ಜೀವನವೊಂದು… ಸ್ಮಶಾನಸಮಾನ
ನಡೆಯುವ ಬಾಳು ಕೆಲಕ್ಷಣ
ಚಿಂತನೆಯಲಿ ಚಿರಹೋರಾಟ
ಚಿತೆಯಲಿ ಬಾಳಿನ ಪರ್ಯಟನ

ಬಯಸುವದೆ ಒಂದು
ನಡೆಯುವದೆ ಇನ್ನೊಂದು
ಸಂಘರ್ಷಣೆಯಲಿ ಸಡಿಲಾಗುವ
ಅನಿಶ್ಚಿತ ಬದುಕಿಗೆ ಚಿರ ಹೋರಾಟ

ದ್ವೇಷ-ಅಸೂಯೆಗಳ ಅಬ್ಬರದಿ
ಸ್ವಾರ್ಥತೆಯ ಪರಮಾವಧಿ
ಮಸಕದಿ ಮುಳಗಿ ಮೇಲೆಳದೆ
ಮರೆಯಾಗುವ ಮೂರು-ದಿನದ

ಮೂರಾಬಟ್ಟೆ ಮುರುಕುಬಾಳಿಗೆ
ಆಶೆ-ಅಸೂಯೆ-ಬೇಕೆ?
ದಮನ-ದಳ್ಳುರಿ-ಏಕೆ?
ಸ್ವಾರ್ಥಸೌಧ ಬೇಕೆ?

***