Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಸೆಪ್ಟೆಂಬರ ೨೫, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಸೆಪ್ಟೆಂಬರ ೨೫, ೧೯೪೨

ಪ್ರೀತಿಯ ಕಿಟಿ,

ನಿನ್ನೆ ಸಂಜೆ ಮೇಲ್ಮಹಡಿಗೆ ಹೋಗಿ ವ್ಯಾನ್ಡ್ಯಾನ್‌ರಲ್ಲಿಗೆ ಹೋದೆ. ಆಗಾಗ ಹರಟೆ ಹೊಡೆದು ಬರಲು ಹಾಗೆ ಹೋಗುವುದು ಸಹಜ. ಅಲ್ಲಿ ಕೆಲವೊಮ್ಮೆ ಮಜವಾಗಿರುತ್ತದೆ. ನಾವೆಲ್ಲ ಅಲ್ಲಿ ಮೊತ್ ಬಿಸ್ಕತ್ತುಗಳ [ನ್ಯಾಪ್ತಲೀನ ಗುಳಿಗೆಗಳಿಂದ ತುಂಬಿದ ಬಟ್ಟೆ ಬೀರುವಿನಲ್ಲಿಟ್ಟರಿಂದ ಆ ಗುಳಿಗೆ ವಾಸನೆ ಪಡೆದ ಬಿಸ್ಕತ್ತುಗಳು ] ತಿಂದು, ಲಿಂಬು ಪಾನಕ ಕುಡಿಯುತ್ತೇವೆ. ನಾವು ಪೀಟರ್ ಬಗ್ಗೆ ಚರ್ಚಿಸಿದೆವು. ಪೀಟರ್ ಅದೆಷ್ಟು ಸಲ ನನ್ನ ಕೆನ್ನಗಳಿಗೆ ಹೊಡೆದು ಪೀಡಿಸುತ್ತಾನೆ ಎಂಬುದನ್ನು ನಾನವರಿಗೆ ಹೇಳಿ, ಹಾಗೆ ಹುಡುಗನಿಂದ ದಬಾವಣೆಗೆ ಒಳಗಾಗುವುದನ್ನು ನಾನು ಇಷ್ಟಪಡುವುದಿಲ್ಲವೆಂದೂ ಹೇಳಿದೆ.

ಆದರೆ ಅವರು ಮಾತ್ರ ಹೆತ್ತವರಲ್ಲಿರುವ ವಿಲಕ್ಷಣ ಶೈಲಿಯಲ್ಲಿ, ನಾನು ಪೀಟರ್‌ನನ್ನು ಇಷ್ಟಪಟ್ಟರೆ ಆಗುತ್ತಿರಲಿಲ್ಲವೇ? ಎಂದು ಕೇಳಿದರು. ಯಾಕೆಂದರೆ ಆತ ನನ್ನನ್ನು ಖಂಡಿತವಾಗಿಯೂ ಬಹಳ ಮೆಚ್ಚಿಕೊಂಡಿದ್ದನು. ನಾನು “ಓ ದೇವರೇ!” ಎಂದುಕೊಂಡೆ ಮತ್ತು ಹೇಳಿದೆ “ಓಹೋ! ಅದು ಸಾಧ್ಯವಿಲ್ಲ”

