ಅವ್ವನ ಹಣೆಯಲಿ
ಕುಂಕುಮ ಚೆಂದ
ಅಪ್ಪನ ಹಣೆಯಲಿ
ಶ್ರೀಗಂಧ!
ಎಲೆಗಳ ಮರೆಯಲಿ
ಹೂಗಳು ಚೆಂದ
ಅವ್ವನ ತೊಡೆಯಲಿ
ಈ ಕಂದ!
ಕೊಟ್ಟಿಗೆ ತುಂಬಾ
ಅಂಬಾ ಅಂಬಾ
ಅನ್ನುವ ಆಕಳ ಕರು ಚೆಂದ
ಎಲ್ಲದಕಿಂತಾ
ಚೆಂದಾ ಚೆಂದಾ
ಅನ್ನುವ ಮಕ್ಕಳೆ ಬಲು ಚೆಂದ!
*****
ಕನ್ನಡ ನಲ್ಬರಹ ತಾಣ
ಅವ್ವನ ಹಣೆಯಲಿ
ಕುಂಕುಮ ಚೆಂದ
ಅಪ್ಪನ ಹಣೆಯಲಿ
ಶ್ರೀಗಂಧ!
ಎಲೆಗಳ ಮರೆಯಲಿ
ಹೂಗಳು ಚೆಂದ
ಅವ್ವನ ತೊಡೆಯಲಿ
ಈ ಕಂದ!
ಕೊಟ್ಟಿಗೆ ತುಂಬಾ
ಅಂಬಾ ಅಂಬಾ
ಅನ್ನುವ ಆಕಳ ಕರು ಚೆಂದ
ಎಲ್ಲದಕಿಂತಾ
ಚೆಂದಾ ಚೆಂದಾ
ಅನ್ನುವ ಮಕ್ಕಳೆ ಬಲು ಚೆಂದ!
*****