Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಮಾರ್ಚ ೧೯, ೧೯೪೩

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಮಾರ್ಚ ೧೯, ೧೯೪೩

ಪ್ರಿಯ ಕಿಟಿ,

ನಿನ್ನೆ ಯುದ್ಧದ ಕುರಿತಾಗಿ ಹೊಸ ವಿಚಾರ ಹೇಳುತ್ತಿದ್ದೆ ಅಲ್ಲವೇ? ಆದರೆ ಒಂದು ಗಂಟೆಯ ಒಳಗಾಗಿ ಆ ಖುಷಿಯ ಹಿಂದೆ ಹತಾಶೆ ಹಿಂಬಾಲಿಸಿ ಬಂದಿತ್ತು. ಟರ್ಕಿಸ್ತಾನ ಇನ್ನು ಯುದ್ಧದಲ್ಲಿ ಭಾಗವಹಿಸಿಲ್ಲ. ಟರ್ಕಿಸ್ತಾನ ತನ್ನ ತಟಸ್ಥ ನೀತಿಯನ್ನು ಬಿಟ್ಟು ಯುದ್ಧದಲ್ಲಿ ಭಾಗವಹಿಸಲಿದೆ ಎಂಬ ನಿನ್ನೆಯ ವಿಚಾರ ಕೇವಲ ಅಲ್ಲಿಯ ಕ್ಯಾಬಿನೆಟ್ ಮಂತ್ರಿಯೋರ್ವರ ಹೇಳಿಕೆಯಾಗಿತ್ತು. ಆದರೆ ನಗರದ ಪ್ರಮುಖ ಭಾಗದಲ್ಲಿರುವ ಪ್ರಮುಖ ಸುದ್ದಿ ಪತ್ರಿಕೆಯೊಂದು ಈ ಒಂದೇ ವಾಕ್ಯ ಹಿಡಿದು ಕಿರುಚಾಡಿತ್ತು. “ಟರ್ಕಿಸ್ಥಾನ ಇಂಗ್ಲೆಂಡಿನ ಪರವಾಗಿದೆ” ಎಂದು ಪ್ರಕಟಿಸಿತ್ತು. ಇದರಿಂದ ಆ ಪತ್ರಿಕೆಯ ಪ್ರತಿಗಳು ಲೆಕ್ಕವಿಲ್ಲದಷ್ಟು ಮಾರಾಟವಾದವು. ಹೀಗಾಗಿ ಆ ಸಂಸತದ ಸುದ್ದಿ ನಮ್ಮವರೆಗೂ ತಲುಪಿತ್ತು. ಸುಮಾರು ೫೦೦ ರಿಂದ ೧೦೦೦ ಗೀಲ್ಡರ್ ನೋಟುಗಳನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಘೋಷಿಸಲಾಗಿದೆ. ಕಾಳಸಂತೆಕೋರರ ಮತ್ತು ಅಂತಹ ವ್ಯವಹಾರಸ್ಥರ ಹತೋಟಿಗೆ ತರಲು ಇದೊಂದು ಉಪಾಯವಾಗಿದೆ. ಆದರೆ ಇದರಿಂದ ಬೇರೆ ರೀತಿಯ ಕಪ್ಪುಹಣ ಹೊಂದಿದವರಿಗೂ ಹಾಗೂ ನಮ್ಮಂತೆ ಗುಪ್ತವಾಸದಲ್ಲಿ ಇರುವವರಿಗೂ ಇದು ಸಂಕಟದ ಸಂಗತಿ. ಒಂದೊಮ್ಮೆ ನಿನಗೆಲ್ಲಾದರೂ ೧೦೦೦ ಗೀಲ್ಡರ್ [ನೆದರಲ್ಯಾಂಟಿನ ಹಿಂದಿನ ಕಾಲದ ಕರೆನ್ಸಿ ಯುನಿಟ್] ನೋಟು ಯಾರಿಗಾದರೂ ಕೊಡಲು ಹೋದರೆ ಮೊದಲು ಅದು ನಿನಗೆ ದೊರೆತ ಬಗೆಯನ್ನು ಸಾಬೀತು ಪಡಿಸಲು ಗೊತ್ತಿರಬೇಕು. ಈ ನೋಟುಗಳನ್ನು ಈಗಲೂ ತೆರಿಗೆ ಪಾವತಿಗೆ ಬಳಸಬಹುದು. ಆದರೆ ಅದೂ ಕೂಡಾ ಮುಂದಿನ ವಾರದವರೆಗೆ ಮಾತ್ರ. ಡಸೆಲ್‌ಗೆ ಕಾಲಿನಿಂದ ಆಪರೇಟ್ ಮಾಡುವ ದಂತ ಪರೀಕ್ಷೆಗೆ ಬಳಸುವ ಒಂದು ಹಳೆಯ ಫ್ಯಾಷನ್ನಿನ ಡ್ರಿಲ್ ಮಷಿನ್ ದೊರಕಿದೆ. ನನ್ನ ಹಲ್ಲುಗಳ ಪೂರ್ತಿ ತಪಾಸಣೆಯನ್ನು ಒಂದು ಸಲ ಅವರಿಂದ ಮಾಡಿಸಿಕೊಳ್ಳಬೇಕಾಗಿದೆ. ರೇಡಿಯೋದಲ್ಲಿ ಜರ್ಮನ್ ಹಿಟ್ಲರ್‌ಗಳು, ಯುದ್ಧದಲ್ಲಿ ಗಾಯಗೊಂಡ ಸೈನಿಕರೊಂದಿಗೆ ನಡೆಸಿದ ಸಂಭಾಷಣೆ ಪ್ರಸಾರವಾಗುತ್ತಿತ್ತು. ಕೇಳುತ್ತಿದ್ದರೆ ಕೆಟ್ಟದೆನ್ನಿಸುತ್ತಿತ್ತು, ಕಿಟಿ. ಆ ಪ್ರಶ್ನೋತ್ತರಗಳು ಹೇಗಿದ್ದವು ಎಂಬುದನ್ನು ಕೇಳು.

