ಹನಿಗವನ ಉಮರನ ಒಸಗೆ – ೧೫ ಡಿ ವಿ ಗುಂಡಪ್ಪ April 30, 2024March 31, 2024 ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ ಮುಂದಿನಳುಕುಗಳ ತೊಲಗಿಸುವ ಬಟ್ಟಲನು ತುಂಬಿ ನೀಡೆನಗೀಗ; "ನಾಳೆ"ಯೆಂಬೆಯೊ?-ನಾಳೆ ಸೇರುವೆನು ನೂರ್‍ಕೊಟಿ ನಿನ್ನೆಗಳ ಜೊತೆಗೆ. ***** Read More
ಹನಿಗವನ ಉಮರನ ಒಸಗೆ – ೧೪ ಡಿ ವಿ ಗುಂಡಪ್ಪ April 23, 2024March 31, 2024 ಪುಣ್ಯಗಳನಾರ್ಜಿಸಿದೆವೆಂಬ ಘನ ಚರಿತರುಂ ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ ಮಣ್ಣ ಹರದೊಂದೆ ತೆರದಲಿ ಬಳಿಕ ಜನರಾರು ಮಾ ಗೋರಿಗಳ ತೆರೆಯರವರ ದರ್ಶನಕೆ. ***** Read More
ಹನಿಗವನ ಉಮರನ ಒಸಗೆ – ೧೩ ಡಿ ವಿ ಗುಂಡಪ್ಪ April 16, 2024March 31, 2024 ಮರೆಯದಿರು ; ನಮ್ಮ ಪೂರ್‍ವಿಕರು, ಸಂಮಾನಿತರು, ಕಾಲ ವಿಧಿಗಳವರ್‍ಗೆ ಪೇಯಗಳ ನೀಯೆ, ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ, ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್. ***** Read More
ಹನಿಗವನ ಉಮರನ ಒಸಗೆ – ೧೨ ಡಿ ವಿ ಗುಂಡಪ್ಪ April 9, 2024March 31, 2024 ಜಾಂಷೆದನು ಹಿಗ್ಗಿ ಮೆರೆಯುತ್ತಿದ್ದ ಮಂಟಪದಿ ಹಲ್ಲಿ ಹೆಗ್ಗಣಗಳಿಂದೆಸೆವುವೋಲಗದಿ! ಮಲಗಿ ಬೈರಾಮ ವೀರನು ನಿದ್ರಿಸಿರ್‍ಪಲ್ಲಿ ಕಾಡುಕತ್ತೆಗಳವನ ತಲೆಯ ತುಳಿಯುವುವು! ***** Read More
ಹನಿಗವನ ಉಮರನ ಒಸಗೆ – ೧೧ ಡಿ ವಿ ಗುಂಡಪ್ಪ April 2, 2024March 31, 2024 ಈ ಪುರಾತನ ಜೀರ್ಣ ಧರ್ಮಶಾಲೆಯೊಳಮಮ ! ಇರುಳು ಪಗಲುಗಳೆಂಬ ಬಾಗಿಲೆರಡರಲಿ ಸುಲ್ತಾನರೇಸುಜನರಟ್ಟಹಾಸದಿ ಪೊಕ್ಕು ಒಂದೆರಡು ತಾಸಿದ್ದು ನಿಲದೆ ತೆರಳಿದರು! ***** Read More
ಹನಿಗವನ ಉಮರನ ಒಸಗೆ – ೧೦ ಡಿ ವಿ ಗುಂಡಪ್ಪ March 26, 2024March 31, 2024 ನೋಡಾ ಗುಲಾಬಿ ತಾನರಳಿ ಸಾರುವುದಿಂತು: "ಜಗದೊಳಕೆ ನಾಂ ಬಂದು ನಗು ನಗುತೆ ನಿಂತು, ಬಿಗಿದಿರದೆ ಪಟ್ಟು ಚೀಲವನಿತ್ತ ಬಿಚ್ಚುತ್ತೆ ಮಗ ಮುಗಿಪ ನಿಧಿಯನೆಲ್ಲವನೆರೆಯುತಿಹೆನು." ***** Read More
ಹನಿಗವನ ಉಮರನ ಒಸಗೆ – ೯ ಡಿ ವಿ ಗುಂಡಪ್ಪ March 19, 2024January 28, 2024 ದೊರೆತನವದೆಷ್ಟು ಸೊಗವೆನ್ನುತಿರುವರು ಪಲರು; ಸೊಗವು ಪರಲೋಕದೊಳಗೆನ್ನುವರು ಕೆಲರು; ಕೈಯ ರೊಕ್ಕವ ಕೊಂಡು ಕಡದ ಲೆಕ್ಕವನಳಿಸು; ಕೇಳು ದೂರದ ಮೃತ್ಯು ಭೇರಿಯಬ್ಬರವ. ***** Read More
ಹನಿಗವನ ಉಮರನ ಒಸಗೆ – ೮ ಡಿ ವಿ ಗುಂಡಪ್ಪ March 12, 2024January 28, 2024 ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. ***** Read More
ಹನಿಗವನ ಉಮರನ ಒಸಗೆ – ೭ ಡಿ ವಿ ಗುಂಡಪ್ಪ March 5, 2024January 28, 2024 ಏಳು, ಬಾರೆನ್ನೊಡನೆ ನಾಡಗಡಿಯುತ್ತಲಿಗೆ- ಹುಲುಸುಹೊಲ ಮರಳಕಾಡೆರಡುಮೊಡವೆರೆದು, ಸುಲ್ತಾನ್ ಗುಲಾಮರೆಂದರ ಮರೆಯಿಪಾ ಬಳಿಗೆ ಅಲ್ಲಿ ನೀಂ ದೊರೆತನದ ಕಿರಿತನವ ಕಾಣ್ನೆ. ***** Read More
ಹನಿಗವನ ಉಮರನ ಒಸಗೆ – ೬ ಡಿ ವಿ ಗುಂಡಪ್ಪ February 27, 2024January 28, 2024 ಬಾ, ತುಂಬು ಬಟ್ಟಲನು; ಮಧುಮಾಸದಗ್ನಿಯಲಿ ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು; ಆಯುವೆಂಬಾ ಪಕ್ಕಿ ಪಾರ್ವ ದೂರವು ಕಿರಿದು; ಪಾರುತಿಹುದದು ನೋಡು; ಬಾ, ಮನಸುಮಾಡು. ***** Read More