Home / ಕವನ / ಕವಿತೆ / ಬಂದಿತು ಬರಬಹುದು

ಬಂದಿತು ಬರಬಹುದು

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ
ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ ||

ಬಂದು ಕಲ್ಕಿ‌ಅವತಾರ ಸೀಮಿಗೆ
ಮು೦ದುವರಿದು ಯಮರಾಜನ ಕೊಲೆಗಳ
ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.||

ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ ಮಳಿ-ಬೆಳಿ
ಉತ್ತಮವೆನಿಸಿ ಉತ್ತರಕೆ ಕಡೆಮೊದಲು ತೂಗುತ
ಶ್ಯಾರ ವಿಜಾಪುರ ಉಕ್ಕಲಿ ದನಗಳ ನೋಡುತ
ಮನದೊಳು ಕಷ್ಟಗೊಳ್ಳುತ ಕಳವಳಗೊಳ್ಳುತ
ಘೋರವಾಗಿ ಮಹಾಮುಂಬೈಯೊಳು
ಏರಿಗಟ್ಟ ಯ೦ತ್ರದ ಗಿರಣಿಗಳು
ಮಾರಿಕಾಗಿ ಮೈ ಬಣ್ಣದ ಗುಳ್ಳೆಗಳಗೆ
ಕಳ್ಳಜನರು ನಷ್ಟಾದರು ಸಖಿಯೆ ||೧||

ಆರು ಮೂರು ಒಂಭತ್ತು ಲಕ್ಷ ಜನ
ತೀರುತ ಸಾರಿದ ಲಕ್ಷ ಮೂರರೊಳು
ಮೀರಿ ಉಳಿದರು ಸಾವಕಾರ ತಾ
ಘೋರವಾಗಿ ಬೆಳಗಾವಿಗೆ ಜಾಹೀರ ಮುಟ್ಟುತಾ
ಜನನ ಮರಣ ಸಂಖ್ಯೆ
ಜನರಿಗೆ ವಿಪರೀತ ತೋರುತಾ
ಸುಟ್ಟುಹೋತು ರಂಗಮಾಲು ಕುಂಬಾರದೊರಿ
ಎಂಟು ಲಕ್ಷದ್ದಿತ್ತಿ ಮಹಾಲಕರಿ
ಕೋಟಿ ಜಲ್ಮವ ದಾಟಿ
ಉಳವಿ ಶಿವಶರಣರಾಗಿ ಮರ್ತ್ಯಕ್ಕೆ ಶಿಕ್ಷಿಸುತಾ ||೨||

ಪ್ಯಾಟಿ ಪಟ್ಟಣಾ ಹುಬ್ಬಳ್ಳಿ ಜನರೊಡ ತಾ
ದನಕರ ಗೋಳಿಡುತಾ
ದುಡ್ಡಿಗೆ ಮೂರು ಮಾತಾಡುತಾ
ನೀಟವಾಗಿ ಮಲ್ಲಾಡ ಬೆಳವಲಕೆ ಓಡುತಾ
ಮೈಸೂರಸೀಮಿ ಸೇರಿ ಷಣ್ಮುಖ ಆವತಾರ ತೋರುತಾ
ಸಾಧಿಸುತ ವಿಳಂಬಿ ಸಂವತ್ಸರ ಕೂಡುತಾ
ಇಳೆಯೊಳು ಸಜ್ಜನರು ಕಳವಳಗೊಳ್ಳುತಾ ನಿಜಪಾಡುತಾ
ಸಾಧುಸಂತರು ಯಮನಾಲಯ ಮೀರಿ
ಬೋಧಿಸಿದರು ಪರಮಾತ್ಮನ ಲೀಲಾ
ಚೋದ್ಯವಾಯಿತು ಅಮರಾರಿಪುರುರಿಗೆ || ೩ ||

ವೀರ್ಯದೊಳು ವಿಕಾರಿ ಸಂವತ್ಸರ ಗಾವುದಕೆ ನಿಂದಿಸಿ
ಗಾರುಗೊಂಡು ಮನಿ ಮನಿ ಗಾವುದಕೆ ಹೊಂದಿಸಿ
ಸಾರಿ ಹೇಳತೇನಿ ಮೂರು ಸಂವತ್ಸರ ಕೂಡಿಸಿ
ಇದರೊಳು ತಪ್ಪು ಆದರೆ ಗುರುಗೋವಿಂದನ ಸಾಕ್ಷಿ
ಧರೆಯೊಳು ಶಿಶುನಾಳ ಗುರುಪುತ್ರ ಕವಿಗೆ
ಸರಿಯಾಯಿತು ಕಾಲಜ್ಞಾನ ಸೂಚನದ ಭವಿ
ಮರೆಯಲಾರೆ ಸಂಸಾರದ ಸವಿ
ಗುರುಮೂರ್ತಿ ಶಶಿಯಂಬುಜಮುಖಿಯೆ || ೪ ||
*****

 

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...