ಜೀವನ, ಸರಸವಿರಸದಲಿ
ತಲೆಯೆತ್ತಿ ತೂರುವೆನು,
ನನ್ನಾತ್ಮವನು ತೃಪ್ತಿಸುವ
ವಾಣಿಯನು ಸ್ತುತಿಸುವೆನು;
ಜಗಜಾಳಿನಾವರಣದಲಿ,
ಸುಗಂಧಿಸುವ ಮಾರುತನ;
ಮರೆಹೊಕ್ಕು, ಜೀವನಜಾಡನ್ನು
ಜಾರಿ; ಮನದ ದುಗುಡವ ಕಳೆಯುವೆನು-ನಾನು.
ಶಕ್ತಿಮಯ ಪ್ರಬಲದಲಿ
ನಿಧಿನಿಕ್ಷೇಪ, ಸುಮ್ಮಾನದಲಿ;
“ಎನ್ನ ಎದುರಿಸುವವರಾರು?
ಶಕ್ತಿ, ಸಾಮರ್ಥ, ಸಂಜೀವನದ ಮುಂದೆ.”
ಸಿದ್ಧ ಪುರುಷನು ಸಿದ್ಧಾ೦ತಿಸಿ,
ಜೀವನಾಡ ಜಾರಿಲ್ಲವೆ?
ಜಗದಜಾಡನು ಜಾರುವೆನು, ನಾನು
ಸಿದ್ದ ಪುರುಷನಿಗಿಂತ ಮಿಗಿಲಾಗಿ,
ನಾ-ಪ್ರೇಕ್ಷಿಸಿದ ಜೀವ
ಜಾಣ್ಮಯನು ತಿಳಿಯುವನು,
“ಎನ್ನ ನಿಸ್ತೇಜ ನಿಶ್ಯಕ್ತಿ ನಶಿಸಿಹೋಗಿ
ಸುದಿನದ ಛಾಯೆಯಲಿ ಅಡಗುವಾಗ.”
ನೀವು ಜೀವನಸಂಗ್ರಾಮದಿಂ ಬನ್ನಿ,
ಜೀವ ಜಾಡಿನಿಂ ಬನ್ನಿ;
ಏಳುಬೀಳುವ ದಾಂಟಿ;
ಹಸುರಿನಿಂ ಸುತ್ತಿರುವ
ಹೊಲಹಾಯ್ದು ಹಾರಿ,
ಜೀವನ ನಿಸ್ಸಾರವನು ಸೆಳೆದು,
ಜೀವನಜಾಡನು ಜಾರಿದಾಗ
ನಮ್ಮ ಜೀವನ ಜಯಿಸಿ ಜಗದೇಕವೇರುವುದಾಗ.
*****









