ಗೆಳತೀ ಹನಿಗೂಡಿದರ್ಹಳ್ಳ ||ಪ||
ಹನಿಹನಿ ಗೂಡಿದರ್ಹಳ್ಳ, ತೆನತೆನಿ ಗೂಡಿದರ ರಾಸಿ
ಮನಕ ಮನಗೂಡಿದರೆ, ಮನಿಮಾರ ಗೆಳತಿ ||ಅ.ಪ.||
* ಹರಿಯ ಹೊತ್ತಿಲೆದ್ದು, ಅತ್ತಿ ಮಾವಗ ಶರಣ
ಮತ್ತೊಂದು ಶರಣ ಗುರುವೀಗೆ | ಗೆ | ನಾಮಾಡಿ
ಹೊಕ್ಕಿನಿ ಮನಿಯ ದಗದಕ | ಗೆ | ೧
ಕಲ್ಲೀಗಿ ಮುಕ್ಹಾಕಿ, ಬಲ್ಲಿದರ ನೆನದೇವ
ಸೊಲ್ಲ ಕೇಳಾಕ ಶಿವ ಬಂದ | ಗೆ | ಮ್ಯಾಗಿರುವ
ಮುಕ್ಕಣ್ಣ ಮನಸ ನೋಡಾಕ | ಗೆ | ೨
ಸಂಸಾರವೆಂಬೂದು, ಸಾಗರ ಹೊಳೆಯವ್ವ
ಈಸ ಬಲ್ಲವಗ ಎದೆಯುದ್ಧ | ಗೆ | ಗಿಳಿರಾಮ
ಓದಬಲ್ಲವಗ ಕೈಲಾಸ | ಗೆ | ೩
ಸತಿಪತಿ ಇದ್ದರ, ಹಿತವಂತರಿರಬೇಕ
ಕುಂಬಾರ್ಹುಳದಂಗ ಸಂಸಾರ | ಗೆ | ಸಾಗಿದರ
ಮುಂದೈತೆ ತಂಗಿ ಕೈಲಾಸ | ಗೆ | ೪
ಹೆಣ್ಣಿನ ಈ ಜಲುಮ, ಸಣ್ಣ ಮಾಡಲಿಬೇಕ
ಸುಣ್ಹರಳ ಮಾಡಿ ಸುಡಬೇಕ | ಗೆ | ಈ ಜನುಮ
ಮಣ್ಮಾಡಿ ಮರ್ತೆ ಗೆದಿಬೇಕ | ಗೆ | ೫
ಸಂಸಾರ ದಂದುಗ, ಹಿಂಗದೊ ಶಿವರಾಯ
ಹಿಂಗುದಕ ಹಾದಿ ಶರಣರದ | ಗೆ | ತಿಳಕೊಂಡು
ಗೆದಿಬೇಕ ಇದ್ದು ಸಂಸಾರ | ಗೆ |
*****
*ಹರಿಯಾಗ ಏಳುತಲಿ ಹರಧ್ಯಾನ ಗುರುಧ್ಯಾನ
ಅಂಬಲಿದಾನ ಶಿವದಾನ | ಗೆಳತಿ | ಗುರುಕೊಟ್ಟ
ಲಿಂಗದ ಧ್ಯಾನ ಹಗಲಿರುಳು | ಗೆಳತಿ |

















