(ರಸಭರಿತ ಕಾವ್ಯ)
ಸತ್ಯವಿದು! ಸೌಂದರ್‍ಯ ದಾರಿಯಾ| ಬೀಡಲೀ|
ಸತ್ಯದಲಿ| ಮೂಡಿಹುದು| ಜೋಗದಾ| ಜಲಪಾತ |
ಕಾಡದಾ| ಗಿರಿಯಲೀ| ದಡದಢನೆ| ಹರಿಯುತಲಿ|
ಧುಡುಕುವದು| ಜಲಪಾತವಿದು || ೧ ||
ಪ್ರಯಣದಾ| ರಸಿಕರಿಗೇ| ಪ್ರಾಣದಾ| ಜ್ಯೋತಿಯೋ|
ಕಾಣದಲಿ| ಹರಿಯುವದು| ಎಲ್ಲಿಂದೋ| ಜಲಪಾತ |
ಹೊಣೆಯಿದು| ಹೊತ್ತಿಹದು| ದೇವನಾ| ಉಡಿಯಲ್ಲೀ|
ಅಂತೆಯೇ| ನಿರ್‍ಮಿಸಿದ| ನವ || ೨ ||
ಘನಗೋರ| ಎತ್ತರದ| ಗಿರಿಯದಾ| ಒಡಲಲ್ಲೀ|
ಕಾನನದ| ದಾರಿಯನು| ಸುತ್ತುತಾ| ಬೀಳುವದು|
ಘನಗೋರ| ಶಬ್ದವೋ| ಕಿವಿಗಳಲಿ| ತುಂಬುವದು|
ಅಪ್ಪಳಿಸಿ| ಭೂಮಿಗೆ| ಬರಲು || ೩ ||
ಸಪ್ತವರ್‍ಣ| ಮೂಡುವದು| ಮಧ್ಯದಾ| ಜಲದಲ್ಲೀ|
ಗುಪ್ತವಿದು| ರಾತ್ರಿಯಲಿ| ಮತ್ತೇನು| ನೋಡಲ್|
ವ್ಯಾಪ್ತಿಯು| ಹರಡಿಹದು| ಲೋಕಕೇ| ಸೌಂದರ್‍ಯ|
ಜಲಪಾತ| ಹೃದಯವೋ || ೪ ||
ಪಂಚಹರಿ| ಹರಿಯುವವು| ಪಂಚದಿಶೇ ಗಳಲಲ್ಲೀ|
ಹಂಚಿಹರಿ| ದೋಗುವದು| ನಾಮಗಳ| ಶಬ್ದದಲಿ|
ಹೊಂಚುವಿದು| ಹಾಕುವದು| ಮನಜನಾ| ಒಪ್ಪಿಲ್ಲಾ|
ಅಂತೆಯೇ ಇದರಲ್ಲಿಯೋ || ೫ ||
ನಮನಮೋ| ಶರಾವತಿ| ಬರುವೆನಾಂ| ಮತ್ತೊಮ್ಮೆ|
ನಿಮಿಸುವದು| ಈಲೋಕ| ಶಾಶ್ವದಿ| ನಿನ್ನಲ್ಲೀ|
ನಮಗೇನು| ಕೊಡದರೂ| ಮೆಚ್ಚಿದೆವು| ಸೌಂದರ್‍ಯ|
ಶಾಶ್ವತ! ಯುಗದಿಇರುವೇ || ೬ ||
*****








