ಐಸುರ ಮೋರುಮ ದಸರೆಕ                  ||ಪ.||

ವಾಸುಮತಿಯು ಆಡಿದವು ಅಲಾವಿಯ
ಮಹಾಶಕ್ತಿ ಪೂಜಿಸ್ಯಾಡುತ                  ||ಅ.ಪ||

ಜಾರತ ಕರ್ಮದ ವಾರಕ್ಕ
ಸಾರುತಿಹುದು ಸರ್ವರಿಗೆ ವಿಲಾಸದಿ
ಮೂರು ತಾರಕಿ ಕಿರಣದೊಳಗೆ                ||೧||

ಭಾರತ ಪುರಾಣ ಪಸರಕ್ಕೆ
ಪಾರಾದಿತು ಪರತೋಷ ಕತ್ತಲದಿನ
ಪೀರ ಪೈಗಂಬರ ಮಾರನೋಮಿ           ||೨||

ಹೀಗಾಯ್ತೋ ಕರ್ಬಲ ಸರಸಕ್ಕ
ಆಗ ಮೋದಲು ನೋಡುವದು ಕಿತಾಬದಿ
ಶೀಗಿಹುಣ್ಣಿವಿಗಿದು ಶೀಘ್ರದಿಂದ             ||೩||

ಬನ್ನಿಯ ಗಿಡದೊಳು ರನ್ನದಿ
ತನ್ನ ಶರಗಳಿಟ್ಟಂಥ ಧನಂಜಯ
ಮನ್ನಿಸಿ ಯಮನಾ ತೀರದೊಳಗೆ           ||೪||

ಹದಿನೆಂಟು ಜಾತಿಯ ಸದನಕ್ಕ
ನಜರಿಟ್ಟು ನಿಜ ಜ್ಞಾನದಿ ನೋಡಿಕೋ
ಕದನಹಚ್ಚಿ ಕಡಿದಾಡುವದಿದು           ||೫||

ಕಾತೂನರಾತ್ಮ ಜನಿಸರಕ್ಕ
ಭೂತಳದಲಿ ಶಿಶುನಾಳ ಶಾಹಿರತ್
ನೀ ತಿಳಿ ಕವಿತಾನಂದ ಕಲಿಗೆ           ||೬||

*****