Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ನವೆಂಬರ ೧೨, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ನವೆಂಬರ ೧೨, ೧೯೪೨

ಪ್ರಿಯ ಕಿಟಿ,

ಮೇಪ್, ಅವರಿಗೆ ಗುಪ್ತವಾಸದ ವ್ಯವಸ್ಥೆ ಆದ ಬಗ್ಗೆ ಹೇಳಿದಾಗ ಡಸೆಲ್ ಭಯಂಕರ ಖುಷಿಯಾದರು. ಆಕೆ ಆದಷ್ಟು ಬೇಗನೇ ಬಂದು ಸೇರಿಕೊಳ್ಳಲು ತ್ವರೆ ಮಾಡಿದಳು. ಅದರಲ್ಲೂ ಶನಿವಾರ ಬರುವಂತೆ ಹೇಳಿದಳು. ಆದರೆ ಅವರು ಆ ದಿನ ಸಾಧ್ಯವಾಗುವ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ಅವರಿಗೆ ತಮ್ಮ ರೋಗಿಗಳ ಇಂಡೆಕ್ಸ ಕಾರ್ಡನ್ನು ಅಪ್ ಟು ಡೇಟ್ ಮಾಡಿಕೊಳ್ಳಬೇಕಿತ್ತು. ಹಾಗೇ ಕೆಲವು ರೋಗಿಗಳನ್ನು ಪರೀಕ್ಷಿಸಬೇಕಿತ್ತು ಮತ್ತು ತಮ್ಮ ಅಕೌಂಟನ್ನು ಸರಿಯಾಗಿ ಇಡಬೇಕಿತ್ತು. ಇಂದು ಮುಂಜಾನೆ ಮೇಪ್ ಈ ಎಲ್ಲ ವಿಷಯಗಳನ್ನು ಹೊತ್ತು ನಮ್ಮಲ್ಲಿಗೆ ಬಂದಳು. ಡಸೆಲ್‌ರ ಈ ವಿಳಂಬ ನೀತಿ ಜಾಣತನದಲ್ಲ ಎಂದು ನಮಗನ್ನಿಸಿತು. ಈ ಎಲ್ಲ ಸಿದ್ಧತೆಗಳು ನಾವು ನಮ್ಮೊಂದಿಗೆ ಇರಿಸಿಕೊಳ್ಳಲು ಬೇಡವೆಂದು ಹೇಳಿದ ಹಲವಾರು ಜನರಿಗೆ ಉತ್ತರ ನೀಡಬೇಕಾದ ಅನಿವಾರ್ಯತೆಯನ್ನು ಉಂಟುಮಾಡುತ್ತಿದ್ದವು. ಮೇಪ್ ಶನಿವಾರ ಡಸೆಲ್‌ರಿಗೆ ಬರಲಾಗದೇ ಎಂದು ಕೇಳಲು ಪುನಃ ಹೊರಟಿದ್ದಳು.

ಡಸೆಲ್ ಅದಕ್ಕೆ ಆಗದೆಂದರು. ಈಗವರು ಸೋಮವಾರ ಬರುತ್ತಿದ್ದಾರೆ. ಏನಾದರೂ ಆಗಲಿ ಅವರು ಸಿಕ್ಕ ಅವಕಾಶವನ್ನು ಒಮ್ಮೆಗೆ ಒಪ್ಪಿಕೊಳ್ಳಲಿಲ್ಲ ಎಂಬುದು ವಿಚಿತ್ರ ಹುಚ್ಚುತನವೇ ಎಂದು ಹೇಳುತ್ತೇನೆ. ಒಂದೊಮ್ಮೆ ಅವರೇನಾದರೂ ಹೊರಗಡೆ ಸಿಕ್ಕಿಬಿದ್ದಿದ್ದರೆ ತನ್ನ ಇಂಡೆಕ್ಸ್ ಕಾರ್ಡಗಳನ್ನು ಸರಿಮಾಡಿಕೊಳ್ಳುತ್ತ, ಹಣದ ಲೆಕ್ಕಾಚಾರ ಹಾಕುತ್ತ, ರೋಗಿಗಳ ನೋಡುತ್ತ ಇರುತ್ತಿದ್ದರೇ? ಯಾಕೆ ವಿಳಂಬ ಮಾಡುತ್ತಿದ್ದಾರೆ? ಹೀಗೆ ಒಪ್ಪಿಕೊಂಡಿದ್ದು ಡ್ಯಾಡಿಯ ಮೂರ್ಖತನ ಎಂದು ನನಗನ್ನಿಸಿದೆ. ಬೇರೇನೂ ಸುದ್ದಿ ಇಲ್ಲ.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...