Home / Lakshminarayana Bhatta

Browsing Tag: Lakshminarayana Bhatta

ದೀಪಗಳ ದಾರಿಯಲಿ ನಡುನಡುವೆ ನೆರಳು, ನೆರಳಿನಲಿ ಸರಿವಾಗ ಯಾವುದೋ ಬೆರಳು ಬೆನ್ನಿನಲ್ಲಿ ಹರಿದಂತೆ ಭಯಚಕಿತ ಜೀವ ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ. ಆಸೆ ಕನಸುಗಳೆಲ್ಲ ತೀರಿದುವು ಕುಸಿದು, ಭಾಷೆಗೂ ಸಿಗದಂಥ ಭಯದ ಮೆಳೆ ಬೆಳೆದು, ಕಪ್ಪು ಮೋರೆಯ ಬೇಡ ಕ...

ಹುಡುಗನಾಗಿದ್ದ ದಿನಗಳ ನೆನಪು : ಆಗ ನಮ್ಮೂರ ಹೊಳೆ ತುಂಗೆ ಶಾಂತನಿರ್ಮಲ ಅಂತರಂಗೆ; ಹೊರಗಿನ ಬಿಸಿಲು ಒಳಗೆ ಬಿಂಬಿಸಿ ತಳದ ತನಕ ನದಿಯ ಮನಸ್ಸು ಸ್ವಚ್ಛ ಪ್ರತ್ಯಕ್ಷ ಸಂಪದ್ಯುಕ್ತ ಜಲದ ರೇಸಿಮೆಹಾಳೆ ಸೀಳಿ ಹಾಯುವ, ಹಾಗೆ ಹೀಗೆ ಹೇಗೋ ಹೊರಳಿ ಉರಿಯ ಚಿಮ್...

ಬೆಳಿಗ್ಗೆ ಪ್ರಗತಿಶೀಲರ ಸಭೆಯಲ್ಲಿ ಎಚ್ಚರಿಸಿದರು ಕವಿ : “ಬಾನು ಭೂಮಿ ಒಂದೆ ಸಮ, ಹಳ್ಳ ಕಡಲು ಒಂದೆ ಸಮ ಒಂದೆ ಸಮ ಒಂದೆ ಸಮ, ಕೊರಡು ಮರ ಒಂದೆ ಸಮ” ಗುಡುಗಿದರು ಕವಿ ಮಧ್ಯಾಹ್ನ ಮೈಸೂರಿನ ಕುಕ್ಕೂಟ ಸಭೆಯಲ್ಲಿ : “ವೈದಿಕ ಸಂಸ್ಕ...

ಎಲ್ಲ ಬಿಟ್ಟು ಇದು ಇಲ್ಲಿಗೆ ಬಂತೆ? ಅಕ್ಕಿ ತುಂಬ ಬರಿ ಕಲ್ಲಿನ ಸಂತೆ ಕಾಲ ಚಪ್ಪಲಿ ಕಿರೀಟವ ಜಾಗ ಬಯಸಿ ಕುರುಡುಬುದ್ದಿಗೆ ಕ್ರೌರ್‍ಯ ಪರಾಕು ಸಲ್ಲಿಸಿ ಹುದುಕಿಟ್ಟಿದೆ ನಿನ್ನ ಹಟ್ಟಿಗೊಂದು ಹೆಸರ ಎರಗುವ ಮಂಚೆ ಎರಚಲು ಮುಖಕ್ಕೆ ಕೆಸರ. ತಾಳಿಕೊ ಮರಿ ತ...

ದೀಪ ಹಚ್ಚಿ ಹೃದಯ ಬಿಚ್ಚಿ ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು : ಇವಗೊದಗಲಿ ಹಿರಿತನ ಮೇಲೇಳಲಿ ಮನೆತನ ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು. * * * ನೀ ಬಂದೆ ನಮ್ಮ ನಡುವೆ ನಿಂದೆ ಏನೇನೋ ನಿರೀಕ್ಷೆ ತಂದೆ. ನೀ ನಿಂತ ನೆಲ ಬೆಳೆ ಚ...

ಕಲ್ಲಿನಂತಿದ್ದ ಹಲ್ಲನ್ನು ಕಾಣದ ಕ್ರಿಮಿಗಳು ತಿಂದು ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು. ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ ನಿಂತರೆ ನೋವು, ಕೂತರೆ ನೋವು ಮುಖ ಬಾತು ಮೂತಿ ಕುಂಬಳಕಾಯಾಯಿತು. ಕಂಡ ಸ್ನೇಹಿತರೆಲ್ಲ ಕಷ್ಟಪಟ್ಟು ...

ಅರೆ ನಿದ್ದ ಅರೆ ಅರಿವು, ಮಂಪರು ದಾರಿ ಹಿಡಿದು ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ; ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ ಜನ ತಿಕ್ಕಲು ಕುಣಿತ; ಏನೇನೊ ನೋಡಿ ಏನೇನೊ ಹಾಡುವ ಕನಸ ಕೈಗಾರಿಕಾಶಾಲೆ; ಕಂಡದ್ದ ಕಲೆಸಿ ಕಾಣದ್ದ ಕಣ್ಣಿಗೆ ತೆರ...

ಬಾನು ಚುಕ್ಕಿಗಣ್ಣಿಂದ ಭೂಮಿಗೆ ಕಣ್ಣು ಹೊಡೆಯುತ್ತದೆ, ಮುಗಿಲ ಮಿದುಗೈಯಿಂದ ಗಿರಿಮೊಲೆ ಸವರುತ್ತದೆ, ಹಸಿರ ಪತ್ತಲ ನೇಯ್ದು ಮಳೆಸೂಜಿಯಿಂದ ನಲ್ಲೆಗೆ ಪ್ರೀತಿಯ ವಸ್ತ್ರ ಮೆಲ್ಲಗೆ ಹೊಚ್ಚುತ್ತದೆ. ಕೆರಳಿತೊ ಕೋಪ್, ಕೆಟ್ಟ ಬಿಸಿಲಾಗಿ ಉರಿದು ಅರಳಿತೊ ಪ್...

ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ: ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ ತಳ್ಳಿಬಿಡುತ್ತಾನೆ ದೈ...

ನೀ ಹುಟ್ಟಿದ್ದು ಇನ್ನೂ ಮೊನ್ನೆ ಎನ್ನುವಂತಿದೆ. ಪಿಳ ಪಿಳ ಕಣ್ಣು ಬಿಟ್ಟಿದ್ದು ಬುಳ ಬುಳ ಮೂತ್ರ ಬಿಟ್ಟಿದ್ದು ತಿಂಗಳು ಮುಂಚೆ ಹುಟ್ಟಿದ್ದೆಂದು ನಿನ್ನನ್ನ ನಾಲ್ಕು ದಿನ ದಪ್ಪ ಹತ್ತಿಯಲ್ಲಿ ಸುತ್ತಿಟ್ಟಿದ್ದು ಇನ್ನೂ ಕಣ್ಣಲ್ಲಿದೆ, ಪುಟ್ಟ ಕಂಠದಿಂದ ...

1...2021222324...49

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...