ಐಸುರ ಮೋರುಮದಾಟ
ಹೇಸಿ ತಗಿ ನಿನ್ನ ಪಾಠ                ||ಪ||

ಒಂದು ಬೀಜ ಅಕ್ಷರವನರಿಯದೆ
ಮಂದಿಯೊಳು ಬಹು ಜಾಣನೆನಸಿ
ನಿಂದೆಗುಣ ನಿಜಾತ್ಮನರಿಯದೆ
ಹಂದಿ ಜಲ್ಮಕೆ ಬಿದ್ದಿ ತಮ್ಮಾ             ||೧||

ಕತ್ತಲ ಶಹಾದತ್ತು ಹ್ಯಾಂಗೋ
ಛೇ ಮತಿಹೀನ ಹೋಗೋ
ಪಥಕೆ ಮುಟ್ಟದ ಶಾಸ್ತ್ರಕವಿಗಳು
ನೆನಸಿದರೆ ಫಲವೇನು ಇದರೊಳು
ಗತಿಗೆ ಹೊಂದದ ಗರ್ವ  ಯಾತಕ
ಆತಿ ನಯದಿ ಮಾತಾಡಬೇಡ               ||೨||

ಶಿಶುನಾಳಧೀಶನ ಕವಿಯ ನೋಡಿ
ಬಂದು ಆಡೋ ಅಲಾವಿ
ವಸುಧಿಯೊಳು ಬಹು ಜಾಣನೆನಸಿ
ಹೊಸ ರಿವಾಯತ ಹೇಳೋ ಎಣಸಿ
ಹಸನವಲ್ಲದು ಬ್ಯಾಡ ನಡಿ ನಡಿ
ಕಲಿಯುಗದೊಳಗಾದೆಯೋ ಹೇಸಿ            ||೩||

*****