Home / ಕವನ / ಕವಿತೆ / ನಿಸರ್ಗ-ಚಲಚ್ಚಿತ್ರ

ನಿಸರ್ಗ-ಚಲಚ್ಚಿತ್ರ

ನಿತ್ಯವೂ ವಿಶ್ವರಂಗದ ಪ್ರಕೃತಿ ಮಂಟಪದಿ
ವಿಧ ವಿಧ ಚಲಚ್ಚಿತ್ರಗಳು ಭವ್ಯಭಾವಗಳ-
ನೊಳಗೊಂಡು, ನಿಯತ ನವ್ಯತೆಯನ್ನು ಬೀರುತ್ತ,
ನಿಷ್ಕಾಮ-ನಿಸ್ವಾರ್ಥ ದೃಷ್ಟಿಯಲಿ ದರ್ಶಿತಗ-
ಳಾಗಿ ಮೆರೆಯುತ್ತಿಹವು.

ವಿಶ್ವ ಪುರುಷನೆ ಚಿತ್ರ-
ನಿರ್ದೇಶಕನು. ವಿವಿಧ ವಿಹಗ ತತಿಗಳ ಗಾನ
ಲಹರಿಯೇ ಸಂಗೀತ ಮಾಧುರ್ಯ,

ಕಣ್ಣಿದಿರ
ಉಷೆನಾರಿ, ನದಿನೀರೆ, ಯಾಮಿನೀ ಕಾಮಿನೀ,
ಬನವೆಣ್ಣು, ಸಂಧ್ಯಾವಧೂ – ಆದಿ ಪ್ರಖ್ಯಾತ
ನಟಿಗಳೇ, ನಭದೊಳಿಹ ಪ್ರತ್ಯಕ್ಷ ತಾರೆಗಳೆ
ಹೆಸರಾಂತ ‘ತಾರೆ’ ಗಳು.

ಅರುಣ, ದಿನಕರ, ಚಂದ್ರ,
ಸಾಗರ, ವಸ೦ತಾದಿ ನಟವರೇಣ್ಯರು ನಟಿಪ-
ರೀ ವಿಲಕ್ಷಣ-ನಿತ್ಯ- ನೂತನ- ಯಥಾರ್ಥವಹ
ವರ ಚಲಚ್ಚಿತ್ರ ಪ್ರದರ್ಶನದಿ!

ಆದರಿದ-
ರತಿಶಯಿತ ಸೌಂದರ್ಯ ದರ್ಶನಾನುಭವಕ್ಕೆ
ಬಾಹ್ಯ ಚಕ್ಷುಗಳಿಂದಲೂ ಕೂಡ, ಆಂತರಿಕ
ಜ್ಞಾನ ದೃಷ್ಟಿಯ ನೋಟವತ್ಯಧಿಕ ಸಹಕಾರಿ!
*****
೧೯೩೯

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...