ಸಮುದ್ರ ದಡದ ಮೇಲೆ ಒಂದು ಆಮೆ ಮಲಗಿತ್ತು. ಅವಶ್ಯಕತೆ ಇಲ್ಲೆಂದು ತನ್ನ ಕೈಕಾಲು, ತಲೆಯನ್ನು ಚಿಪ್ಪಿನೊಳೊಗೆ ಎಳೆದುಕೊಂಡು ಕಲ್ಲಂತೆ ಮರಳ ಮೇಲೆ ಕುಳಿತಿತ್ತು. ದಡದ ಮೇಲೆ ಓಡಾಡುತ್ತಿದ್ದ ಒಬ್ಬ ಮನುಷ್ಯ ಕಲ್ಲು ಬಂಡೆಯಂತೆ ಮಲಗಿದ್ದ ಆಮೆಯನ್ನು ನೋಡಿ ನಕ್ಕ. ಮೆತ್ತಗೆ ತಲೆ ಹೊರತಂದು ಆಮೆ ಹೇಳಿತು- “ನನಗೆ ಬೇಕಾದಾಗ ಮಾತ್ರ ನನ್ನ ಇಂದ್ರಿಯಗಳನ್ನು ಉಪಯೋಗಿಸಿ, ನನ್ನ ನಿಗ್ರಹಿಸಿಕೊಳ್ಳುವೆ. ನೀನು ನಿನ್ನ ಕೈ, ಕಾಲು, ತಲೆ, ಏಕೆ ನಿನ್ನ ಮನವನ್ನಾದರು ನಿಗ್ರಹದಲ್ಲಿ ಇಟ್ಟು ಕೊಳ್ಳಬಲ್ಲೆಯಾ?” ಎಂದಿತು. ಮನುಷ್ಯ ಆಮೆಯ ಮಾತಿಗೆ ನಿರುತ್ತರನಾದ.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)