ಪೀಟರ್ ಸ್ವಲ್ಪ ಹೆಚ್ಚೆ ಎಬಡನಾದರೂ ಹೆಣ್ಣು ಮಕ್ಕಳೊಂದಿಗೆ ಹೆಚ್ಚು ಬೆರೆಯದ ಹುಡುಗರಲ್ಲಿ ಇರುವಂತೆ ಆತನಲ್ಲೂ ಇರುವ ಅತೀ ನಾಚಿಕೆಯ ಕಾರಣದಿಂದ ಹಾಗೆ ವರ್ತಿಸುತ್ತಿರಬಹುದೆಂದು ನನಗನ್ನಿಸುತ್ತದೆ ಎಂದು ಹೇಳಿದೆ. ಇನ್ನೊಂದು ಮಾತು ಹೇಳಲೇಬೇಕು. ಅದೆಂದರೆ ಗುಪ್ತಗೃಹದ [ಗಂಡಸರ ವಿಭಾಗ] ನಿರಾಶ್ರಿತರ ಕಮಿಟಿಯಲ್ಲಿ ಬಹಳ ಕುಶಲಿಗಳಿದ್ದಾರೆ. ಅವರೇನು ಮಾಡಿದರೆಂದು ಹೇಳುವೆ. ನಮಗೋಸ್ಕರ ನಮ್ಮ ಕೆಲವು ವಸ್ತುಗಳನ್ನು ಗುಪ್ತವಾಗಿಟ್ಟುಕೊಂಡ ಸ್ನೇಹಿತನೂ ಹಾಗೂ ಟ್ರೇವಿಸ್‌ನ ಚೀಫ್ ರಿಪ್ರೆಸೆಂಟೆಟಿವ್ ಆದ ವ್ಯಾನ್ ಡಿಜ್ಕ್‌ಗೆ ನಮ್ಮ ವಿಷಯಗಳನ್ನು ನಮ್ಮಿಂದಲೇ ತಲುಪಿಸುವಂತೆ ಮಾಡಲು ನಮ್ಮ ಸಂಸ್ಥೆಯೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಸೌಥ್ ಜೀಲ್ಯಾಂಡಿನ ಕೆಮಿಸ್ಟ್ ಒಬ್ಬನಿಗೆ ಪತ್ರಾಯಿಸಿದರು., ಅದು ಹೇಗಿತ್ತೆಂದರೆ ಅವರು ತನ್ನ ಉತ್ತರದ ಕಾಗದವನ್ನು ವಿಳಾಸವಿರುವ ಲಕೋಟೆಯಲ್ಲಿಟ್ಟು ಕಳಿಸಬೇಕಿತು.. ಡ್ಯಾಡಿ ಆ ಲಕೋಟೆಯನ್ನು ಆಫೀಸಿನ ವಿಳಾಸಕ್ಕೆ ಕಳಿಸಿದರು. ಯಾವಾಗ ಆ ಲಕೋಟೆ ಜೀಲ್ಯಾಂಡಿನಿಂದ ಬರುತ್ತೋ, ಆಗೆಲ್ಲ ಒಳಗಿನ ಪತ್ರವನ್ನು ತೆಗೆದುಕೊಂಡು ಅದರಲ್ಲಿ ನಾವಿನ್ನೂ ಜೀವಂತ ಇರುವದರ ಸಂಕೇತವಾಗಿ ಡ್ಯಾಡಿಯ ಕೈಬರಹದ ಸಂದೇಶವಿಟ್ಟು ಕಳಿಸಲಾಗುತ್ತಿತ್ತು. ಈ ರೀತಿ ವ್ಯಾನ್ ಡಿಜ್ಕ್ ಆ ಉತ್ತರವನ್ನು ಓದಿದರೂ ಯಾರಿಗೂ ಸಂದೇಹ ಬರುತ್ತಿರಲಿಲ್ಲ. ಅವರು ವಿಶೇಷವಾಗಿ ಜೀಲ್ಯಾಂಡನ್ನೆ ಆಯ್ಕೆ ಮಾಡುತ್ತಾರೆ. ಅದು ಬೆಲ್ಜಿಯಂಗೆ ಹತ್ತಿರ, ಮತ್ತು ಸುಲಭವಾಗಿ ಪತ್ರಗಳನ್ನು ಗಡಿಯಾಚೆ ಕಳುಹಿಸಲೂಬಹುದು. ಅದಕ್ಕೂ ಹೆಚ್ಚಾಗಿ ಜೀಲ್ಯಾಂಡಿಗೆ ವಿಶೇಷ ಪರವಾನಿಗೆಯ ಹೊರತಾಗಿ ಯಾರೊಬ್ಬರಿಗೂ ಅನುಮತಿ ಇಲ್ಲ. ಹಾಗಾಗಿ ನಾವಲ್ಲಿ ಇದ್ದೆವೆಂದು ಅವರೆಂದುಕೊಂಡರೆ, ಆತ ಪ್ರಯತ್ನಿಸಲೂ ಆಗುತ್ತಿರಲಿಲ್ಲ ಮತ್ತು ನಮ್ಮ ಅವಲೋಕಿಸಲು ಆಗುತ್ತಿರಲಿಲ್ಲ.

ನಿನ್ನ,
ಆನ್.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...