Home / ಬಾಲ ಚಿಲುಮೆ / ಕಥೆ / ಮೂರ್ಖ ಮಂಡಲದ ಕಥೆ

ಮೂರ್ಖ ಮಂಡಲದ ಕಥೆ

ಒಂದಾನೊಂದು ಪರ್ವತದಲ್ಲಿ ಒಂದು ಮಹಾ ವೃಕ್ಷವಿರುವುದು. ಅದರಲ್ಲಿ ಬಂಧುಕನೆಂಬ ಒಂದು ಪಕ್ಷಿಯು ಇರುವುದು. ಅದು ಚಿನ್ನದ ಹಿಕ್ಕೆಯನ್ನು ಇಡುವುದು. ಒಂದು ದಿನ ಅದು ಒಬ್ಬ ಬೇಡನ ಮುಂದೆ ಹಿಕ್ಕೆಯನ್ನಿಟ್ಟಿತು. ಅದು ಕೆಳಕೆ ಬೀಳುತ್ತಿದ್ದ ಹಾಗೆಯೇ ಚಿನ್ನವಾದುದನ್ನು ಕಂಡು, ಆ ಬೇಡನಿಗೆ ವಿಸ್ಮಯವಾಯಿತು: “ಎಲೆಲಾ, ನಾನು ಹುಟ್ಟಿದುದು ಮೊದಲು ಹಕ್ಕಿಯ ಬೇಟೆಯಲ್ಲಿಯೇ ಮುಳುಗಿದವನು. ನನಗೆ ಈಗ ಎಂಭತ್ತು ವರ್ಷವಾಯಿತು ನಾನು ಇಂತಹ ಆಶ್ಚರ್ಯವನ್ನು ಇದುವರೆಗೆ ಕೇಳಿಯೂ ಇರಲಿಲ್ಲ” ಎಂದು ಅದಕ್ಕೆ ಬಲೆಯನ್ನು ಬೀಸಿದನು. ಹಕ್ಕಿಯು ಬೇಡನನ್ನು ಕಂಡರೂ ಓಡಿ ಹೋಗದೆ ಕುಳಿತಿದ್ದ ಕಡೆಯೇ ಕುಳಿತಿದ್ದು ಅವನ ಬಲೆಗೆ ಸಿಕ್ಕಿ ಹೋಯಿತ್ತು.
ಅದನ್ನು ಅವನು ಹಿಡಿದು ಪಂಜರದಲ್ಲಿ ಇಟ್ಟು ಕೊಂಡು ಮನೆಗೆ ತಂದನು. ಆಗ ಅವನಿಗೆ ಯೋಚನೆಯು ಬಂತು: “ಈ ಪಕ್ಷಿಯು ಇಲ್ಲಿ ಇದ್ದರೆ ನನಗೆ ಅಪಾಯವು ತಪ್ಪದು. ಯಾರದರೂ ಹೋಗಿ ರಾಜನಿಗೆ ಈ ಹಕ್ಕಿಯ ವಿಷಯ ತಿಳಿಸಿದರೆ, ಆತನು ನನ್ನನ್ನು ಕೊಲ್ಲಿಸಿದರೂ ಕೊಲ್ಲಿಸಬಹುದು, ಆದುದರಿಂದ ನಾನೇ ಹೋಗಿ ಹಕ್ಕಿಯನ್ನು ರಾಜನಿಗೆ ಒಪ್ಪಿಸುವೆನು ಎಂದು ಗೊತ್ತು ಮಾಡಿಕೊಂಡು ಹಕ್ಕಿಯನ್ನು ತೆಗೆದುಕೊಂಡು ಹೋಗಿ ಅರಸನಿಗೆ ಒಪ್ಪಿಸಿದನು.
ಅರಸನಿಗೆ ಆ ಹಕ್ಕಿಯ ವೃತ್ತಾಂತವನ್ನು ಕೇಳಿ ಬಹಳ ಆಶ್ಚರ್ಯವೂ ಆಯಿತು. ಸಂತೋಷವೂ ಆಯಿತು. ಭಟರನ್ನು ಕರೆದು, “ಎಲೈ, ಇದನ್ನು ಜೋಪಾನವಾಗಿ ನೋಡಿಕೊಳ್ಳಿ, ಇದಕ್ಕೆ ಬೇಕಾದ ತಿಂಡಿ, ತೀರ್ಥಗಳಲ್ಲಿ ಯಾವುದೂ ಕೊರತೆಯಾಗಬಾರದು.” ಎಂದು ಅಪ್ಪಣೆ ಮಾಡಿದನು. ಮಂತ್ರಿಗಳು ಅದನ್ನು ಕೇಳಿ, “ಮಹಾಸ್ವಾಮಿ ಬೇಡನ ಮಾತು ನಂಬಿಕೊಂಡು ಈ ಹಕ್ಕಿಯನ್ನು ಇಟ್ಟು ಕೊಳ್ಳುವುದೇ? ಎಲ್ಲಾದರೂ ಹಕ್ಕಿಯು ಚಿನ್ನದ ಹಿಕ್ಕೆಯಿಡುವುದುಂಟೆ? ಮೊದಲು ಅದನ್ನು ಓಡಿಸಿ” ಎಂದರು. ಅರಸನು ಮಂತ್ರಿಗಳ ಮಾತನ್ನು ನಂಬಿ ಪಂಜರದ ಬಾಗಿಲು ತೆಗೆಯಿಸಿ ಅದನ್ನು ಓಡಿಸಿದನು.
