ಕಾಡುಲಿಲ್ಲಿಯ ಹೂವುಗಳು – ಒಂದು ಟಿಪ್ಪಣಿ

Published on :

ಕವಿತೆ ಕಂಡರೆ ಮಾರು ದೂರ ಹೋಗುವವರನ್ನು ಕವಿತೆಯ ಹತ್ತಿರಕೊಯ್ದು ‘ಮುಟ್ಟಿನೋಡಿ, ಇದು ಏನೂ ಮಾಡುವುದಿಲ್ಲ’ ಎಂದು ಭಯ ಹೋಗಲಾಡಿಸುವಂತೆ ಕಾಣುವ ಸವಿತಾ ನಾಗಭೂಷಣರ ಕಾವ್ಯ ಸಮಕಾಲೀನ ಕನ್ನಡ ಕಾವ್ಯದಲ್ಲಿ ಒಂದು ವಿಶಿಷ್ಟ ಭಾವನ್ನು ಒತ್ತಿದ ಕಾವ್ಯ. ‘ಸವಿತಾ ಕಾವ್ಯ ತಂಗಾಳಿಯಂತೆ’ ಎಂದು ಒಂದೇ ಒಂದು ಸಾಲಲ್ಲಿ ದೇವನೂರು ಅವರ ಕಾವ್ಯವನ್ನು ಬಣ್ಣಿಸಿದ್ದಾರೆ. ಎಂ.ಎಸ್. ಆಶಾದೇವಿ ಈ ಮಾತಿಗೆ ಪ್ರತಿಕ್ರಿಯೆ ನೀಡುತ್ತ ತಂಗಾಳಿ ಯಾವಾಗಲೂ ಬೀಸುವುದಿಲ್ಲ ಎನ್ನುವುದೇ ತಂಗಾಳಿಯನ್ನು ಕುರಿತ ಮನುಷ್ಯನ […]

ಹುಗಲಿಲ್ಲ ಬಿಯದರಿಗೆ

Published on :

ಇಲ್ಲಿ ನಿನಗೆ ಹುಗಲಿಲ್ಲ ಓ ಬಿಯದ ! ಇದು ಪಕ್ಷಿ ಕಾಶಿ – ಕುವೆಂಪು ಝೆನ್ ಬುದ್ಧತತ್ವದ ನಂತರ ಬಂದವನು ಜಪಾನಿನ ತತ್ವಶಾಸ್ತ್ರಜ್ಞ ನಿಶಿದಾ. ಅವನನ್ನು ಓದುತ್ತಿರುವಾಗ ಬಂಜಗೆರೆ ಜಯಪ್ರಕಾಶರ ಕಾವ್ಯ ನೆನಪಾಗಿದ್ದು ಎಂದುಸಾಮ್ಯತೆಯ ಎಳೆಯಲ್ಲಿ. ನಿಶಿದಾ ‘topos of nothingness’ ತತ್ವಕ್ಕೆ ಹೆಸರಾದವನು. ಅವನು ವಿವರಿಸುವಂತೆ ಅವನ ತತ್ವವು ಆಕಾರ ರಹಿತವಾದ ಆಕಾರವನ್ನು ನೋಡುವುದು ಅಥವಾ ನಿಶ್ಶಬ್ಬದ ಶಬ್ಬವನ್ನು ಆಲಿಸುವುದನ್ನು ಕುರಿತು ಹೇಳುತ್ತದೆ. ‘ಹಕ್ಕಿ ಹಾಡಿತು ಬೆಟ್ಟ ಶಾಂತ […]

‘ದಂಡೆಗೆ ಬಂದ ಚಿಪ್ಪಿನಲ್ಲಿ ಎಪ್ಪತ್ತು ಸಾವಿರದ ಮುತ್ತು’

Published on :

(ಪ್ರತಿಭಾ ನಂದಕುಮಾರ್ ಮತ್ತು ಸವಿತಾ ನಾಗಭೂಷಣ ಆವರ ಕಾವ್ಯಗಳ ಆಧ್ಯಯನ) ಕಾಲ ದೇಶಗಳ ವರ್ತಮಾನಗಳ ಮುಖಾಮುಖಿಯಲ್ಲಿ ಅವರಿಗೆ ಪರಸ್ಪರ ಗುರುತು ಹತ್ತಿದ ಅಮಲು – ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಸಂದರ್ಭದಲ್ಲಿ ಮಹಿಳಾ ಕಾವ್ಯವನ್ನು ಇತ್ತೀಚಿನ ಬೆಳವಣಿಗೆಯೆಂದು ಗುರುತಿಸಲಾಗುತ್ತದೆ. ದಲಿತ ಬಂಡಾಯ ಚಳುವಳಿಯ ಭಾಗವಾಗಿ ಬಂದ ಸ್ತ್ರಿವಾದೀ ತಾತ್ವಿಕ ನೆಲೆಗಳು ಬಹಳಷ್ಟು ಸ್ತ್ರೀಬರವಣಿಗೆಗೆ ಮೀರಿ ಹೊಸ ದಿಕ್ಕುದೆಸೆಗಳತ್ತ ಚಾಚುತ್ತಿರುವ ಸ್ತ್ರೀಯರ ಬರವಣಿಗೆಗಳ ಬಗ್ಗೆ ಮಾತ್ರ ನಮ್ಮ ವಿಮರ್ಶಾ ಮಾನದಂಡಗಳು ಅವಜ್ಞೆಯನ್ನು […]

ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು

Published on :

ಕನ್ನಡ ಸಾಹಿತ್ಯದಲ್ಲಿ ಸ್ತ್ರೀಸಂವೇದನೆಯ ನೆಲೆಗಳು-ಎನ್ನುವ ವಿಷಯವು ಬಹು ದೊಡ್ಡ ವ್ಯಾಪ್ತಿಯುಳ್ಳದ್ದು. ಈ ವಿಷಯವನ್ನು ಇಡೀ ಕನ್ನಡ ಸಾಹಿತ್ಯಕ್ಕೆ ಅನ್ವಯಿಸಿ ಮಾತನಾಡುವುದು ಈ ಪ್ರಬಂಧದ ವ್ಯಾಪ್ತಿಯನ್ನು ಮೀರಿ ನಿಲ್ಲುತ್ತದೆ. ಹಾಗಾಗಿ ಮಹಿಳೆಯರ ಬರವಣಿಗೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಸಂವೇದನೆಗಳನ್ನು ಕುರಿತು ಮಾತನಾಡುವ ಚೌಕಟ್ಟು ಹಾಕಿಕೊಂಡಿದ್ದೇನೆ. ಅದರಲ್ಲೂ ತಿರುಮಲಾಂಬ ಆವರಿಂದ ಹಿಡಿದು ವೈದೇಹಿಯವರ ತನಕ ಈ ನಿಟ್ಟಿನಲ್ಲಿಯೂ ಚರ್ಚೆಗಳು ನಡೆದಿದ್ದು ಅನಂತರದ ಬರಹಗಳನ್ನು ನೋಡಬೇಕಾದ ಅಗತ್ಯವನ್ನು ಇಲ್ಲಿ ಕಾಣುವ ಪ್ರಯತ್ನ ಮಾಡಿದ್ದೇನೆ. ಸ್ತ್ರೀಸಂವೇದನೆಯ ನೆಲೆಗಳು ಮುಟ್ಟುತ್ತಿರುವ […]