ಇರುವು-ಅರಿವಿನಾ ಹರವೆ ನಮ್ಮ ಕರುವಾಗಿ ತಾಯಿಯಾಗಿ ಮೂರನೊಂದರಲಿ ಪಿಂಡಗೊಳಿಸುವಾ ಗುರುವೆ ಬಾಯಿಯಾಗಿ. ಸೀಮವನ್ನು ನಿಸ್ಸೀಮದೊಡನೆ ಹುದುಗೊಳಿಸಿ ಮಾಯಿಯಾಗಿ ಜೀವ-ಪುಷ್ಪದೊಳೆ ಫಲಿಸೆ ಪಕ್ವತೆಗೆ ಬರಲಿ ಕಾಯಿಯಾಗಿ || ಕಾಯ ಕಾಣುವದು ಜೀವ ನೋಡುವದು ಭಾವ ತೋ...
ಕವಿಯ ಪತ್ನಿ: ಏನಾಗ್ಯದ ನೋಡೀರಾ ಸ್ವಲ್ಪನಽಽ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣು ಬಾರಾ ತಿಳೀತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶದ ಕಡೆ ದೃಷ್ಟಿ ನೆಟ್ಟಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳ...
೧ ಬೆಣ್ಣೆಯಿಲ್ಲದೆ ತುಪ್ಪವನು ಕಾಯ್ಸಿ ತಿಂದುಂಡು ತೇಗುವೆನು ಎಂದೆಂಬ ಮೂರ್‍ಖನಂತೆ! ಸ್ಫೂರ್ತಿಯಿಲ್ಲದೆ ಕವನ ಹೃದಯದಿಂದಲಿ ಬಂದು ಮನವ ತೂಗುವುದೆಂಬೆ ಹುಚ್ಚನಂತೆ! ೨ ಕಾವ್ಯ ಕನ್ನಿಕೆ ಮಹಾ ಸುಂದರಿಯು ನಿನಗೆಂತು ಒಲಿಯುವಳೊ ತಿಳಿಗೇಡಿ, ಮರುಗಬೇಡ; ಭವ...
ಅರಸಿನ ಕುಲವೋ , ಏನಿದ್ದೇನು! ಸುರವಧುರೂಪೋ ; ಏನಿದ್ದೇನು! ಗುಣವೋ, ಸೊಬಗೋ, ಏನಿದ್ದೇನು! ಪದುಮಾ, ಇದ್ದುವು ನಿನಗೆಲ್ಲಾ ಪದುಮಾ, ಎಚ್ಚತ್ತಳುವುದೆ ಅಲ್ಲದೆ ಕಣ್ಣಿವು ನಿನ್ನನು ಕಾಣುವುವೆ? ನೆನಸಿಕೊಳುವೆ, ಬಿಸುಸುಯ್ಯುವೆ, ಇರುಳನು ನಿನಗೆಯ ಮೀಸಲು ...
ಒಂದೂರಿನಲ್ಲಿ ಒಬ್ಬ ಬಡವನು ಇದ್ದನು. ಅವನು ದಿನವೂ ತಿರುಪಕ್ಕೆ ಹೋಗಿ ಹಿಟ್ಟನ್ನು ತರುವನು. ತನ್ನ ಹೊಟ್ಟೆಗಾಗಿ ಉಳಿದುದನ್ನು ಒಂದು ಮಡಿಕೆಯಲ್ಲಿ ಹಾಕಿ, ತನ್ನ ಮಲಗುವ ಕಡೆ ಅದನ್ನು ಒ೦ದು ಗೂಟಕ್ಕೆ ನೇತು ಹಾಕಿದ್ದನು. ಅದನ್ನು ಆಗಾಗ ನೋಡುತ್ತಿದ್ದರ...
ಹೊಗೆಯಸೊಪ್ಪಿನ ಮೇಲೆ ಪದ್ಯವ ಬರೆವ ನನ್ನನು ಹಳಿಯದೆ ಸಾವಧಾನದೊಳದರ ಮಹಿಮೆಯ ಕೇಳಿರಯ್ಯಾ ಮುಳಿಯದೆ! ಜಗದೊಳೆಷ್ಟೋ ಸೊಪ್ಪು ಸದೆಗಳು ಬೆಳೆದು ಮಡಿಯುತಲಿವೆ ನಿಜ ಪೇಳಿರೈ ನಿಮಗಾವುದೀವುದು ಹೊಗೆಯಸೊಪ್ಪಿನ ಈ ಮಜ! ಹಳಿವರೆಲ್ಲರ ತೃಪ್ತಿಗೋಸುಗ ಇದರ ಜನನವನ...
ರಾಜಕಾರಣಿಗಳಿಗೆ ಬೇಕಿಲ್ಲ ಜನರ ಹಿತ ಬೇಕಾದುದೊಂದೇ – ಅವರ ಮತ ಅಭಿವೃದ್ಧಿ ವಿಚಾರದಲ್ಲಿ ಭಿನ್ನಮತ ಹಣ ಹೊಡೆಯುವುದರಲ್ಲಿ ಸಹಮತ *****...
ಇನಿಯಳ ಮುನಿಸಿನ ಅರ್ಥವ ಜಗದಲಿ ಹೇಳುವರಾರುಂಟು? ಕನಲಿದರೇನು? ಇನಿಯಳ ಹೃದಯದಿ ಪ್ರೀತಿಯ ಸೆಲೆಯುಂಟು ಸಿಡಿಲಿನ ಗುಡುಗಿಗೆ ನಡುಗದ ಕ್ಷೇತ್ರವು ದೊರಕುವುದಿನ್ನೆಲ್ಲಿ? ಸಿಡಿಲಿನ ಒಡಲೊಳಗಿ೦ದಲೆ ಹರಿವುದು ತಣಿಸುವ ಜಲವಲ್ಲಿ ಮನಸಿನ ಆಳವನಳೆದವರುಂಟೆ ಎಲ್...
ಅಹ ಬಿಡುವೆ, ಶ್ರಾಂತಿ ದಯಪಾಲಿಸಿಹ ನಲ್ವರವೆ, ಎನಿತು ಚೆಲುವಾಗಿಸಿಹೆ ಈ ಬಳಕೆ ಸಂಜೆಯನು! ದಿನದ ಸ್ವರ್ಣಾದಾಯವೊಯ್ಯುತಿದೆ ದಿವಕಭ್ರ; ತುಹಿನಕಿರಣನ ಕೋಡು ಮುದದ ಮದ್ದಾನೆ ಬಾನ್- ಸರದೊಳಗೆ ಮುಳುಗಿ ಕೋಡೆತ್ತಿದೊಲು ತೋರುತಿದೆ; ಹಲಸು ಸಂಪಿಗೆ ಮಾವು ತ...
೧ ಅಗಲಿದನು ನಗೆಯ ಗೆಳೆಯನು! ಮುಗಿಲೊಳು ಹಾರಾಡುವಂಥ ಹಕ್ಕಿಗಳಲ್ಲಿ! ಹೊಗುತವುಗಳಿಂದ ಬಿಚ್ಚನು- ಸೊಗಸಿನ ಬಿಚ್ಚನ್ನೆ ತಾನು ತರಹೋಗಿಹನು! ೨ ಅಭಯವ ನೀಡುತ ಭಾರತ- ನಭದಲಿ ನಲಿದಾಡುತ್ತಿರುವ ಚಿಕ್ಕೆಗಳಲ್ಲಿ ವಿಭವದ ಗೆಳೆಯನು ಹೋದನು ಸೊಬಗನ್ನೇ ಸೆಳೆದುಕ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...






