ಇಂದು ಮುಂಜಾನೆ ಸೂರ್ಯ
ಮಂಜಿನ ಕ್ರೀಮು ಹಚ್ಚಿ, ತೆಳುಮೋಡದ ಸ್ಕ್ರೀನು ಮುಸುಕಿ ಹಾಕಿ
ಥೇಟ್ ಚಂದ್ರನಂತೆ ಕಾಣುತ್ತಿದ್ದ, ಕೆರೆಯೊಳಗಿನ ಅವನ ಪ್ರತಿಬಿಂಬ
ಹುಣ್ಣಿಮೆಯ ಚಂದ್ರನಂತೆಯೇ ಕಾಣುತ್ತಿತ್ತು.  ಆದರೆ
ಹತ್ತೇ ನಿಮಿಷದಲ್ಲಿ ಹತ್ತಿಕೊಂಡುರಿಯುವ ಅವನ ಮುಖ
ಎಲ್ಲರಿಗೂ ಕಂಡುಹೋಯಿತು.  ಆ ಉರಿಯುವ ಮುಖಕ್ಕೆ
ಯಾವ ಕ್ರೀಮು, ಯಾವ ಸ್ಕ್ರೀನು – ನೆಗೆದು ಬಿತ್ತು ಪಾಪ
ಸೂರ್ಯನ ಪ್ಲಾನು.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)