ನನ್ನ ಹೆಸರು ಹೆನ್ರಿಚ್ ಶೆಫಲ್

ಎಲ್ಲಿ ಗಾಯಗೊಂಡಿರಿ

ಸ್ಟಾಲಿಂಗ್ರಾಡ್ ಸಮೀಪ

ಗಾಯ ಯಾವ ಬಗೆಯದಾಗಿದೆ?

ಎರಡೂ ಕಾಲುಗಳು ಮರಗಟ್ಟಿವೆ ಮತ್ತು ಎಡ ತೋಳಿನ ಮೂಳೆ ಮುರಿದಿದೆ. ಕಿಟಿ, ರೇಡಿಯೋದಲ್ಲಿ ಇದನ್ನು ಕೇಳುತ್ತಿದ್ದರೆ ಯಾವುದೋ ಭಯಂಕರ ಬೊಂಬೆಯಾಟವನ್ನು ಕೇಳಿದಂತಿದೆ. ಗಾಯಗೊಂಡವರು ತಮ್ಮ ಗಾಯದ ಬಗ್ಗೆ ಅಭಿಮಾನಗೊಂಡಂತಿದ್ದಾರೆ. ಒಬ್ಬರಿಗಿಂತ ಒಬ್ಬರು ಹೆಮ್ಮೆ ಪಟ್ಟವರಂತೆ ಕಾಣುತ್ತಿದ್ದಾರೆ. ಅದರಲ್ಲೂ ಒಬ್ಬಾತ ಎಷ್ಟು ಭಾವುಕನಾಗಿದ್ದನೆಂದರೆ ಒಂದೇ ಸಮನೆ ಆ ಹಿಟ್ಲರ್‌ಗಳ ಕೈ [ ಆತ ಸದ್ಯ ತನ್ನ ಕೈಯನ್ನು ಕಳೆದುಕೊಂಡಿರಲಿಲ್ಲ] ಕುಲುಕುತ್ತಲೇ ಇದ್ದ. ಕಾರಣ ಅವನಿಗೆ ಮಾತನಾಡಲು ಶಬ್ದಗಳೇ ಬಾಯಿಂದ ಹೊರಡುತ್ತಿರಲಿಲ್ಲ.

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...