Home / ಕವನ / ಕವಿತೆ / ದ್ವಂದ್ವಯುದ್ಧ

ದ್ವಂದ್ವಯುದ್ಧ

ದ್ವಂದ್ವಯುದ್ಧದ ಜಗವಿದು,-ಇಬ್ಬರು ಜಟ್ಟಿಗಳು ಕೂಡಿ
ಒಬ್ಬರೊಬ್ಬರ ಸಾವಿಗಾಗಿ ಸಮರದಲ್ಲಿ ಹೋರಾಡುತಿಹರು.
ಗೆದ್ದವನೇ ಎದ್ದ. ಬಿದ್ದವನೇ ಬಿದ್ದ.
ಗೆದ್ದವನ ಕುಲಕೋಟಿಯೆಲ್ಲ ಉದ್ಧಾರವಾಯ್ತು.
ಬಿದ್ದವನಿಗೆ ಇದ್ದುಬಿದ್ದವರು,-ಗತಿಗೆಟ್ಟಿರು ಇದ್ದುಬಿದ್ದಲ್ಲಿ,
ಇಬ್ಬರ ಸೋಲು-ಗೆಲವು ತೂಗುವವು ಮೂಲೋಕದ ದೈವವನ್ನು.

ಜಟ್ಟಿಗಳು ಮಾನವರಲ್ಲ, -ಪ್ರಮೇಯಗಳೆರಡು, ಎರಡು ತತ್ವಗಳು!
ಹದ್ದನ್ನು ಹದ್ದು ಕಾದಿದಂತೆ ಬೆನ್ನಟ್ಟುವವು ವಾಯುಲೋಕದಲ್ಲಿ.
ಹೋರಾಡುವವು ವಾರಿಧಿಯಲ್ಲಿ,-ತಿಮಿಂಗಿಲವು ತಿಮಿಂಗಿಲದೊಡನೆಯಂತೆ.
ಈ ಕಲ್ಪನೆಗಳ ಕಾದಾಟಕ್ಕೆ ಕಂಪಿಸಿತ್ತು ಜಗವೆಲ್ಲ,
ರಕ್ತದ ಕಾಲುವೆ ಹರಿಯಿತು, ಕೋಟಿ ನಾರಿಯರ ಕುಂಕುಮವಳಿಸಿತು,
ಆದರೆ ಮುಗಿದಿಲ್ಲ ತತ್ವಗಳ ತುಮುಲ ಯುದ್ಧ!
ಕಲ್ಪನೆಗಳಾವವು ಗೊತ್ತೆ?
ಇದ್ದುದೇ ಇರಬೇಕೆಂಬ ಗೊಂದಲ, ಹೊಸದೊಂದು ಬರಬೇಕೆಂಬ ಹಂಬಲ;
ಶ್ರೀಮಂತರದಿರಬೇಕೆಂಬ ಕಸಿವು, ಶ್ರೀಮ೦ತರು ಸಾಯಬೇಕೆಂಬ ಹಸಿವು,
ಸಾಮ್ರಾಜ್ಯದ ಮಬ್ಬು, ಸ್ವಾತಂತ್ರ್ಯದ ಉಬ್ಬು;
ಬಿಳಿದೊಗಲಿನ ಕುಣಿತಕ್ಕೆ ಕರಿದೊಗಲು ಮಣಿದಿರಬೇಕೆಂಬಾಸೆ,
ಕರಿಬಿಳಿದರ ಭೇದವನಳಿಸಿಬಿಡಬೇಕೆಂಬ ಭಾಷೆ;
ಉಳಿದವರ ಸುಖವೆಲ್ಲ ನನ್ನ ಸುಖಕ್ಕೆ ಬರಿ ಸವುದೆಯೆಂಬ ಭಾವ,
ವಿಶ್ವದ ಸುಖವೇ ವ್ಯಕ್ತಿಯ ಸುಖವೆನಿಸಬೇಕೆಂಬ ಹೇವ;
ಬಡವರ ಬಾಳ್ವೆಯನ್ನು ಹಿಂಡಿ ಹಿಪ್ಪಿಯಾಗಿಸುವ ನೀತಿ,
ಹಣವಿದ್ದವರ ಹೆಣ ಕೆಡವಬೇಕೆಂಬ ರೀತಿ,-
ಉಯ್ಯಾಲೆಯಾಡುವದು ಜಗೆತ್ತು, ಶಕ್ತಿಗಳೆರಡು ಜೀಕುವಲ್ಲಿ,
ಸ್ನೇಹತಂತುಗಳು ಹರಿದವು, ಮಣಿಯು ಕಳಚಿ ಬಿತ್ತು,
ಉರುಳಿ ಬೀಳುವದೆ ಮರವು? ಹೊರಳಿ ಹೋಗುವದೆ ಜಗತ್ತು?
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...