ಎಲ್ಲಿಗೆ?

ಕಾಲವಾಹಿನಿಯಲ್ಲಿ ಸಿಕ್ಕಿ ನಾವೆಲ್ಲಿಗೋ ತೆರಳುತಿಹ ಭೀತಿಯಿಹುದು ; ಮೇಲ್ಮೇಲೆ ವಿಷವೀಚಿ ಮಾಲೆಗಳು ನುಗ್ಗುತ್ತ ಬರುತಿಹವು ಕೊಚ್ಚುತಿಹವು. ಕುರುಡಾದ ನಿಯಮವೊ ಕುಂಟಾದ ವಿಧಿಗಳೋ ಈವರೆಗೆ ಪೊರೆದುವಯ್ಯ; ಹರಿದು ಹೋಗಿಹವೀಗ ರಕ್ಷಣೆಯ ಬಂಧಗಳು ಕಾವುದನು ಕಾಣೆನಯ್ಯ. ಬಂಡೆಗಳು...

ಯಾರು ಹೆಚ್ಚು ?

ಕಲ್ಲು ತಂದು ರೂಪುಮಾಡಿ ದೇವನೆಂದು ಕರೆದು ನಿನ್ನ ಎಲ್ಲ ಜಗದ ಒಡೆಯನಾಗಿ ಕಾವುದೆಂದೆನು. ಮೆಯ್ಯ ತೊಳೆದು ಹಾಲನೆರೆದು ಹೂವು ಮುಡಿಸಿ ಗಂಧವಿಕ್ಕಿ ತುಯ್ಯಲಿಟ್ಟು ದೀಪವಿಟ್ಟು "ದೇವ" ಎಂದೆನು. ನಾನು ಮಾಡೆ ನೀನು ಆದೆ ನಾನು...

ದೇವಯಾನಿ

ಮರದ ನೆಳಲ ತಂಪಿನಲ್ಲಿ ಮೆಲ್ಲ ಮೆಲ್ಲನೇರುತಾ ಗಿರಿಯ ಕಳೆದು ಸಂಜೆಯಲ್ಲಿ ಕಚನ ಮನದಿ ಬಯಸುತಾ ನಡೆದಳವಳು ದೇವಯಾನಿ ಪ್ರಣಯ ಭರದಿ ಕುಗ್ಗುತಾ ಬಿನದ ಬನದ ನಡುವೆ ನಿಂದು ಕಣ್ಣನೀರು ಸುರಿಸುತಾ ಸಂಜೆಗೆಂಪ ತಳಿರುಗೆಂಪ ತುಟಿಯ...

ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು "ಈರೇಳು ಲೋಕಗಳಿಗಾಧಾರವಾಗಿಹೆನು, ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ ಎಳ್ಳನಿತು ಲಂಘಿಸವು". ಈ ಕೆಚ್ಚುನುಡಿಗೇಳಿ ಸಾಗರದ ವಾರಿರಾಶಿಯಲೊಂದು ಹನಿಯೆದ್ದು...

ಬೂಟಾಟಿಕೆ

ನಾವು ಬಡಜೀವಿಗಳು ನೀವು ಮಾತಪಸ್ವಿಗಳು ದೃಷ್ಟವನ್ನು ತೋರಿರಯ್ಯ ; ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ ಒಂದನ್ನು ತೋರಿರಯ್ಯ. ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು ಡಂಬದಲಿ ಮೆರೆವರುಂಟು; ಉಪವಾಸ ನಿಯಮದಲಿ ಜಗವ ಜಯಿಸುವರುಂಟು ಒಳಬೆಳಗ ಕಾಣ್ಬರುಂಟು....

ತತ್ವಜ್ಞಾನಿ

ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು....

ದೇವರಿಗೆ

ಅಂತರಂಗದ ಶಕ್ತಿ ವಿಶ್ವನಾಳುವ ಶಕ್ತಿ; ಅಂತರಂಗದ ದೀಪ್ತಿ ವಿಶ್ವ ಬೆಳಗುವ ದೀಪ್ತಿ- ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ. ಸ್ಥೂಲ ಸೂಕ್ಷ್ಮದ ಭಾರ ಪಂಚಭೂತದ ಭಾರ, ಕಾಲಪಾಶದ ಉರುಲು ಪಂಚೇಂದ್ರಿಯಗಳುರುಲು- ಆತ್ಮ ಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ,...
cheap jordans|wholesale air max|wholesale jordans|wholesale jewelry|wholesale jerseys