ಒಂದು ಊರಿನಲಿ ಒಬ್ಬ
ಮುದುಕಿಯಿದ್ದಳು
ಒಂದು ದಿವಸ ಒಂದು ದಿಬ್ಬ
ಏರುವಾಗ ಅವಳು “ಆ…ಬ್ಬ”
ಎಂದು ಬಿದ್ದಳು
ಮುದುಕಿ ತಲೆಯು ತಾಗಿ ತೊಂದು
ಕರಿಯ ಕಲ್ಲಿಗೆ
ಸತ್ತು ಹೋದಳವಳು. ಕತೆಯು
ಮುಗಿಯಿತಿಲ್ಲಿಗೆ
* * *
ಹೀಗೆ ಮುದುಕಿ ಬಿದ್ದು ಸತ್ತು-
ಹೋಗದಿದ್ದರೆ
ಕತೆಯು ಮುಂದೆ ಸಾಗುತಿತ್ತು
ಬಹಳ ಉದ್ದಕೆ!
*****

















