ಹೃದಯ ಮಂದಿರದಲಿ
ಹುದಗಿದ ಆಶಾದೀಪ
ಹೆದರಿತೋ ಬಿರುಗಾಳಿ ಘನ ಶಬ್ದಕೇ ||೧||
ಮಂದದಲಿ ಉರಿಯುವದು
ಅಂದದಲಿ ಬೆಳೆಗುವದು
ಚೆಂದಾಗಿ ತೋರುವದು ಜನರ ನಯನದಿ ||೨||
ಆಶಾದೀಪ ಕಂಡು
ಆಶೆಯೇ ಹುಟ್ಟುವದು
ನಿಶೆಯು ಏರುವದು ಘನ ಯೋಜನೆಯಲಿ ||೩||
ದೀಪ ಬೆಳಗಿದ ಮನೆ
ಕಪ್ಪು ಬೆಳಕು ತಂದೀತೆ
ದೀಪವಿದು ಆಶೆಯಾ ಪೂರೈಸದಿರದೆ ||೪||
ನೊಂದದಲಿ ಉರಿಯುವದು
ಒಂದೊಂದು ನಿಮಿಷದಲಿ
ಹೊಂದಿಹದು ಹೃದಯ ಆನಂದಲೀ ||೫||
ಅಕೋ ಆಶಾದೀಪ
ಆಕಾಶದಿ ತೇಲಿಹದು
ಭಕುತರ ಸದ್ಭಾವ ಭಕ್ತಿಯಲಿ ||೬ ||
ತೋರುವರೆ ಕರಿಯುವರೆ
ಬರುವರೇ ತರುವರೇ
ತಿರಿಗುವರೇ ಮರಗುವರೆ, ಇದಕ್ಕೆ ಇನ್ನು ||೭||
*****








