ಪ್ರೀತಿಯ ಕಿಟಿ,
ಛನುಕಾ ಮತ್ತು ಸೇಂಟ್ ನಿಕೋಲಾಸ್ ಈ ಎರಡು ದಿನಗಳು ಈ ವರ್ಷ ಒತ್ತೊಟ್ಟಿಗೆ ಬಂದಿವೆ. ಆದರೆ ಬರಿ ಒಂದು ದಿನದ ಅಂತರದಲ್ಲಿ. ನಾವು ಛನುಕಾ ದಿನದ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಪರಸ್ಪರ ಸಣ್ಣ ಪುಟ್ಟ ಕಾಣಿಕೆಗಳನ್ನು ಹಂಚಿಕೊಂಡೆವು ಮತ್ತು ಕ್ಯಾಂಡಲ್‌ಗಳನ್ನು ಹಚ್ಚಿದೆವು. ಮೊಂಬತ್ತಿಯ ಕೊರತೆಯ ಕಾರಣ ಅದನ್ನು ಕೇವಲ ಹತ್ತು ನಿಮಿಷ ಅಷ್ಟೇ ಹಚ್ಚಬಹುದಾಗಿತ್ತು, ಆದರೂ ಅದು ಹಾಡು ಮುಗಿಯುವವರೆಗೂ ಉರಿಯಲು ತೊಂದರೆ ಇರಲಿಲ್ಲ. ವ್ಯಾನ್ಡ್ಯನ್‌ರು ಕಟ್ಟಿಗೆಯ ಕ್ಯಾಂಡಲ್‌ಸ್ಟಿಕ್ ಒಂದನ್ನು ಮಾಡಿದ್ದರು. ಅದು ಕ್ಯಾಂಡಲ್ ವ್ಯವಸ್ಥಿತವಾಗಿ ಉರಿಯಲು ಸಹಾಯವಾಗುತ್ತಿತ್ತು.
ಶನಿವಾರವೇ ಸೇಂಟ್ ನಿಕೋಲಾಸ್ ದಿನ, ತುಂಬಾ ಮಜವಾಗಿತ್ತು. ಮೇಪ್ ಮತ್ತು ಎಲಿ ವೊಸನ್ ಡ್ಯಾಡಿಯೊಂದಿಗೆ ಆಗಾಗ ಏನೋ ಸಣ್ಣ ದನಿಯಲ್ಲಿ ಚರ್ಚಿಸುತ್ತಾ ನಮಗೆ ಕುತೂಹಲ ಮೂಡಿಸಿದ್ದರು. ಹಾಗಾಗಿ ಸಹಜವಾಗಿ ನಮಗೆ ಏನೋ ನಡೆದಿದೆ ಎಂಬ ಗುಮಾನಿ ಇತ್ತು.
ಮತ್ತದು ಹಾಗೇ ಆಯಿತು. ಸರಿಯಾಗಿ ಎಂಟು ಗಂಟೆಗೆ ನಾವೆಲ್ಲ ಸಣ್ಣ ಕತ್ತಲೆಯಲ್ಲಿ ಕಟ್ಟಿಗೆ ಮೆಟ್ಟಿಲುಗಳ ದಾರಿ ಇಳಿದು[ನಾನಂತೂ ನಡುಗಿಹೋದೆ. ಪುನಃ ಮೊದಲಿನ ಆ ಮೇಲ್ಮಹಡಿಯಲ್ಲಿಯೇ ಸುರಕ್ಷಿತವಾಗಿದ್ದರೆ ಎಂದು ಬಯಸುತ್ತೇನೆ.] ಚಿಕ್ಕ ಕೋಣೆಯೊಂದಕ್ಕೆ ಬಂದೆವು. ಅಲ್ಲಿ, ಅಲ್ಲಿ ಯಾವುದೇ ಕಿಟಕಿಗಳು ಇಲ್ಲವಾಗಿದ್ದ ಕಾರಣ ನಮಗೆ ದೀಪವನ್ನು ಬೆಳಗಬೇಕಾಗಿತ್ತು. ಅದಾದ ಮೇಲೆ ಡ್ಯಾಡಿ ದೊಡ್ಡ ಕಬೋರ್ಡ ಒಂದನ್ನು ತೆಗೆದರು. ಓಹೋ! ಎಷ್ಟು ಚೆನ್ನ ಎನ್ನುತ್ತಾ ನಾವೆಲ್ಲ ಖುಷಿಯಿಂದ ಚೀರಿದೆವು. ಒಂದು ದೊಡ್ಡ ಬಾಸ್ಕೆಟ್ಟು ಒಂದು ಮೂಲೆಯಲ್ಲಿ ಕಾಗದದ ಸೇಂಟ್ ನಿಕೋಲಾಸ್‌ನನ್ನು, ಮೇಲೆ ಬ್ಲಾಕ್ ಪೀಟರ್‌ನ ಮುಖವಾಡದಿಂದ ಅಲಂಕರಿಸಲ್ಪಟ್ಟಿತ್ತು.
ಬೇಗಬೇಗನೇ ನಾವು ಬಾಸ್ಕೆಟ್‌ನ್ನು ನಮ್ಮೊಂದಿಗೆ ಮೇಲ್ಮಹಡಿಗೆ ಕೊಂಡ್ಯೊಯ್ದೆವು. ಅದರಲ್ಲಿ ಸಣ್ಣ ಸಣ್ಣ ಚೆಂದದ ಉಡುಗೊರೆಗಳು, ಅದಕ್ಕೆ ಬೇಕಾಗುವಂತಹ ಕವಿತೆಗಳು ಲಗ್ತ ಇದ್ದವು. ನನಗೆ ಗೊಂಬೆಯೊಂದು ದಕ್ಕಿತು. ಅದರ ಸ್ಕರ್ಟ ಎಲ್ಲ ಬೇಡದ ಸರಕುಗಳನ್ನು ತುಂಬುವ ಚೀಲದಂತಿದೆ. ಕೊನೆಯಲ್ಲಿ ಡ್ಯಾಡಿಗೆ ಒಂದು ಪುಸ್ತಕ ಮತ್ತಿನ್ನೇನೋ ದೊರೆಯಿತು. ಏನೇ ಆಗಲಿ. ಇದೊಂಥರಾ ಒಳ್ಳೆಯ ಯೋಚನೆ. ಇಲ್ಲಿಯವರೆಗೆ ನಾವ್ಯಾರು ಸೇಂಟ್ ನಿಕೋಲಾಸ್ ಹಬ್ಬ ಆಚರಿಸಿರಲಿಲ್ಲ. ಒಂದು ಹೊಸ ಪ್ರಾರಂಭಕ್ಕೆ ಒಳ್ಳೆಯ ದಾರಿ.
ನಿನ್ನ,
ಆನ್
*****






