ಮಾತು ಎಂಬ ಎರಡಕ್ಷರ
ಜನ್ಮಾಂತರಗಳ ನಿಲುವು
ಅಮ್ಮಾ ಎಂಬ ಭಾವ
ಮಮತಾಮಯಿ ಕರುಳ ಬಳ್ಳಿ ಸ್ವರೂಪ||

ನಮ್ಮ ಮಾತು ಭಾವನೆಯಂಗಳದೆ
ಬೆರೆತಂತೆ ಜೀವನಾಡಿ
ಸ್ವರ ಸಪ್ತಸ್ವರ ನಾದ ಜನುಮ
ಓಂಕಾರ ರಾಕಾರ ಶಕ್ತಿ ಸ್ವರೂಪ||

ಮಾತು ಎಂಬ ಎರಡಕ್ಷರ
ಅಲಂಕಾರ ಸದ್ ಗುಣಾಲೀಲ
ಮನಸಾ ಕಣಕಣ ಝೇಂಕಾರ
ನುಡಿ ಪೂರ್‍ಣ ಪರಿಪೂರ್‍ಣ
ಊರ್‍ತ ರೂಪಾತೀತ ಸ್ವರೂಪ||

ಮಾತು ಎಂಬ ಎರಡಕ್ಷರ
ಯೋಗ ರೂಪ ಭೋಗ ರೂಪ
ರೂಪಾಂತರ ಜಾಗತೀಕ ಐಕ್ಯ
ಮಂತ್ರ ತಂತ್ರ ಸರ್‍ವಶಕ್ತಿ
ಗಣಾತೀತ ಅಂದ ಚೆಂದನ ಸ್ವರೂಪ||

ಮಾತು ಎಂಬ ಎರಡಕ್ಷರ
ಹಾಸ್ಯ ದಾಸ್ಯ ಲಲಾಟ
ಸಂಘರ್‍ಷ ನವರಸ ಪಾನ
ಸಂಕಲ್ಪ ಆತ್ಮಾಧೀನ ಮೌನ
ಕಲೆ ಕುಂಚ ಚಿತ್ತಾರ ಸ್ವರೂಪ||

ಮಾತು ಎಂಬ ಎರಡಕ್ಷರ
ನ್ಯಾಯತೀತ ಆತೀತ ಧರ್‍ಮ
ಕರ್‍ಮ ಮರ್‍ಮ ಭೇದ ವರ್‍ಣ
ಛಾಯಾ ರೂಪ ಗಣ ರಂಗ
ಮಂದಾರ ಧೈವ ಶಕ್ತಿ ಸ್ವರೂಪ||
*****