ಮಧ್ಯಯುಗೀನ ಇಂಗ್ಲೆಂಡ – ರಾಜಕೀಯ, ಧಾರ್‍ಮಿಕ, ಸಾಮಾಜಿಕ ಸಾಹಿತ್ಯಿಕ ನೋಟ

Published on :

ಹದಿನಾಲ್ಕನೇ ಶತಮಾನದ ಉದ್ದಕ್ಕೂ ಬದಲಾವಣೆಯ ಗಾಳಿ ಇಂಗ್ಲೆಂಡಿನ ಪ್ರತಿ ಹಂತಗಳಲ್ಲೂ ಬೀಸತೊಡಗಿತ್ತು. ರಾಜಕೀಯ, ಸಾಮಾಜಿಕ, ಧಾರ್‍ಮಿಕ, ಹಾಗೂ ಸಾಹಿತ್ಯಿಕ ರಂಗಗಳಲ್ಲಿ ಅಭೂತವಾದ ಬದಲಾವಣೆಗಳು ಗೋಚರಿಸತೊಡಗಿದ್ದವು. ರಾಜಕೀಯ ಹಿನ್ನೆಲೆಯನ್ನು ಗಮನಿಸಿದರೆ ಹದಿನಾಲ್ಕನೇ ಶತಮಾನದ ಪೂವಾರ್ಧದಲ್ಲಿ ೧೩೨೭ರಲ್ಲಿ ಸಿಂಹಾಸನವೇರಿದ ಮೂರನೇ ಎಡ್ವರ್ಡನು ರೋಜರ್ ಮೋರ್‍ಟಿಮರನಿಂದ ಹಲವು ರಾಜಕೀಯ ತೊಂದರೆಗಳ ಅನುಭವಿಸಿದ. ಅದೂ ಅಲ್ಲದೇ ಆತನ ತಂದೆ ಎರಡನೇ ಎಡ್ವರ್ಡಗೆ ಹತ್ತಿರನಾಗಿದ್ದ. ಆತ ರಾಣಿ ಕ್ವೀನ್ ಇಸಾಬೆಲ್ಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ಎಲ್ಲ […]