Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಸೋಮವಾರ, ನವೆಂಬರ ೯, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಸೋಮವಾರ, ನವೆಂಬರ ೯, ೧೯೪೨

ಪ್ರೀತಿಯ ಕಿಟಿ,

ನಿನ್ನೆ ಪೀಟರ್‌ನ ಜನ್ಮದಿನವಿತ್ತು. ಆತನಿಗೆ ಈಗ ಹದಿನಾರು ತುಂಬಿದೆ. ಕೆಲವೊಂದು ಚೆಂದದ ಕಾಣಿಕೆಗಳು ಆತನಿಗೆ ಸಿಕ್ಕವು. ಉಳಿದೆಲ್ಲ ವಸ್ತ್ತುಗಳ ಜೊತೆಗೆ ಆತನಿಗೆ ಗಂಡುಮಕ್ಕಳಿಗೆಂದೇ ಇರುವ ಆಟಕ್ಕೆ ಬೇಕಾದ ಒಂದು ರೇಜರ್ ಮತ್ತು ಲೈಟರ್ ಸಿಕ್ಕಿದ್ದವು.

ಆತನೇನು ಅಂತಹ ಧೂಮ್ರಪಾನಿಯಲ್ಲ. ಅದು ಹೀಗೆ ಸುಮ್ಮನೇ ಒಂದು ತೋರಿಕೆಗೆ ನೀಡಿದ್ದು.
ಎಲ್ಲರೂ ಆಶ್ಚರ್ಯಪಡುವಂತಹ ಸುದ್ದಿಯನ್ನು ವ್ಯಾನ್ಡ್ಯಾನ್‌ರಿಂದ ಬಂತು. ಅದು ಸುಮಾರು ಒಂದು ಗಂಟೆಯ ಸಮಯ, ಬ್ರಿಟಷ್‌ರ ಟುನಿಸ್, ಅಲ್ಜಿರ್‍ಸ್, ಕ್ಯಾಸಬ್ಲಾಂಕಾ, ಮತ್ತು ಓರನ್‌ಗಳಿಗೆ ಬಂದಿಳಿದಿರುವುದಾಗಿ ಘೋಷಿಸಿದರು. ಇದು ಅಂತ್ಯದ ಪ್ರಾರಂಭ ಎಂದು ಎಲ್ಲ ಹೇಳುತ್ತಿದ್ದರು. ಆದರೆ ಬ್ರಿಟಿಷ್ ಪ್ರಧಾನಿ ಚರ್ಚಿಲ್ ಬಹುಶಃ ಇಂಗ್ಲೆಂಡಿನಲ್ಲಿ ಇಂತಹ ಸಂಗತಿ ಕೇಳಿದ್ದಿರಬಹುದು. ಹಾಗಾಗೇ ಅವರೆಂದರು ಇದು ಕೊನೆಯಲ್ಲ. ಅಂತ್ಯದ ಪ್ರಾರಂಭವೂ ಅಲ್ಲ. ಆದರೆ ಬಹುಶಃ ಇದು ಪ್ರಾರಂಭದ ಕೊನೆ ಎಂದು. ನಿನಗೆ ಇದರ ವ್ಯತ್ಯಾಸ ಗುರುತಾಯ್ತೆ? ಆಶಾವಾದಕ್ಕೆ ನಿರ್ದಿಷ್ಟ ಕಾರಣಗಳು ಇವೆ. ಅವರು ಕಳೆದ ಮೂರು ತಿಂಗಳಿಂದಲೂ ರಕ್ಷಿಸುತ್ತಾ ಬಂದ ಸ್ಟೆಲಿಂಗ್ರಾಡ್ ಎಂಬ ರಶಿಯಾದ ಪಟ್ಟಣ. ಅದಿನ್ನೂ ಜರ್ಮನ್‌ರ ಕೈವಶವಾಗಿಲ್ಲ.

