ಅದರಿಂದ ಆಮೆಯಂತಾಗಬಾರದು ಎಂದೆನು” ಎಂದು ಹೇಳಿ ಅಷ್ಟೇ ಅಲ್ಲ, ಮುಂದೆ ಬರುವುದನ್ನು ಯೋಚಿಸಿದವನು, ಬಂದಾಗ ನೋಡಿ ಕೊಳ್ಳುವನು ಇಬ್ಬರೂ ಸುಖವಾಗಿದ್ದರೆ, ಆದದ್ದು ಆಗಲಿ ಎನ್ನುವನು ಹಾಳಾಗುವನು” ಎಂದಿತು.

ಟಿಟ್ಟಿಭವು ಅದು ಹೇಗೆ ಎನ್ನಲು, ಟಿಟ್ಟಿಭಿಯು ಹೇಳಿತು:-
*****
ಯದ್ಭವಿಷ್ಯನ ಕಥೆ ಓದಿ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...