ಒಟ್ಟಿಗೆ

ಗುಂಡ: "ನನಗೆ ಹತ್ತು ಜನ ಒಟ್ಟಿಗೆ ಹೊಡಿಯೋಕೆ ಬಂದ್ರು." ಪುಟ್ಟ: "ಹೌದಾ; ಆಮೇಲೆ" ಗುಂಡ: "ತಾಕತ್ ಇದ್ರೆ ಒಬ್ಬರೆ ಬನ್ನಿ ಅಂದೆ" . ಪುಟ್ಟ: "ಆಮೇಲೆ" ಗುಂಡ: "ಒಬ್ಬೊಬ್ರೆ ಬಂದು ಹೊಡೆದ್ರು..." *****

ಗೇಮ್ಸ್

ಡಾಕ್ಟರ್: "ದಿನಾಲೂ ಎಕ್ಸಸೈಜ್ ಮಾಡಬೇಕು.." ಸರ್ದಾರ್: "ದಿನಾ ಫುಟ್‌ಬಾಲ್, ಟೆನ್ನಿಸ್, ಕ್ರಿಕೇಟ್ ಆಡ್ತಿನಿ.." ಡಾಕ್ಟರ್: "ಒಳ್ಳೆಯದು ಎಲ್ಲಿ ಯಾವಾಗ ಆಡ್ತೀರಾ?" ಸರ್ದಾರ್: "ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲಿ" *****

ಯಾರು?

ಸರ್ದಾರ್: "ಅಲ್ಲಿ ನೋಡಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿರೋ ಅವರು ಹುಡುಗ ನೋ ಹುಡುಗಿಯೋ ತಿಳಿಯುತ್ತಿಲ್ಲ..." ವ್ಯಕ್ತಿ: "ಅವಳು ನನ್ನ ಮಗಳು.." ಸರ್ದಾರ್: "ನೀವು ಅವರ ತಂದೆಯಾ?" ವ್ಯಕ್ತಿ: "ಅಲ್ಲ ತಾಯಿ" *****

ದೂರ

ಸರ್ದಾರ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ - "ಅಮೇರಿಕಾ ಎಷ್ಟು ತಾಸು ಪ್ರಯಾಣ". ರಿಸೆಪ್ಷನಿಸ್ಟ್ ಹೇಳಿದಳು "ಒಂದು ತಾಸು" ಸರ್ದಾರ ಹೇಳಿದ- "ಹಾಗಾದ್ರೆ ನಾನು ನಡೆದೇ ಹೋಗ್ತೀನಿ ಬಿಡಿ" *****

ಹೆಣ್ಣು

ಸರ್ದಾರನಿಗೆ ಮೂರು ಹೆಣ್ಣುಮಕ್ಕಳಾದವು. ಅವಕ್ಕೆ ಕವಿತಾ, ವಿನುತ, ಸರಿತಾ ಎಂದು ಹೆಸರಿಟ್ಟ.. ಮತ್ತೆ ಸರ್ದಾರನ ಹೆಂಡತಿ ಹೆಣ್ಣು ಮಗುವನ್ನ ಹಡೆದಾಗ ಸರ್ದಾರ ಇಟ್ಟ ಹೆಸರು "ಬೇಕಿತ್ತಾ" *****

ಮರೆಯೋಕಾಗಲ್ಲ

ಹುಡುಗ: "ನನಗೆ ಅವಳನ್ನು ಮರೆಯೋಕಾಗಲ್ಲಾ" ಗೆಳೆಯ: "ಅವಳು ಅಷ್ಟು ಇಷ್ಟವಾದರೆ ನಿಮ್ಮ ಮನೆಲಿ ಹೇಳ್ತಿನಿ ಬಿಡು" ಹುಡುಗಿ: "ನಾನೇ ಹೇಳ್ತಿನಿ ಬಿಡು. ಮೊದಲು ಯು.ಕೆ.ಜಿ. ರಿಸಲ್ಟ್ ಬರಲಿ" *****

ಕಿವಿ-ಕಣ್ಣು

ನ್ಯಾಯಾಧೀಶರು: "ಇವನ ಎರಡು ಕಿವಿಗಳನ್ನು ಕತ್ತರಿಸಿ" ಸರ್ದಾರ್: "ಬೇಡ ನಾನು, ಕುರುಡನಾಗಿ ಬಿಡ್ತೀನಿ" ನ್ಯಾಯಾಧೀಶರು: "ಮೂರ್ಖ... ಕಿವಿ ಕತ್ತರಿಸಿದರೆ ಕುರುಡ ಹೇಗಾಗ್ತಿ?" ಸರ್ದಾರ್: "ಕನ್ನಡಕವನ್ನು ನಿಮ್ಮಪ್ಪನ ಕಿವಿಗೆ ಹಾಕ್ಲ?" *****

ನೆನಪಾಯ್ತು

ರೋಗಿ: "ಡಾಕ್ಟ್ರೆ ನೀವು ಆಪರೇಷನ್ ಮಾಡಿದಾಗಿನಿಂದ ನನ್ನ ಹೊಟ್ಟೆ ಒಳಗೆ ಸಂಗೀತ ಕೇಳಿ ಬರ್‍ತಾ ಇದೆ" ಡಾಕ್ಟ್ರು: "ಅಬ್ಬಾ.. ಅಂತೂ ನನ್ನ ಮೊಬೈಲು ಎಲ್ಲಿದೆಯೆಂದು ಈಗ ಗೊತ್ತಾಯ್ತು" *****

ಸ್ಲೋಗನ್‌ಗಳು

೮೦ರ ದಶಕದಲ್ಲಿ "ಮನೆಗೆ ಮೂರು ಮಕ್ಕಳು ಸಾಕು" ೯೦ರ ದಶಕದಲ್ಲಿ "ಆರತಿಗೊಂದು ಕೀರ್ತಿಗೊಂದು" ೨೦೦೦ ದಲ್ಲಿ "ಮನೆಗೊಂದು ಮಗು, ಮನೆ ತುಂಬಾ ನಗು" ಮುಂದೆ "ದಾರಿಗೊಂದು ದೀಪ.. ಬೀದಿಗೊಂದು ಪಾಪ" *****
cheap jordans|wholesale air max|wholesale jordans|wholesale jewelry|wholesale jerseys