ಮತ್ತೆ ನಮ್ಮ ಗುಪ್ತಗೃಹದ ಗುಹೆಯ ಕಡೆಗೆ ಬರೋಣ. ನಮ್ಮ ಊಟದ ವ್ಯವಸ್ಥೆಯ ಬಗ್ಗೆ ನಿನಗೆ ಹೇಳಬೇಕು. ಮೇಲಿನ ಮಹಡಿಯಲ್ಲಿ ಎರಡು ಆಸೆಬುರುಕ ಹಂದಿಗಳಿವೆ ಎಂಬುದು ನಿನಗೂ ಗೊತ್ತಿದೆ. ನಮಗೆ ಬೇಕಾದ ಬ್ರೆಡ್‌ಗಳನ್ನು ಕೂಫಸ್‌ನ ಸ್ನೇಹಿತನಾದ ಒಬ್ಬ ಬೇಕರಿಯವನಿಂದ ಪಡೆಯುತ್ತೇವೆ. ಇವು ನಮ್ಮ ಮನೆಗಳಲ್ಲಿ ಸಿಗುತ್ತಿರುವಂತೆ ಇಲ್ಲಿ ಸಿಗುವುದಿಲ್ಲ. ಹಾಗಿದ್ದೂ ಸಾಕಷ್ಟಿವೆ. ನಾಲ್ಕು ರೇಷನ್ ಕಾರ್ಡುಗಳನ್ನು ಕಾನೂನು ಬಾಹಿರವಾಗಿ ತರಲಾಗಿದೆ. ಅದರ ಬೆಲೆ ಹೆಚ್ಚಾಗುತ್ತಲೇ ಇದೆ. ಅದು ಈಗ ಇಪ್ಪತ್ತೇಳು ಫ್ಲಾರಿನ್ಸ್‌ಗಳಿಂದ ಮೂವತ್ತ್ಮೂರು ಫ್ಲಾರಿನ್ಸಗಳಿಗೆ ಹೆಚ್ಚಾಗಿದೆ. ಅದೆಲ್ಲವೂ ಒಂದು ಪ್ರಿಂಟೆಡ್ ಪೇಪರ್‌ನ ಸಣ್ಣ ಸ್ಲಿಪ್ಪಿಗಾಗಿ. ಮನೆಯಲ್ಲಿ ಏನಾದರೂ ಇರಬೇಕೆಂಬ ಕಾರಣಕ್ಕೆ ಅದು ಇರುವುದು, ತರಕಾರಿಗಳ ಒಟ್ಟು ೧೫೦ ಟಿನ್‌ಗಳ ಹೊರತಾಗಿಯೂ ನಾವು ೨೭೦ ಪೌಂಡ್‌ಗಳಷ್ಟು ಒಣ ಬಟಾಣಿ ಮತ್ತು ಬೀನ್ಸ್‌ಗಳ ಖರೀದಿಸಿದ್ದೆವು. ಅವೆಲ್ಲವೂ ಕೇವಲ ನಮಗೆ ಮಾತ್ರ ಆಗಿರಲಿಲ್ಲ. ಆಫೀಸಿನ ಜನರಿಗಾಗಿಯೂ ಆಗಿತ್ತು. ಅವನ್ನೆಲ್ಲಾ ಸೆಣಬಿನ ಚೀಲದಲ್ಲಿ ಪ್ಯಾಸೇಜಿನ ದಾರಿಯಲ್ಲಿ[ಗುಪ್ತ ಬಾಗಿಲಿನ ಒಳಗಡೆ] ಹುಕ್‌ಗಳಿಗೆ ತೂಗುಹಾಕಲಾಗಿತ್ತು. ಅದರಲ್ಲಿಯ ಪದಾರ್ಥಗಳ ಭಾರಕ್ಕೆ ಚೀಲದ ಒಂದೆರಡು ಹೊಲಿಗೆಗಳು ಬಿಟ್ಟಿದ್ದವು. ಹಾಗಾಗಿ ಚಳಿಗಾಲದ ಎಲ್ಲ ಆಹಾರ ಸಂಗ್ರಹವನ್ನು ಅಟ್ಟದ ಮೇಲಿಡುವುದು ಒಳ್ಳೆಯದ್ದೆಂದು ನಿರ್ಧರಿಸಿದೆವು. ಆ ಎಲ್ಲ ಚೀಲಗಳನ್ನು ಸಾಗಿಸುವ ಕೆಲಸವನ್ನು ಪೀಟರ್‌ನಿಗೆ ನೀಡಲಾಯಿತು.

