
ಅದರ ಅಪ್ಪ ಬಹಳ ದಪ್ಪ ಪುಸ್ತಕವನು ಬರೆಯಿತು ಅದನ್ನು ಏರಿ ಕೆಳಗೆ ಹಾರಿ ಅದರ ಕಾಲು ಮುರಿಯಿತು! *****...
ನಮ್ಮ ಚುರುಕು ಬೆಕ್ಕು ಕದ್ದು ಕಮ್ಮಗಿನ ಕಜ್ಜಾಯ ಮೆದ್ದು ಬಿಲ ಬಿಲದಿ ತನ್ನುಸಿರ ಕಂಪನು ಊದಿತು ಇಲಿಯು ಮೂಗನು ಹೊರಗೆ ಹಾಕಲು ಅದರ ಪ್ರಾಣವ ಸೇದಿತು! *****...
‘ಜೀವನ ಕ್ಷಣ ದೇಹವು ತೃಣ’ ಭಟ್ಟರ ಬಾಯ್ ಅಂದಿತು ಸನಿಯ ನಿಂತ ಗೂಳಿಗೆಂಥ ಬುದ್ದಿ! ಮೇಯ ಬಂದಿತು! *****...
ಒಬ್ಬನು-ಹುಂಬ- ಡಬ್ಬಿಯ ತುಂಬ ಕಗ್ಗತ್ತಲೆಯನು ತುಂಬಿದನು ಮುಚ್ಚಳ ಇಕ್ಕಿ ಕತ್ತಲೆ ಸಿಕ್ಕಿ- ಬಿದ್ದಿತು ಎಂದೇ ನಂಬಿದನು. ಮರುದಿನ ಎದ್ದು ತುಸುವೂ ಸದ್ದು ಮಾಡದೆ ಮುಚ್ಚಳ ಸರಿಸಿದನು ಕತ್ತಲೆಯಿಲ್ಲ! ಮನೆಯೊಳಗೆಲ್ಲಾ ಹುಡುಕುತ ಕಣ್ಣೀರ್ ಸುರಿಸಿದನು *...













