ಗುಪ್ತಗಾಮಿನಿ

ಅಲ್ಪ ನುಡಿಯಲ್ಲಿ ತತ್ವ ವಿಚಾರ ಪುರಾಣಗಳ ಪಠಣ, ನಿತ್ಯ ವಾಚನ ವಾಚಾಳಿತನವಿಲ್ಲ-ವಚನ ಬಲು ಭಾರ ಮಿತ ಭಾಷಿ ನಾನೆಂಬ ಕೀಟಕೊರೆತ-ಮೆದುಳು ಊತ ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ ಏರುವ ಮೊದಲು ಗದ್ದುಗೆ ನನಗಾರು...

ಬದಲಾಗಿದೆ ಕಾಲ

ಅಪ್ಪ, ನೆನಪಾಗಿದೆ ಈಗ ರಜೆಯ ಮಜಾ ಗೋತಾ ಮೂಲೆಯಲ್ಲೆಸೆದ ಪಾಟಿಚೀಲ ತಳಮಳ ಜೋತು ಬೀಳುವ ಹೆಗಲುಗಳ ನೆನೆದು ಸಮವಸ್ತ್ರ, ಬೂಟುಗಳ ಒಳಗೆ ಪೀಚಲು ಮತ್ತೆ ಅಪರೂಪಕ್ಕೆ ಟೊಣಪ ದೇಹದ ಸೈನಿಕರ ಕವಾಯತು ಮುಂಜಾನೆ ಇದೆಲ್ಲ...

ಕಾಂಡವಿಲ್ಲದ ಮೇಲೆ

ಅಗುಳಿ ಕಿತ್ತಿಹ ಕದಕೆ ರಕ್ಷೆ ನೀಡುವ ಧೈರ್ಯ ಎಲ್ಲಿಂದ ಬರಬಹುದು ಹೇಳು ಗೆಳೆಯ, ಕಂಡ ಕಂಡಲ್ಲೆಲ್ಲಾ ಕೊರೆದ ಕಾಂಡವ ಕಂಡೆ, ಮತ್ತೆ ಬುಡಮೇಲು ಮರದ ಸಹಿತ. ಮಾರುಮಾರಿಗೂ ಮಂದಿ ಸೇರಿಹರು ಜೋಡಿಸಲು ಮರಮುಟ್ಟು, ಒಣಸೀಳು...

ಮಾಸಲು ಸೀರೆ

ವಿರಕ್ತ ಲೋಕದ ಅಸಂಬದ್ಧ ಉಲಿತ ಉಳಿಯಿಂದ ತೂತು ಕೊರೆದಂತೆ ಖಾಲಿಯಾದ ನೇತ್ರದ್ವಯಗಳು ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ. ಸೀಳುನೋಟ ಬೀರುತ್ತಿದ್ದಾಳೆ ಆಕೆ ಬಾಗಿದ ಬೆನ್ನು ಸಹಕರಿಸುತ್ತಿಲ್ಲ, ಒಮ್ಮೆಲೆ ತಡಕಾಡುತ್ತಾಳೆ, ಜಾರಿದ ಚಾಳೀಸು ಜಾಗಕ್ಕೇರಿಸಲು: ನಿರ್ಜೀವ ಬಿಳಿಕೂದಲುಗಳು...

ಮಗುಚಲಾಗದ ಹಾಳೆ

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು ಇಣುಕುತ್ತಿವೆ ಗದ್ದೆ ಗುಳ್ಳೆಗಳು ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ ಹದುಳಿಂದ ಪಾದ ಊರುತ್ತ, ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ...

ಕಾಡುತ್ತವೆ ನೆನಪು

ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ ತನ್ನ ಕಾಡಿದ ಅದೇ ಬಾಲ್ಯದ ನೋವು ಇವರ ಕಾಡದಿರಲಿ ಎಂದು. ಕಾಡುತ್ತವೆ ನೆನಪು ನಿನ್ನೆ ನೆನೆಯಿಟ್ಟ ಕಾಳುಗಳು ಇಂದು...

ಆಸೆ

ನನ್ನ ಕನಸಿನ ಮೊಗ್ಗು ಬಾಡಿ ಹೋಗುವ ಮುನ್ನ ಕಟ್ಟಬೇಕಿದೆ ಮಾಲೆ ಪೋಣಿಸಿಟ್ಟು ಬದುಕ ಹಾಡಿನ ಭ್ರಮರ ಹಾರಿ ಹೋಗುವ ಮುನ್ನ ಬರೆಯಬೇಕಿದೆ ಸಾಲು ಕೂಡಿಸಿಟ್ಟು ಜೀವ ಜ್ಯೋತಿಯ ಎಣ್ಣೆ ತೀರಿಹೋಗುವ ಮುನ್ನ ಹೊಸೆಯಬೇಕಿದೆ ಬತ್ತಿ...

ಮಳೆ ಮತ್ತು ಮಗು

ಮಳೆ ಮಳೆ ಮುದ್ದು ಮಳೆನೀನು ಬಂದರಲ್ಲಾ ಕೊಳೆಯಾಕೆ ಬರುವೆ ಇಲ್ಲಿಗೆ?ಕೇಳಿತೊಂದು ಮಗುವುಸುರಿವ ವರ್ಷ ಧಾರೆಗೆ ಮುದ್ದು ಮಗುವೇ, ಕೇಳು ಇಲ್ಲಿನಾನು ಬರದೆ ಇದ್ದರಿಲ್ಲಿಎಲ್ಲ ಬರಡು ಚಿಗುರು ಕೊರಡುಅಂತೆ ಹಾಗೆ ಬರುವೆ ನಾನುಹನಿಸಿ ನೀರ ಬರಿಸಿ...

ಗೌಣ

ಮಾಮರದ ಚಿಗುರಲ್ಲಿ ರಾಗ ಮೂಡಿಸೋ ಪಿಕವೇ ಮಧುರ ನುಡಿಯಲಿ ನಿನ್ನ ರೂಪ ಗೌಣ ಸಿಹಿಯ ಸತ್ವದ ಹೊತ್ತ ಕರಿಯ ನೇರಳೆ ಹಣ್ಣೆ ರುಚಿಯ ನೆಪದಲ್ಲಿ ನಿನ್ನ ಬಣ್ಣ ಗೌಣ ಮೂರ್ತಿಯಾಗಲು ಬಲ್ಲ ಕರಿಯ ಕಲ್ಲಿನ...

ಕಾಲನ ಕರೆ

ಅತಿ ಜರೂರು ಕರೆ ಓಗೊಟ್ಟು ನಡೆಯಲೇ ಬೇಕು ದೂಡಲಾಗದು ಮುಂದೆ ಹೇಳಲಾಗದು ನೂರು ನೆಪ ಅವ ದೂರ್ತನೆಂದರೂ ಬದುಕಿಗೆ ಬಾರದಿರೆ ಸಾಕೆಂದರೂ ದುತ್ತೆಂದು ಹೆಗಲೇರಿ ತಳ್ಳಿ ಬಿಡುವ ಕೂಪಕ್ಕೆ ಮುಗ್ಧ ಎಸಳುಗಳ ಕೂಡ ಕೊಚ್ಚಿ...
cheap jordans|wholesale air max|wholesale jordans|wholesale jewelry|wholesale jerseys