ತುಮ್‌ ತುಮ್‌ ತುಮ್‌ತುಮ್‌ ತುಮ್‌ತುಮ್‌ ತುಮ್‌ ತುಮ್‌ ತುಂಬಿ ಬಂದಿತ್ತಽ ತಂಗೀ ತುಂಬಿ ಬಂದಿತ್ತು ॥ ಪಲ್ಲ ॥ ಬೆಳಕಿಗಿಂತ ಬೆಳ್ಳಗೆ ಇತ್ತ ಗಾಳಿಗಿಂತ ತೆಳ್ಳಗೆ ಇತ್ತ ಜಡಿಯಿಂದಿಳಿದ ಗಂಗಿ ಹಾಂಗ ಚಂಗನೆ ನೆಗೆದಿತ್ತ ಮೈಯೊಳಗಿರುವ ಮೂಲಿಮೂಲಿಗೂ ಮೂಡಿ ಬಂದಿತ್ತ ಅಡಿಮುಡಿಗೂಡಿ ನಡುವಂತೆಲ್ಲಾ ಮುಳಿಗಿಸಿ ಬಿಟ್ಟಿತಽ ...

ಶ್ರೀಮತಿ, ಪತಿವೃತೆ, ಈ ಸಲ ಬಲು ಬೇಗ ಉತ್ತರವನ್ನು ಬರೆದು ಬಿಟ್ಟೆಯಲ್ಲ? ಒಳ್ಳೆಯದು. ನಾನು ಪತ್ರಕ್ಕಾಗಿ ಪೇಚಾಡುವುದನ್ನು ನೋಡಿ ನಿನಗೆ ಬಲ ಕೆಟ್ಟೆನಿಸಿರಬಹುದಲ್ಲವೆ? ಮರೆಯದೇ ರಾಯರ ನಾಟಕದ ಬಗ್ಗೆ ಬರೆಯಬೇಕೆಂದು ಬೇರೆ ಬರೆದುಕೊಂಡಿರುವೆ. ಏಕೆ, ಸವ...

ಅವ್ವನ ಹಣೆಯಲಿ ಕುಂಕುಮ ಚೆಂದ ಅಪ್ಪನ ಹಣೆಯಲಿ ಶ್ರೀಗಂಧ! ಎಲೆಗಳ ಮರೆಯಲಿ ಹೂಗಳು ಚೆಂದ ಅವ್ವನ ತೊಡೆಯಲಿ ಈ ಕಂದ! ಕೊಟ್ಟಿಗೆ ತುಂಬಾ ಅಂಬಾ ಅಂಬಾ ಅನ್ನುವ ಆಕಳ ಕರು ಚೆಂದ ಎಲ್ಲದಕಿಂತಾ ಚೆಂದಾ ಚೆಂದಾ ಅನ್ನುವ ಮಕ್ಕಳೆ ಬಲು ಚೆಂದ! *****...

ಆರುಜನರಿವರರಿಗಳೆನ್ನಯ ಬೆನ್ನು ಹತ್ತಿರೆ ನಾನು ಬಯಸುವೆ | ಪಾರುಗಾಣುತಲವರ ಹಸ್ತದಿ ದೂರ ಪೋಗ್ವುದಕೇ || ಮೂರಮಣ ನಾನೆಂತು ದಾಟುವೆ ಘೋರವಾದೀ ಭವದ ಸಾಗರ | ತೋರು ದಾರಿಯ ನನಗೆ ನಿನ್ನಯ ಬೆಳಕು ತೋರುತಲಿ || ೧ || ಹಣ್ಣುಮಾಡಿಹರಿವರು ನನ್ನನು ಕಂಡಕಂಡಡ...

ಗದಗು ತಾ|| ೨೫-೧೦-೧೯೩೫ ಶ್ರೀಕಾಂತ ಎಂದೂ ಇಲ್ಲದೆ ಅಕಸ್ಮಿಕವಾಗಿ ನಾನಿಂದು ಓಲೆ ಬರೆಯುತ್ತಿರುವದನ್ನು ಕಂಡು ನಿನಗೆ ಸೋಜಿಗವಾಗಬಹುದು; ಎಂದು ನಿನಗನಿಸಬಹುದು. ಗೆಳೆಯಾ ಹಾಗೆ ಭಾವಿಸಬೇಡ ನೀನು ವಿಧವಾ ವಿವಾಹವನ್ನು ಮಾಡಿಕೊಂಡೆಯೆಂದು ನಾನು ನಿನ್ನಗೆಳ...

