
ಯಾವ ಹಾಡನು ನಾ ಹಾಡಲಿ, ಇನ್ನು- ಬಾಳಿನ ಉಷೆಯನು ಎಚ್ಚರಿಸಲಿ? ಬಂಗಾರ ಬಯಲಲಿ ಸಿಂಗಾರ ಬೆಳೆಯಲಿ ತಂದು ಇಕ್ಕಿದರೊಂದು ಕಿಡಿ ಬೆಂಕಿ ! ಬೆಳೆಯಲ್ಲಿ ಉರಿ ತಾಗಿ, ಬಯಲೆಲ್ಲ ಹೊಗೆಯಾಗಿ ಉಳಿದುದೆಲ್ಲವು ಇಲ್ಲಿ – ಎದೆ ಬೆಂಕಿ ! ನೋವನರಿಯದ ಬಾಳು ಬಾ...
ಕಾರಿರುಳ ಗವಿಯಲ್ಲಿ ಎಲ್ಲಿಂದಲೋ ಒಂದು ಕಿರಣ ಒಳಹೊಕ್ಕಂತೆ, ನನ್ನ ಜೀವನದಲ್ಲಿ ನಿನ್ನ ಎಳೆತನದ ನಗು ತುಂಬಿ ತೂರುತ ಬಂದು ಬೆಳಗಿತ್ತು ಎದೆಯನ್ನು, ಹೃದಯದುಮ್ಮಳದಲ್ಲಿ, ಆನಂದದೆಲರಿನಲಿ, ಕಳೆದ ಕಾಲದ ಕಳೆದ ದುಸ್ವಪ್ನಗಳನೆಲ್ಲ ಮರೆತು ನಾ ಕುಣಿದಿದ್ದೆ....
ಮುಂದೆ ಸುಖ ಬಹುದೆಂಬ ಭ್ರಾಂತಿಯಿಲ್ಲ, ಹಿಂದಿನದು ಹೋಯ್ತೆಂಬ ಚಿಂತೆಯಿಲ್ಲ ! ಇಂದು ಪರಿಪೂರ್ಣತೆಯೋ, ಶೂನ್ಯವಹುದೋ ಎಲ್ಲ ನಿನ್ನಾಸರೆಗೆ- ನೀನೆ ನನಗೆಲ್ಲ ! *****...