ಹಕ್ಕಿಯು ಪುರ್ರನೆ ಓಡಿ ಹೋಗಿ ಎತ್ತರವಾದ ತೋರಣದ ಕಂಭದ ಮೇಲೆ ಹೋಗಿ ಕುಳಿತುಕೊಂಡಿತು. ಅಲ್ಲಿ ಹಿಕ್ನೆಯನ್ನು ಹಾಕಿತು. ಹಿಕ್ಕೆಯು ಚಿನ್ನವೂ ಆಯಿತು. ಆಗ “ಪ್ರಥಮ ಮೂರ್ಖನು ನಾನು” ಎಂದು ಮುಂತಾಗಿ ಹೇಳಿ, ಅಕಾಶ ಮಾರ್ಗದಲ್ಲಿ ಸುಖವಾಗಿ ಹಾರಿ ಹೋಯಿತು.” ಎಂದು ಹೇಳಿದನು.
ಗೂಗೆಗಳು ರಕ್ತಾಕ್ಷನ ಮಾತನ್ನು ಆಗಲೂ ನಂಬಲಿಲ್ಲ. ಅವರಿಗೆ ಅಪತ್ತು ಬರುವ ಕಾಲ. ಅದೆಂತು ಹಿತವಚನವನ್ನು ಕೇಳುವರು? ರಾಮನಿಗೆ ಮಾಯಾ ಮೃಗವನ್ನು ಕಂಡಾಗ ಬುದ್ದಿಯಿರಲಿಲವೆ? ನಲನಿಗೆ ಚಿನ್ನದ ಹಂಸೆಗಳನ್ನು ಕಂಡಾಗ ಅಲ್ಲಿ ಮೋಸವಿದೆಯೆಂದು ಏಕೆ ತಿಳಿಯಲಿಲ್ಲ? ಮೊದಲನೆಯ ಸಲ ಸೋತು ಅವಮಾನ ಪಟ್ಟಿದ್ದ ಧರ್ಮರಾಜನಿಗೆ ಜೂಜು ವಿಪತ್ತು ತರುವುದು ಎಂದು ಏಕೆ ತೋರಲಿಲ್ಲ? ಕಾಲವು ಯಾರನ್ನು ಕೊಲ್ಲಬೇಕು ಎಂದಿರುವುದೋ ಅವರ ಬುದ್ಧಿಯನ್ನು ಮೊದಲು ಕೊಲ್ಲುವುದು: ಅದರಿಂದ ಅವರಿಗೆ ಮಿತ್ರರು ಏನು ಹೇಳಿದರೂ ಹಿಡಿಯುವುದಿಲ್ಲ.
ರಕ್ತಾಕ್ಷನು ಇದನ್ನು ಕಂಡು ಇನ್ನು ಅರಿಮರ್ದನನಿಗೆ ಕೇಡು ತಪ್ಪಿದ್ದಲ್ಲ ಎಂದು ನಿಶ್ಚಯವಾಗಿ ತಿಳಿದು ತನ್ನವರನ್ನೆಲ್ಲಾ ಕರೆದು “ನಮ್ಮ, ಅರಸನೂ ಆತನ ಕುಶಲವೂ ಕೆಟ್ಟುವು. ಕುಲಕ್ರಮದಿಂದ ಬಂದ ಮಂತ್ರಿಯು ಏನು ಹೇಳಬೇಕೋ ಅದನ್ನು ಹೇಳಿದೆನು. ಆತನು ಕೇಳಲಿಲ್ಲ ನಾವೂ ಆತನ ಜೊತೆಯಲ್ಲಿದ್ದು ಏಕೆ ಕೆಡಬೇಕು? ನಾವು ಇನ್ನು ಎಲ್ಲಾದರೂ ಹೋಗೋಣ, ಕೇಳಿಲ್ಲವೆ?
ಬರುವ ಕೆಟ್ಟುದ ಚಿಂತಿಸಿ | ಪ್ರತಿಯ ಮಾಡಲು ಬದುಕುವ ॥ 
ಬಲವ ನುಡಿಯಿಸಿ ಬದುಕಿದ | ನರಿಯ ಕಥೆಯನು ಕೇಳೆಯಾ ॥ ೩೭ ॥ 
ಪರಿಜನರು ಅದೆಂತು ಎಂದು ಕೇಳಲು ರಕ್ತಾಕ್ಷನು ಹೇಳಿದನು. ಬಿಲವು ಮಾತಾಡಿದ ಕಥೆ
*****
ಬಿಲವು ಮಾತಾಡಿದ ಕಥೆ ಓದಿ
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...