Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ನವೆಂಬರ ೧೦, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ನವೆಂಬರ ೧೦, ೧೯೪೨

ಪ್ರೀತಿಯ ಕಿಟಿ,

ಒಳ್ಳೆಯ ಸುದ್ದಿ- ನಮ್ಮೊಂದಿಗೆ ಇನ್ನೊಬ್ಬ ಎಂಟನೆಯ ವ್ಯಕ್ತಿಯನ್ನು ಇಲ್ಲಿ ಸೇರಿಸಿಕೊಳ್ಳುತ್ತಿದ್ದೇವೆ. ಹೌದು. ನಿಜಕ್ಕೂ. ನಮ್ಮಲ್ಲಿ ಇನ್ನೊಬ್ಬನಿಗೆ ಸಾಕಾಗುವಷ್ಟು ಊಟ ಮತ್ತು ವಸತಿಯ ಲಭ್ಯತೆ ಇದೆ ಎಂಬುದು ನಮ್ಮೆಲ್ಲರ ಅನಿಸಿಕೆ. ಆದರೆ ನಮ್ಮ ಹಿಂಜರಿಕೆ ಎಂದರೆ ನಾವು ಕೂಫಸ್ ಮತ್ತು ಕ್ರೇಲರ್ ಇವರಿಗೆ ಹೆಚ್ಚು ಕಷ್ಟ ಕೊಡುತ್ತಿದ್ದೇವೇನೋ? ಎಂಬುದು. ಆದರೆ ಈಗೀಗ ಯಹೂದಿಗಳ ಬಗ್ಗೆ ನಾವು ಕೇಳುತ್ತಿರುವ ದಿಗಿಲು ಹುಟ್ಟಿಸುವ ಕಥೆಗಳೆಲ್ಲಾ ಇನ್ನೂ ಹೆಚ್ಚು ಹೆಚ್ಚು ಭಯ ಹುಟ್ಟಿಸುವಂತಿವೆ. ಡ್ಯಾಡಿ ಇಬ್ಬರು ವ್ಯಕ್ತಿಗಳನ್ನು ಗುರುತಿಸಿದ್ದರು. ಅವರಿಬ್ಬರಲ್ಲಿ ಒಬ್ಬರನ್ನು ನಿರ್ಧರಿಸಬೇಕಾಗಿತ್ತು. ಅದು ಅತ್ಯುತ್ತಮ ವಿಚಾರವೆಂದು ಅವರಿಗೆ ಅನ್ನಿಸಿತ್ತು. ಇದು ಏಳು ಜನರಿಗೆ ಎಷ್ಟು ಕಷ್ಟಕರವೋ ಅಷ್ಟೇ ಎಂಟನೆಯನವನಿಗೂ ಅವರೆಂದರು. ಅದು ಸ್ವಲ್ಪ ಮಟ್ಟಿಗೆ ಸತ್ಯವೂ ಆಗಿತ್ತು. ಇದೆಲ್ಲ ಸರಿಯಾಗಿ ನಿರ್ಣಯವಾಗುತ್ತಿದ್ದಂತೆ ನಮ್ಮ ಕುಟುಂಬದೊಡನೆ ನಮ್ಮೊಂದಿಗಿರಲು ಯಾರು ಯೋಗ್ಯರು ಎಂಬುದನ್ನು ಚಿಂತಿಸುತ್ತಾ ನಾವೆಲ್ಲ ನಮ್ಮ ಸ್ನೇಹಿತರಲ್ಲಿಗೆ ಓಡಿದೆವು, ಒಬ್ಬನನ್ನು ಆರಿಸುವುದು ಅಂತಹ ಕಷ್ಟದ ಕೆಲಸವೇನೂ ಆಗಿರಲಿಲ್ಲ. ವ್ಯಾನ್ಡ್ಯಾನ್ ಕುಟುಂಬದ ಯಾರನ್ನು ಕೂಡಾ ಸೇರಿಸಿಕೊಳ್ಳಲು ಡ್ಯಾಡಿ ಬೇಡವೆಂದ ಮೇಲೆ, ಆಲ್ಬರ್ಟ ಡಸೆಲ್ ಎಂಬ ಡೆಂಟಿಸ್ಟನನ್ನು ನಾವು ಆರಿಸಿದೆವು. ಅವರ ಪತ್ನಿ ಯುದ್ಧ ಪ್ರಾರಂಭವಾಗುವ ಮೊದಲೇ ದೇಶದಿಂದ ಹೊರಗಿದ್ದುದು ಅವಳ ಅದೃಷ್ಟ. ಡಸೆಲ್ ಬಹಳ ಶಾಂತ ಸ್ವಭಾವದವರಾಗಿದ್ದರು. ನಾವಾಗಲೀ ಇಲ್ಲವೇ ವ್ಯಾನ್ಡ್ಯಾನ್‌ರಾಗಲೀ ಅವರ ಹೊರ ತೋರಿಕೆಯಿಂದ ಅವರನ್ನು ಹೀಗೆ ಎಂದು ಗುರುತಿಸಬಹುದಾಗಿತ್ತು. ಎರಡೂ ಕುಟುಂಬಗಳಿಗೂ ಅವರು ನಮಗೆ ಒಗ್ಗುವ ಗುಣದವರೆಂದು ಅನ್ನಿಸಿತ್ತು. ಮೇಪ್‌ಗೆ ಅವರು ಬಹಳ ಪರಿಚಯವಿದ್ದರು. ಹಾಗಾಗಿ ಆಕೆ ಡಸೆಲ್ ನಮ್ಮೊಂದಿಗೆ ಬಂದು ಉಳಿಯುವ ಕುರಿತಾಗಿ ಎಲ್ಲ ಸಿದ್ಧತೆಗಳನ್ನು ಮಾಡುವಳು. ಒಂದೊಮ್ಮೆ ಅವರು ಬಂದರೆ, ಮಾರ್‍ಗೊಟ್‌ಳ ಬದಲಾಗಿ ಕ್ಯಾಂಪ್ ಬೆಡ್ ಬಳಸುವ ಅವರು ನನ್ನ ಕೋಣೆಯಲ್ಲಿ ಮಲಗುವುದು ಎಂದಾಯಿತು,.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...