ಮನವನ್ನು ಮನೆಬಿಟ್ಟು ಕಳಿಸಬೇಕೆಂದು ಒಮ್ಮೆ ನಿರ್ಧರಿಸಿದೆ. ಕಿಡಕಿ, ಬಾಗಿಲು ತೆರೆದೆ. ಗವಾಕ್ಷಿ ತೆರೆದೆ. ಹೊಸಿಲ ಕಿತ್ತೆಸೆದೆ. ಹೊರ ಬಾಗಿಲ, ಹಿತ್ತಲ ಬಾಗಿಲ ತೆರೆದೆ. ಗೋಡೆಗಳ ಬೀಳಿಸಿದೆ. ಛಾವಣಿ ಕಿತ್ತೆಸೆದೆ. ಮನೆಯ ಮುಂದೆ, ಹಿಂದೆ ಬಿಟ್ಟ ಬೇರುಗಳ ಕಿತ್ತೆಸೆದ. ಉಟ್ಟ ಬಟ್ಟೆ, ತೊಟ್ಟ ಆಭರಣ ಎಲ್ಲವನ್ನೂ ತೊರದೆ. ನಾನು ಬಯಲಲ್ಲಿ, ಬಯಲಲ್ಲಿ ನಾನು, ಎಂಬಂತೆ ಮನವ ದಿಗಂಬರವಾಗಿಸಿ ನಾ ಮೂಕಿಯಂತೆ ನಿಂತೆ. ಮೆತ್ತಗೆ ಮೌನದಲ್ಲಿ ಎದೆ ಬಾಗಿಲ ತಟ್ಟಿ ಹೇಳಿತು ಮನ ‘ನಾನಿಲ್ಲೇ ಇದ್ದೇನೆ’ ಎಂದು.
*****








