ಮುದ್ದು ಮರಿ ನಾಯಿ ಮರಿ ಬೇಗ ಬೇಗ ಹಾಲು ಕುಡಿ ಅಪ್ಪ ಬಂದ್ರೆ ಪೇಟೆಯಿಂದ ಕ್ಯುಂ ಕ್ಯುಂ ರಾಗ ತೆಗಿ ನಿನಗೆ ನೋಡು ಬಿಸ್ಕೇಟು ನನಗೆ ಮಾತ್ರ ಚಾಕ್ಲೇಟು ಅಮ್ಮ ಬಂದ್ಲು ನೋಡು ಸುಮ್ಮನವಳ ಕಾಡು ಕೊಡುವಳು ನಿಂಗೆ ತಿಂಡಿ ಜೋರಾಗಿ ಕಿವಿಯನು ಹಿಂಡಿ. *****...

ಬಾನಂಗಳದಲಿ ಹಾರುವ ಹಕ್ಕಿಗೆ ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ ನಿರ್ಭಂಧಗಳಾಚೆ ತಂಬೆಲರ ತಾಣ. ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ ಹಗುರವಾಗುತ್ತಿದ್ದಾಳೆ ಅವಳು ಇಷ್...

ಹುಲ್ಲು ಕಡ್ಡಿ ಗೂಡು ಕಟ್ಟಿ ಹಕ್ಕಿ ಕಾಯುವುದು ನಾಳೆಗೆ ಕಾಳುಗಳನು ಹೆಕ್ಕಿ ತಂದು ಅಳಿಲು ಕಾಯುವುದು ನಾಳೆಗೆ ಎಲೆಯುದುರಿಸಿ ಚಳಿಯಲ್ಲಿ ಮರ ಕಾಯುವುದು ನಾಳೆಗೆ ನೆಲ ಉತ್ತು ಬೀಜ ಬಿತ್ತಿ ರೈತ ಕಾಯುವುದು ನಾಳೆಗೆ ಬಾವಿ ಕಟ್ಟೆ ಸುತ್ತ ನಿಂತು ಏನು ಗುಸ...

ಕ್ರೀಡೆಯ ಅತ್ಯುನ್ನತ ವಿಶಿಷ್ಟ ಸಾಧನೆಗೆ ನೀಡಲಾಗುವ ಭವ್ಯ ಭಾರತದ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿಯಾದ ರಾಜೀವ್‌ಗಾಂಧಿ ಖೇಲಾ ರತ್ನ ಪ್ರಶಸ್ತಿಗೆ ಹೈದ್ರಾಬಾದಿನ ಟೆನಿಸ್ ಆಟಗಾರ್‍ತಿ ಸಾನಿಯಾ ಮಿರ್‍ಜಾ ಭಾಜನರಾಗಿರುವುದು ಇಡೀ ದೇಶಕ್ಕೆ ಸಂದ ಗೌರವವಾಗ...

ಅಡವಿಯನ್ನಿ ಮರನೆ ಗಿಡವ ಬನ್ನಿ ಮರನೆ ಅಡವ್ಯಾಗೆ ಇರುವಂಥ ಸಾರಂಗ ಸರದೂಳಿ ಹೆಬ್ಬುಽಲಿ ಹುಲಿಕರಡಿ ಎಡಬಲ ಹಾಂವುತೇಳೋ ದೇವಾ| ಎನ್ನ ಮೇಲಾಡಿ ಶ್ರೀಗಂಗೀನ ತಂದಿ| ಎನ್ನ ತಪ್ಪೇನು ಕಂಡಿ ||೧|| ಪಟ್ಟಣದ ದಾರಿ ಮ್ಯಾಲ ಹಿಟ್ಟಗಳ್ಲಿನ ಮ್ಯಾಲ ಕತ್ತಿಽಯ ವರಿಯ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...