ನಿನ್ನೆ ಆಗುವ ನಾಳೆಗಳು

ನಾಳೆ ಎಂಬ ನಾನು
ಸೇರಿ ಹೋಗುವೆನು
ನೂರ್ಕೋಟಿ ನಿನ್ನೆಗಳಲ್ಲಿ
ನನ್ನತನ ವಿಲ್ಲದೇ !

ನಿನ್ನೆ ಆಶಾವಾದಿ,ನಾಳೆ ಸುಖವಿಹುದು
ಬೆಳಗು ಹರಿದಾಗ ಬಟಾಬಯಲು
ಅದು ತಿರುಕನ ಕನಸು!

ನಿನ್ನೆ ನಿರಾಶೆಯ,ಕಾರ್ಮೋಡ
ಬೆಳಗು ಹರಿಯಿತು ನೋಡು,
ನನ್ನ ಸಾವಿರಾರು ನಾಳೆ ಗಳೂ
ನನ್ನ ನಿನ್ನೆಗಳೇ!

ಬರೀ ಅಂಕೆಗಳು, ಸಂಖ್ಯೆಗಳು
ಸಂಕಲನವಿಲ್ಲದ ಗಣಿತ ಸೂತ್ತಗಳು!
ನಸುನಕ್ಕೆ ಧುತ್ತೆಂದು ಕಣ್ಮುಂದೆ
ಯಾರೆಂದೆ ? ’ಇಂದು’ ನಾನು!

ನಾಚಿ ನೀರಾದ ಸರದಿ ನಂದು!!
*****

ಕೀಲಿಕರಣ : ಗೋನವಾರ ಕಿಶನ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಡ ಬಿಡಬೇಕಲ್ಲ
Next post ಗೋಕಾಕ್ ವರದಿ – ೨

ಸಣ್ಣ ಕತೆ