ಹಳೆ ಪೇಪರ್‍
ಖಾಲಿ ಶೀಷೆಯವ
ಬೀದಿಯಲ್ಲಾ ಅಲೆದು
ಸುಸ್ತಾಗಿ ಸೇಂದಿ ಅಂಗಡಿ ಸೇರಿದ;
ಸೇಂದಿ ಶೀಷೆ ಖಾಲಿ ಮಾಡಿ
‘ಕೊನೆಗೂ ಖಾಲಿ ಶೀಷೆ
ಒಂದಾದರೂ ದಕ್ಕಿತಲ್ಲಾ’
ಎಂದು ಸಾಂತ್ವನಗೊಂಡ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)