ಗಾಳ್ಯಾಗೆ ಹಾರ್‍ತಾವೆ ಅಂಗಿ | ಅವಕೆ
ಕೈ ಚಾಚಿ ನಿಂತೈತೆ ಅಂಗಿ
ಬಹುದಿನ ಬರಿಮೈಯಲಿದ್ದು| ಇದಕೆ
ಬೇಕಾತು ಮೈಮೇಲಿದ್ದದ್ದು

ಎಲ್ಲಾರು ನೋಡಲಿ ಎಂದು | ತಾನೂ
ಮೆರೆವಂಥ ಹಂಬಲ ಬಂದು
ಕೂಸಾಗಿ ಮಗುವಾಗಿ ಬೆಳೆದು | ಅತ್ತಿತ್ತ
ಓಡಾಡಿ ಅರಿವನ್ನು ತಳೆದು

ಬೆತ್ತಲೆ ಇರಲಿಕ್ಕೆ ನಾಚೀ | ಈ ಹುಡುಗ
ಸುತ್ತಲು ನೋಡ್ಯಾನೆ ಚಾಚಿ
ಅಲ್ಲೊಂದು ಇಲ್ಲೊಂದು ಅಂಗಿ | ಮೇಲೆ
ಹಾರ್‍ತಾವೆ ಕಣ್ಮನ ನುಂಗಿ

ಅದು ಬೇಡ ಇದು ಬೇಕು ಅಂತಾ | ಈ ಹುಡುಗ
ಅಂಗೀನೆ ತೊಡಲೆ ಬೇಕಂತಾ
ಆಶೆಯ ಮಾಡ್ತಾನೆ ಸುಳ್ಳೆ| ಅವುಗಳ
ಮತ್ತೇ ಬರಿಮೈಯಿ ಮುಳ್ಳೆ

ಆಕಾಶ್ದಾಗಿರುವಂಥ ಅಂಗೀ | ಇಳಿದೂ
ಯಾಕಾದ್ರೂ ಬರುವೊಲ್ವೆ ತಂಗೀ
ಭಯವೆಂಬ ನಯವೆಂಬ ಒತ್ತು | ಸೋಲೆಂಬ
ಕುಂದೆಂಬ ಕೊರತೆಂಬ ಕುತ್ತು

ಚಳಿಬಂದು ನಡುಗಿಸಿ ಮೈಯಾ | ನಡುಗುವ
ಬಾಲಾಗೆ ಅಂಗಿಯು ಮಾಯಾ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)