ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್

ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.

ಯಾವುದು ಸಿಹಿಯೂಟ?

ಯಾವುದು ಸಿಹಿಯೋ ಯಾವುದು ಕಹಿಯೋ ನೀನಿಲ್ಲದೆ ರುಚಿ ಎಲ್ಲಿ? ಯಾವುದು ಸ್ವರವೋ, ಯಾವುಮ ಶ್ರುತಿಯೋ ನೀನಿಲ್ಲದೆ ಅರಿವೆಲ್ಲಿ? ಸುತ್ತ ಇದ್ದರೂ ನದಿ ವನ ಕಾಡು ಆ ಚೆಲುವಿಗೆ […]

ತಾಗದಿರಲಿ ಮುನಿಯ ಕೋಪ

ತಾಗದಿರಲಿ ಮುನಿಯ ಕೋಪ* ಕಾಡದಿರಲಿ ಶಾಪ ಕಾಯುತಿರುವ ಪ್ರೇಮಿಯ ತೋಳಿನಲ್ಲಿ ಬೀಳು ನಲ್ಲನೆದೆಯ ಕಂಪಿಸುವ ಮೊಲ್ಲೆಯಾಗಿ ಏಳು ಕಾsಳಾಗಿ ಹೋsಳಾಗಿ ಮುಚ್ಚಿ ಬಿಚ್ಚಿ ಆಡು ಮೇವಾಗಿ ಮೊಗೆಯಾಗಿ […]

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು ನಾನು ಎತ್ತಿ ಕಾಪಾಡುವರು ಯಾರು? ಸವೆನೆನಪಿನಾಳದಲಿ ಹುಗಿಮ ಹೋಗಿರುವೆನು ಅಗೆದು ತೆಗೆಯುವರಿಲ್ಲವೇನು? ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ ಹಿಡಿದು ನಿಲ್ಲಿಸುವವರು ಯಾರು? […]

ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೋ ನೀನು!

ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೊ ನೀನು! ಕಪ್ಪಿನ ಮಹಿಮೆಯ ತಿಳಿದೆ ಈಗ ಮುಗಿಲಾಳ ಕಡಲಾಳ ಎಲ್ಲ ಕಪ್ಪಲ್ಲವೆ ರತ್ನಗಳಲಿರುವಂತೆ ನೀಲರಾಗ? ಕಪ್ಪ ಮೋಡಗಳೆಲ್ಲ ಒಟ್ಟಾಗಿ ಕೂಡಿವೆ […]

ನನ್ನ ಹಿಂದೆಯೇ ಈ ಗೋಪಿಯರು

ನನ್ನ ಹಿಂದೆಯೇ ಈ ಗೋಪಿಯರು ಸದಾ ತಿರುಗುವುದು ಯಾಕಮ್ಮಾ? ಬೇಡ ಎಂದರೂ ಕೈಹಿಡಿಳೆದು ಗಲ್ಲ ಸವರುವರು ಸರಿಯಾಮ್ಮಾ? ನಾಚಿಕೆ ಇಲ್ಲದೆ ಹೆಣ್ಣುಗಳಮ್ಮಾ ಬಾಚಿ ತಬ್ಬುವರು ಮೈಯನ್ನು, ಕಣ್ಣಿಗೆ […]

ಎಂಥದೆ ಇರಲಿ

ಎಂಥದೆ ಇರಲಿ ಯಾವ ಮದ್ದಿಗೂ ಬಗ್ಗದ ರೋಗವಿದು ಯಾರೇ ಇರಲಿ ಎಂಥ ವೈದ್ಯಗೂ ಸಗ್ಗದ ರೋಗವಿದು ಹೊರಗಿನ ಔಷಧ ಹಾಯಲಾರದ ಮನಸಿನ ಜಾಡು ಇದು ಯಾವ ಪಂಡಿತಗು […]