೧ ಅನಂತ ಶೂನ್ಯದಾಳದಲಿ, ದುರಂತವಾದಗಾಧದಲಿ ವಿಶಾಲ ನೀಲ ಮಾಲೆಯಲಿ ತಾರೆಯೊಂದು ಮೆರೆಯಲಿ! ೨ ಆರಿಗೇನು? ಏತಕೆಂದು? ಅರಿಯಲಾರು ಬಲ್ಲರಿಂದು? ದಿನವದರಳಿ ಬಾಡಲ೦ದು, ಮಿನುಗಿ, ಮಿರುಗಿ ಕಾ೦ಬುದು! ೩ ‘ತನ್ನ ಬೆಳಕಿದಲ್ಪವೇನೊ, ಇನ್ನು ಲೋಕವರಿಯದೇನೊ...

ನದಿನೇರದಿ ಸರಿವಂದದಿ ವನಸಲೆಯಲಿ ಮುಗುಳಂದದಿ ಗಿರಿಗಗನದಿ ಗೆಲುವಂದದಿ ಭುವಿಬಯಲಲಿ ಬಲುನಯದಲಿ ಮೆರೆಯುವ ಮೃದುಮಾಯಾ! ಬೆರೆಸಿಹೆ ಸವಿ ಛಾಯಾ! ಪಡುಬಾನಲಿ ಗೆಲುಹರುಷದಿ ಖಗಕುಕಿಲದ ಸವಿರಾಗದಿ ಝರಿಜಾಣ್ಮೆಯ ತಡಿಎಡೆಯಲಿ ಹೊಲಹಸುರಿನ ಸರಿಜತೆಯಲಿ ಮೆರೆಯುವ ...

ಪ್ರೀತಿಯ ಕಿಟಿ, ನಿನ್ನೆ ಸಂಜೆ ಮೇಲ್ಮಹಡಿಗೆ ಹೋಗಿ ವ್ಯಾನ್ಡ್ಯಾನ್‌ರಲ್ಲಿಗೆ ಹೋದೆ. ಆಗಾಗ ಹರಟೆ ಹೊಡೆದು ಬರಲು ಹಾಗೆ ಹೋಗುವುದು ಸಹಜ. ಅಲ್ಲಿ ಕೆಲವೊಮ್ಮೆ ಮಜವಾಗಿರುತ್ತದೆ. ನಾವೆಲ್ಲ ಅಲ್ಲಿ ಮೊತ್ ಬಿಸ್ಕತ್ತುಗಳ [ನ್ಯಾಪ್ತಲೀನ ಗುಳಿಗೆಗಳಿಂದ ತುಂಬ...

ಒಂದು ಮಾಟವಿದೆ ಮೋಟುಮರದಂಥ ಈ ಹಡಗದಲ್ಲಿ, ಒಂದು ಕ್ರಮವಿದೆ,-ಯಂತ್ರಯುಗದ ಈ ಭ್ರಮೆಯಲ್ಲಿ! ಅಂದವಿದೆ,-ಚಂದವಿದೆ ಸಹ! ತಿಳಿದು ನೋಡಲಿದೀಗ! ಇದು ದೋಣಿಯಲ್ಲ,-ತೇಲುತಿರುವ ಹಿರಿಬಣದೋಣಿ! ಕಬ್ಬಿಣದ ಕಟ್ಟಿಡವಲ್ಲ,-ಇಟ್ಟಣಿಸುವ ಪಟ್ಟಣವಿದು! ಇದು ಬ್ರಹ್ಮಾ...

ಅಲ್ಲ ಅಂಗಡ್ಯಾಗ, ಬೆಲ್ಲ ಬಾಜರದಾಗ ಎಲ್ಲರ ಮಾತ ಮನದಾಗ | ಇಟಗೊಂಡು ಬೆಲ್ಲದ್ಹೇರಾಗಿ ಬರುವೀನೆ || ಬೇವಿನ ಆ ಗಿಡಕ, ಬೆಬ್ಬದ ಕಟ್ಟೆ ಕಟ್ಟಿ ಜೇನ ತುಪ್ಪದಲಿ ಹೊಯ್ನೀರ | ಹಣಿಸಿದರ ಬೇವು ತನ್ನಿಸವ ಬಿಡಲಿಲ್ಲ || ಜೀವಕ ಬಂದರ, ತಾಯಾರ ತಂದ್ಯಾರ ಮೈದೂನರ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ?...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...