ಆತ ಐದು ಚೀಲಗಳನ್ನು ಅದು ಹೇಗೋ ಸಂಭಾಳಿಸಿ ಹೇಗಿದೆಯೋ ಹಾಗೆ ಸಾಗಿಸಿದ. ಆರನೇ ಚೀಲವನ್ನು ಎಳೆಯುವುದರಲ್ಲಿ ಮಗ್ನನಾಗಿದ್ದ. ಆದರೆ ಆ ಚೀಲದ ತಳಭಾಗದಲ್ಲಿ ಹೊಲಿದ ಭಾಗ ಬಾಯ್ತೆರೆಯಿತು ಮತ್ತು ಒಮ್ಮೆಗೆ ತುಂತುರುಹನಿಗಳಂತೆ- ಅಲ್ಲ, ಅಲ್ಲ, ಕಂದು ಬಣ್ಣದ ಬೀನ್ಸ್‌ಗಳ ಆಲಿಕಲ್ಲು ಮಳೆ ಕೆಳಗೆ ಸುರಿಯುತ್ತಾ ಮೆಟ್ಟಿಲುಗಳ ಮೇಲೆಲ್ಲಾ ಹರಡಿ ಜಾರತೊಡಗಿತು. ಚೀಲ ಸುಮಾರು ೫೦ ಪೌಂಡುಗಳಷ್ಟು ತೂಗುತ್ತಿತ್ತು. ಆ ಸದ್ದು ಸತ್ತವರನ್ನು ಎಬ್ಬಿಸುವಂತಿತ್ತು .ಕೆಳಗಡೆಯ ಜನ ಹಳೆಯ ಮನೆ ಒಮ್ಮಿಂದೊಮ್ಮೇಲೆ ತಮ್ಮ ತಲೆ ಮೇಲೆ ಮುರಿದುಬೀಳುತ್ತಿದೆ ಎಂದುಕೊಂಡರು[ ಪುಣ್ಯಕ್ಕೆ ಆ ಮನೆಯಲ್ಲಿ ಹೊರಗಿನವರಾರೂ ಇರಲಿಲ್ಲ] ಇದರಿಂದ ಪೀಟರ್ ಭಯಭೀತನಾದ. ಆದರೆ ಮರುಕ್ಷಣ ಜೋರಾಗಿ ನಗತೊಡಗಿದ, ಕೆಳ ಮೆಟ್ಟಿಲ ಮೇಲೆ ವಿಶಾಲವಾದ ಬೀನ್ಸ್ ಸಮುದ್ರದ ಮಧ್ಯೆ ಸಣ್ಣ ನಡುಗಡ್ಡೆಯಂತೆ ನಾನು ನಿಂತಿದ್ದು ಆತನ ನಗುವಿಗೆ ಕಾರಣವಾಗಿತ್ತು. ನಾನು ಸಂಪೂರ್ಣವಾಗಿ ಹಿಮ್ಮಡಿಗಂಟಿನವರೆಗೂ ಬೀನ್ಸ್‌ಗಳಿಂದ ಸುತ್ತುವರೆಯಲ್ಪಟ್ಟಿದ್ದೆ. ತಕ್ಷಣ ನಾವಿಬ್ಬರೂ ಅವುಗಳನ್ನು ಹೆಕ್ಕಲಾರಂಭಿಸಿದೆವು. ಆದರೆ ಆ ಬೀನ್ಸ್‌ಗಳು ಎಷ್ಟು ಚಿಕ್ಕ ಹಾಗೂ ಜಾರುವ ಗುಣದವುಗಳಾಗಿದ್ದವೆಂದರೆ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ಉರುಳಿಹೋಗಿ ಹೊರತೆಗೆಯಲು ಅಸಾಧ್ಯವಾದ ಮೂಲೆಗಳಲ್ಲಿ, ಹೊಂಡ ತೂತುಗಳಲ್ಲಿ ಸೇರಿಕೊಂಡಿದ್ದವು. ಈಗೀಗ ಯಾರಾದರೂ ಕೆಳಗಡೆ ಹೋದರೆ ಅವರು ಕೆಳಗೆ ಬಗ್ಗಿ ಒಂದೆರಡು ಸಲ ಆ ಬೀನ್ಸ್‌ಗಳ ಹೆಕ್ಕಿ ಶ್ರೀಮತಿ ವ್ಯಾನ್ಡ್ಯಾನ್‌ರಿಗೆ ಕೈತುಂಬಾ ಬೀನ್ಸಗಳ ಉಡುಗೊರೆ ಕೊಡಬಹುದು.

ಡ್ಯಾಡಿ ಮೊದಲಿನ ಹಾಗೆ ಸ್ವಲ್ಪ ಆದರೆಂದು ಹೇಳಲು ನಾನು ಮರೆತುಬಿಟ್ಟಿದ್ದೆ.

ನಿನ್ನ
ಆನ್

[ಈಗಷ್ಟೆ ಸುದ್ದಿ ಬಂದಿದೆ, ಆಲ್ಜೀರ್‍ಸ್ ಬಿದ್ದು ಹೋಗಿದೆ. ಮೋರೆಕ್ಕೋ, ಕಾಸಬ್ಲೇಂಕಾ, ಮತ್ತು ಓರ್‍ಯಾನ್‌ಗಳು ಬ್ರಿಟಿಷರ ವಶವಾಗಿವೆ. ನಾವೀಗ ಟುನೀಸ್‌ಗಾಗಿ ಕಾಯುತ್ತಿದ್ದೇವೆ]

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...