Home / ಕವನ / ಕವಿತೆ / ಛಾಯೆ

ಛಾಯೆ

ಏನುಂಟೊ ಅದನು ಅಲ್ಲಗಳೆಯಲು ಸಲ್ಲ.
ಇಹುದು ಇಲ್ಲೆಂಬ ವ್ಯಾಪಾರ ಉಂಟಿನ ಗಂಟು.
ಇಹುದು ಎಂಬುದು ದೃಶ್ಶ. ದೃಶ್ಯದಾಚೆಗೆ ಸಾರೆ
ಇಲ್ಲೆಂದು ಎನಿಸುವುದು. ರೂಪದಾವಿರ್ಭಾವ,
ರೂಪದ ತಿರೋಭಾವ. ರೂಪವೆಂಬುದು ವಸ್ತು;
ಅಸ್ತಿ ಎಂಬುದು ಭಾವ ಸದ್ವಸ್ತು ಸದ್ಭಾವಗಳ
ಗ್ರಂಥಿ ಗ್ರಥನವೆ ಗ್ರಂಥ. ದೇವಯಾನದ ಪಂಥ.
ಘನ ಘನಂಗಳ ಬಂಧ ಸಂಬಂಧದರಿವಿನಲೆ
ಹೊತ್ತು ಹೊತ್ತುತ್ತಲಿದೆ, ಹೊತ್ತು ಹೊಳೆಯುತ್ತಲಿದೆ.
ಅದರ ಗೊತ್ತೋ ಗುರಿಯೊ! ಅದುವೆ ಎತ್ತೋ ಏಲ್ಲೊ!
ಅದರ ಆಲಯರಚನೆಗಾಗಿ ಲೀಲಾಯಿಸುತ
ಲಯಲಯವು ಪ್ರಲಯವನೆ ಪ್ರತಿಮುಖಿಸಿ ಏಳುತಿದೆ
ಬೀಳುತಿದೆ, ಬಿತ್ತುತಿದೆ, ಎತ್ತುತಿದೆ ತಲೆ ಮತ್ತೆ.
ಇಂಥ ತಲೆ ಬಾಲದಲಿ ದೇಹವನು ತಾಳುತಿದೆ
ಆ ವಿದೇಹದ ಭಾವ “ಓಂ ಭವತಿ! ದೇಹಿ ಭಿ
ಕ್ಷಾಂದೇಹಿ!” ನಾ ನೇಹಿ, ನಾದೇಹಿ, ನಾ ಗೇಹಿ.
ಓ ಪುಷ್ಪಗರ್ಭೆ ಓ ಓಂ ದಿವ್ಯ ಸಂದರ್ಭೆ
ಅಪ್ರಕಾಶಿತವನ್ನು ಸುಪ್ರಕಾಶದಿ ಬೆಳಗಿ
ಇಲ್ಲ ಎನಿಸಿದುದನ್ನು ಅಹುದೆಂಬ ರೀತಿಯಲಿ
ಘನ ಪಿಂಡ ಮಾಡಿ ಮೂಡಿಸು ನಿನ್ನ ಮೋಡಿಯಲಿ
ಬೇರೆ ಸರ್ಗದ ಛಾಯೆ ಬಿತ್ತು ಈ ರೂಢಿಯಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...